ಮುಂಬಯಿ ಹೋಟೆಲ್ ಬಳಿ ಹೈಡ್ರಾಮಾ: ಡಿಕೆ ಶಿವಕುಮಾರ್ ಗೆ ನೋ ಎಂಟ್ರಿ; ಒಳಗೆ ಬಿಡದೆ ಗೇಟ್ ನಲ್ಲೇ ತಡೆದ ಪೊಲೀಸರು

ಸಮ್ಮಿಶ್ರ ಸರ್ಕಾರದ ಕಾರ್ಯ ವೈಖರಿಗೆ ಬೇಸತ್ತು ರಾಜಿನಾಮೆ ನೀಡಿ ಮುಂಬಯಿಯಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಮನವೊಲಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್..
ಮುಂಬಯಿ ಹೊಟೇಲ್ ಬಳಿ ಶಿವಕುಮಾರ್
ಮುಂಬಯಿ ಹೊಟೇಲ್ ಬಳಿ ಶಿವಕುಮಾರ್
ಮುಂಬಯಿ: ಸಮ್ಮಿಶ್ರ ಸರ್ಕಾರದ ಕಾರ್ಯ ವೈಖರಿಗೆ ಬೇಸತ್ತು ರಾಜಿನಾಮೆ ನೀಡಿ ಮುಂಬಯಿಯಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಮನವೊಲಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ, ಹೀಗಾಗಿ ಅತೃಪ್ತ ಶಾಸಕರು ಇರುವ ಮುಂಬಯಿಯ ರಿನೈಸೆನ್ಸ್ ಹೋಟೆಲ್ ಗೆ ಆಗಮಿಸಿದ್ದಾರೆ.
ಆದರೆ ಅತೃಪ್ತ ಶಾಸಕರು ತಂಗಿರುವ ಹೋಟೆಲ್ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಿದ್ದು, ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದಾರೆ.
ನಮ್ಮ ಶಾಸಕರು ತಂಗಿರುವ ಹೋಟೆಲ್​ಗೆ ಮುಂಬೈ ಪೊಲೀಸ್​ ಮತ್ತು ಇತರೆ ಯಾವುದೇ ಪಡೆಯನ್ನು ನಿಯೋಜನೆ ಮಾಡಲಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದಿಲ್ಲ. ನಾವು ನಮ್ಮ ಸ್ನೇಹಿತರನ್ನು ಭೇಟಿ ಮಾಡಿ ನಮ್ಮ ಕೆಲಸ ಮಾಡಿಕೊಳ್ಳಲು ಬಂದಿದ್ದೇವೆ, ಆದರೆ ಪೊಲೀಸರು ನಮ್ಮನ್ನು ಒಳಗೆ ಬಿಡುತ್ತಿಲ್ಲ ಎಂದು ಶಿವರಕುಮಾರ್ ತಿಳಿಸಿದ್ದಾರೆ.
ನಾವೆಲ್ಲ ರಾಜಕೀಯದಲ್ಲಿ ಜತೆಜತೆಯಲ್ಲಿಯೇ ಬೆಳೆದಿದ್ದೇವೆ. ನಾವು ರಾಜಕೀಯದಲ್ಲೇ ಸಾಯುತ್ತೇವೆ. ಅವರೆಲ್ಲ ನಮ್ಮ ಪಕ್ಷದವರು ಅವರನ್ನು ಭೇಟಿ ಮಾಡಿಯೇ ಹೋಗುತ್ತೇವೆ. ಇಡೀ ದಿನ ಇಲ್ಲೇ ಕಾಯುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಹೆಸರಿನಲ್ಲಿ ರೂಂ ಬುಕ್ ಮಾಡಿದ್ದರೇ ಮಾತ್ರ ಒಳಗೆ ಬಿಡುವುದಾಗಿ ಪೊಲೀಸರು ತಿಳಿಸಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ಶಿವಕುಮಾರ್, ನನ್ನ ಬಳಿ ಯಾವುದೇ ಶಸ್ತ್ರಾಸ್ತ್ರವಿಲ್ಲ, ಕೇವಲ ಹೃದಯ ಮಾತ್ರ ಇದೆ, ನಿನ್ನೆ ನವು ಬಿಜೆಪಿ ಶಾಸಕರನ್ನು ಹೇಗೆ ಒಳಗೆ ಬಿಟ್ಟಿರಿ ಎಂದು ಪ್ರಶ್ನಿಸಿದ್ದಾರೆ. ಆರ್. ಅಶೋಕ್. ಬೋಪಯ್ಯ ಅವರನ್ನು ಒಳಗೆ ಬಿಡುತ್ತಾರೆ ನಮ್ಮನ್ನು ಮಾತ್ರ ಬಿಡುತ್ತಿಲ್ಲ ಎಂದು ಹೇಳಿದ್ದಾರೆ.
ಡಿ,ಕೆ ಶಿವಕುಮಾರ್ ಜೊತೆಗೆ  ಜೆಡಿಎಸ್​ ಶಾಸಕ ಶಿವಲಿಂಗೇ ಗೌಡ ಹಾಗೂ ಸಚಿವ ಜಿ.ಟಿ.ದೇವೇಗೌಡರು ಕೂಡ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com