ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಶಂಕರ್ ಗೆ ಪೌರಾಡಳಿತ, ನಾಗೇಶ್ ಗೆ ಸಣ್ಣ ಕೈಗಾರಿಕೆ

ಇತ್ತೀಚಿಗೆ ಮೈತ್ರಿ ಸಂಪುಟಕ್ಕೆ ಸೇರ್ಪಡೆಯಾಗಿದ್ದ ನೂತನ ಸಚಿವರಾದ ಆರ್ ಶಂಕರ್ ಅವರಿಗೆ ಪೌರಾಡಳಿತ ಹಾಗೂ ಎಚ್ ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಫಾರಸ್ಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ
ಸಚಿವರಾದ ನಾಗೇಶ್ , ಆರ್ ಶಂಕರ್
ಸಚಿವರಾದ ನಾಗೇಶ್ , ಆರ್ ಶಂಕರ್
ಬೆಂಗಳೂರು: ಇತ್ತೀಚಿಗೆ  ಮೈತ್ರಿ ಸಂಪುಟಕ್ಕೆ ಸೇರ್ಪಡೆಯಾಗಿದ್ದ ನೂತನ ಸಚಿವರಾದ ಆರ್ ಶಂಕರ್ ಅವರಿಗೆ ಪೌರಾಡಳಿತ ಹಾಗೂ ಎಚ್ ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಫಾರಸ್ಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ
ಗುಬ್ಬಿ ಶ್ರೀನಿವಾಸ್ ಅವರಿಂದ ಸಣ್ಣ ಕೈಗಾರಿಕೆ ಖಾತೆಯನ್ನು ಹಿಂಪಡೆದಿರುವ ಮುಖ್ಯಮಂತ್ರಿ ಅದನ್ನು ಎಚ್ ನಾಗೇಶ್ ಅವರಿಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಳಿ ಇದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆಯನ್ನ ಗುಬ್ಬಿ ಶ್ರೀನಿವಾಸ್ ಅವರಿಗೆ ನೀಡುವ ಮೂಲಕ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ
ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಪೌರಾಡಳಿತ ಖಾತೆಗೆ ಎಚ್ ನಾಗೇಶ್ ಪಟ್ಟು ಹಿಡಿದಿದ್ದರು, ಇಬ್ಬರೂ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮೈತ್ರಿ ಪಕ್ಷಗಳಲ್ಲಿ ವ್ಯಾಪಕ ವಿರೋಧದ ನಡುವೆಯೂ ಶಂಕರ್ ಹಾಗೂ ನಾಗೇಶ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳ ಬಳಿಕ ಖಾತೆಗಳು ಹಂಚಿಕೆಯಾಗಿರುವುದು ವಿಶೇಷ. ಶಂಕರ್ ಹಾಗೂ ನಾಗೇಶ್ ಖಾತೆಗಾಗಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಅಧ್ಯಕ್ಷರು, ಸಚಿವ ಡಿ ಕೆ ಶಿವಕುಮಾರ್ ಬಳಿ ನಿರಂತರ ಲಾಭಿ ನಡೆಸಿದ್ದರು. ಕೊನೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅಳೆದೂ ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com