ಕರ್ನಾಟಕದಲ್ಲಿ 'ಮಹಾಘಟಬಂಧನ್' ಪ್ರಯೋಗ ನಪಾಸು! ಕಾರಣ ಏನು?

ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಅಸ್ವಾಭಾವಿಕ ಮೈತ್ರಿ ಕೂಟದ ಸ್ವಾಭಾವಿಕ ಪತನ, ತಪ್ಪಿದ ಗಣಿತದ ಲೆಕ್ಕಾಚಾರ, ಬಿಜೆಪಿಗೆ ಕೇವಲ 7ರಿಂದ 8 ...
ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಬೆಂಗಳೂರು: ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಅಸ್ವಾಭಾವಿಕ ಮೈತ್ರಿ ಕೂಟದ ಸ್ವಾಭಾವಿಕ ಪತನ, ತಪ್ಪಿದ ಗಣಿತದ ಲೆಕ್ಕಾಚಾರ, ಬಿಜೆಪಿಗೆ ಕೇವಲ 7ರಿಂದ 8 ಶಾಸಕರ ಕೊರತೆಯಿತ್ತು., ಹೀಗಾಗಿ ಬಿಜೆಪಿಗೆ ಜನಾಜದೇಶ ಸಿಕ್ಕಿಲ್ಲ.
ಕಾಂಗ್ರೆಸ್ 38ರಿಂದ 40 ಸೀಟುಗಳು ಕಡಿಮೆಯಾಗಿತ್ತು, ಹಾಗಾಗಿ ಕಾಂಗ್ರೆಸ್ ಗೂ ಕೂಡ ಅಧಿಕಾರ ಮಾಡಲು ಸಾಧ್ಯವಿರಲಿಲ್ಲ, ಜೆಡಿಎಸ್ ಗೆ 80 ಶಾಸಕರ ಕೊರತೆಯಿತ್ತು, ಹೀಗಾಗಿ ಕೊರತೆಯ ಲೆಕ್ಕಾಚಾರದಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ  ಸರ್ಕಾರ ರಚನೆ ಮಾಡಿದ್ದಾಯ್ತು. ಆದರೆ ಸರ್ಕಾರದ ಗುರುತ್ವಾಕರ್ಷಮೆ ಮಾತ್ರ ತುಂಬಾ ಬಲಹೀನವಾಗಿತ್ತು, ಹೀಗಾಗಿ ಕುಸಿಯಲು ಆರಂಭಿಸಿತ್ತು.
ರಾಜಕೀಯವಾಗಿ ಇದು ಹೊಸತಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸರ್ಕಾರ ರಚನೆ ಪ್ರಯೋಗ ಇದು ಮೊದಲಲ್ಲ, 1997 ರ ಮಾರ್ಚ್ ನಲ್ಲಿ ದೇವೇಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ಮೈತ್ರಿ ವಿಫಲವಾಗಿತ್ತು. ಅದಾದ ನಂತರ 2006 ರಲ್ಲಿ  ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಇದು ಮೂರನೇ ಬಾರಿಗೆ ನಡೆದಿದ್ದ ಪ್ರಯೋಗ ಇದಾಗಿತ್ತು. ಸರಣಿ ಪ್ರಯೋಗಗಳ ವೈಫಲ್ಯ ಇದಾಗಿದೆ.
ಕರ್ನಾಟಕದಲ್ಲಿ ಏನಾಗುತ್ತಿದೆ, ಏನಾಯ್ತು ಎಂಬ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಿಂದಾಗಿ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕುತ್ತಿದ್ದಾರೆ.. ಮೈತ್ರಿ ಸರ್ಕಾರದಲ್ಲಿ ನಾನು ವಿಷಕಂಠನಾಗಿದ್ದೇನೆ ಎಂದು ಹೇಳಿದ್ದರು, ಮುಖ್ಯಮಂತ್ರಿಗಳ ಈ ಹೇಳಿಕೆಯಿಂದಾಗಿ ದೋಸ್ತಿ ಸರ್ಕಾರ ಸಂಬಂಧ ಹಳಸಲು ಆರಂಭಿಸಿತು.
ಬೆಂಗಳೂರು ಬೌದ್ಧಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿದೆ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ವೇಳೆ ಟ್ವೀಟ್ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಥಿ, ಪ್ರಧಾನಿ ಮೋದಿ ಅವರ ಕರ್ಮ ಅವರಿಗಾಗಿ ಕಾಯುತ್ತಿದೆ ಎಂದು ಟ್ವಿಟ್ಟಿಸಿದ್ದರು. 
ಇದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವಿನ ಇಗೋ ಕ್ಲಾಶ್ ಆಗಿದೆ, ಕುರುಬ ಮತ್ತು ಒಕ್ಕಲಿಗ ನಾಯಕರ ನಡುವಿನ ತಿಕ್ಕಾಟ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com