ಸರ್ಕಾರ ಪತನದ ನಂತರ ಬಂಡಾಯ ಶಾಸಕರ ಮುಂದಿನ ನಡೆಯೇನು?: ಇಲ್ಲಿದೆ ಮಾಹಿತಿ

18 ದಿನಗಳ ಬೃಹನ್ನಾಟಕದ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡಿದ್ದು, ಸರ್ಕಾರ ಪತನಗೊಳ್ಳುವುದಕ್ಕೆ ಕಾರಣರಾಗಿದ್ದ 15 ಶಾಸಕರ ಮುಂದಿನ ನಡೆ ಏನೆಂಬ ಬಗ್ಗೆ ಕುತೂಹಲ ಮೂಡಿದೆ.

Published: 23rd July 2019 12:00 PM  |   Last Updated: 23rd July 2019 10:12 AM   |  A+A-


Rebel MLAs to return after Yeddyurappa sworn in

ಸರ್ಕಾರ ಪತನದ ನಂತರ ಬಂಡಾಯ ಶಾಸಕರ ಮುಂದಿನ ನಡೆಯೇನು?: ಇಲ್ಲಿದೆ ಮಾಹಿತಿ

Posted By : SBV SBV
Source : PTI
ಬೆಂಗಳೂರು: 18 ದಿನಗಳ ಬೃಹನ್ನಾಟಕದ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡಿದ್ದು, ಸರ್ಕಾರ ಪತನಗೊಳ್ಳುವುದಕ್ಕೆ ಕಾರಣರಾಗಿದ್ದ 15 ಶಾಸಕರ ಮುಂದಿನ ನಡೆ ಏನೆಂಬ ಬಗ್ಗೆ ಕುತೂಹಲ ಮೂಡಿದೆ. 

ಮುಂಬೈ ನಲ್ಲಿರುವ ಬಂಡಾಯ ಶಾಸಕರ ಮುಂದಿನ ನಡೆ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕುಮಾರಸ್ವಾಮಿ ವಿಶ್ವಾಸಮತ ಸೋತು ಜನತಾದಳ (ಸೆಕ್ಯುಲರ್)-ಕಾಂಗ್ರೆಸ್ ಸರ್ಕಾರ ಪತನಗೊಂಡಿರುವುದು ಬಂಡಾಯ ಶಾಸಕರಿಗೆ ಸಂತಸ ಉಂಟುಮಾಡಿದೆ. 

ಬಂಡಾಯ ಶಾಸಕರಿಗೆ ಏನು ಬೇಕಿತ್ತೋ ಅದು ಸಿಕ್ಕಿದೆ. ಯಡಿಯೂರಪ್ಪ  ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಂಡಾಯ ಶಾಸಕರು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ರಾಜೀನಾಮೆ ನೀಡಿದ್ದ ಬಂಡಾಯ ಶಾಸಕರು ತಮ್ಮ ನಡೆಯ ಹಿಂದೆ ಬಿಜೆಪಿ ಕೈವಾಡ ಇದೆ ಎಂಬುದನ್ನು ನಿರಾಕರಿಸಿದ್ದರು.
Stay up to date on all the latest ರಾಜಕೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp