'ದುಪ್ಪಟ್ಟ ಆಕಸ್ಮಿಕವಾಗಿ ಎಳೆದು ಬಂತು: ಕ್ಷಮೆಯೂ ಕೇಳೋದಿಲ್ಲ, ಪಶ್ಚಾತ್ತಾಪವೂ ನನಗಿಲ್ಲ'

ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರ ಮೇಲೆ ಅಬ್ಬರಿಸಿ ಬೊಬ್ಬಿರಿದು ಮೈಕ್ ಕಿತ್ತುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ತಾವು ಕ್ಷಮೆಯೂ ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರ ಮೇಲೆ ಅಬ್ಬರಿಸಿ ಬೊಬ್ಬಿರಿದು ಮೈಕ್ ಕಿತ್ತುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ತಾವು ಕ್ಷಮೆಯೂ ಕೇಳುವುದಿಲ್ಲ, ತಾವು ಮಾಡಿದ್ದಕ್ಕೆ ಪಶ್ಚತ್ತಾಪವೂ ಇಲ್ಲ ಎಂದು ಹೇಳಿದ್ದಾರೆ.
ಆಕೆ ನನ್ನ ತಂಗಿ ಇದ್ದಂತೆ, ಅದೊಂದು ಆಕಸ್ಮಿಕ ಘಟನೆಯಷ್ಟೇ ದುರ್ವರ್ತನೆ ಅಲ್ಲ, ಆಕೆಯನ್ನು ನಾನು ಕಳೆದ 15 ವರ್ಷಗಳಿಂದ ಬಲ್ಲೆ, ಅದು ಮುಗಿದ ವಿಷಯ ಎಂದು ಹೇಳಿ ಸಿದ್ದರಾಮಯ್ಯ ಕೈತೊಳೆದುಕೊಂಡಿದ್ದಾರೆ.
ಮಹಿಳೆ ಸುಮ್ಮನಿದ್ದಾಳೆ, ಆದರೆ ಬಿಜೆಪಿ ಮತ್ತು ಮಾಧ್ಯಮದವರು ಸುಮ್ಮನಾಗಿಲ್ಲ, ದೊಡ್ಡ ಡೀಲ್ ರೀತಿ ಆಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ಇನ್ನೂ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಅದು ಮುಗಿದ ವಿಷಯ ಎಂದು ಹೇಳಿದ್ದಾರೆ,
ಇನ್ನೂ ಬಿಜೆಪಿಯವರು ಸಿದ್ದರಾಮಯ್ಯ ದುಶ್ಯಾಸನ ಎಂಬ ಹೇಳಿಕೆಗೆ ಇಬ್ಬರು ನಾಯಕರು ಪ್ರತಿಕ್ರಿಯಿಸಿದ್ದು, ಮೈಕ್ ಕಿತ್ತುಕೊಳ್ಳುವ ವೇಳೆ ಆಕಸ್ಮಿಕವಾಗಿ ದುಪ್ಪಟ್ಟ ಎಳೆದು ಬಂತು ಸ್ಪಷ್ಟನೆ ನೀಡಿದ್ದಾರೆ. 
ವಿಷಯಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಮುಂದಾಗಿದ್ದರೂ, ಚಳುವಳಿಗಾರರೂ ಸುಮ್ಮನಾಗುತ್ಕಿಲ್ಲ,  ಸಿದ್ದರಾಮಯ್ಯ ವಿರುದ್ಧ ಒಬ್ಬರು ಈಗಾಗಲೇ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿ ಈ ರೀತಿ ದುರ್ವರ್ತನೆ ತೋರುವುದು ಎಷ್ಟು ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಒಬ್ಬ ಜನಪ್ರತಿನಿಧಿ ಒಪ್ಪಿಕೊಳ್ಳುತ್ತೇವೆ ,ಆದರೆ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ಆಕ್ರೋಶ ತೋರಿ, ಆಕೆ ಬಳಿ ಮೈಕ್ ಕಿತ್ತುಕೊಂಡಿದ್ದಾರೆ,  ಒಬ್ಬ ಜನಪ್ರತಿನಿಧಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತಿಳಿದಿಲ್ಲವೆ, ಈ ಎಲ್ಲಾ ಘಟನೆಯನ್ನು ಅಲ್ಲಿದ್ದ ಎಲ್ಲಾ ಮಂದಿ ಮೂಕ ಪ್ರೇಕ್ಷಕರಾಗಿ ಕುಳಿತು ನೋಡುತ್ತಿದ್ದರು, ಅಧಿಕಾರದ ಮದದಿಂದಾಗಿ ಈ ರೀತಿಯ ದರ್ಪದ ನಡವಳಿಕೆ ಸರಿಯಲ್ಲ ಎಂದು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಬೃಂದಾ  ಅಡಿಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸಿದ್ದರಾಮಯ್ಯ ಆಕೆ ತಮ್ಮ ಸಹೋದರಿ ಎಂದು ಹೇಳಿದ್ದಾರೆ, ಆದರೆ ಸಹೋದರರು ಕೂಡ ತಮ್ಮ ಸಹೋದರಿಯರ ಜೊತೆ ಆ ರೀತಿ ವರ್ತಿಸುಪುದಿಲ್ಲ ಎಂದು ಹೇಳಿದ್ದಾರೆ, ಚುನಾಯಿತ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಈ ದುರ್ವರ್ತನೆ ತೋರಿದರೇ ಮಹಿಳೆಯರೂ ಕೂಡ ತಮ್ಮ ಧ್ವನಿ ಎತ್ತಬೇಕಾಗುತ್ತದೆ, ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com