ಕೇಂದ್ರದ ಅನುದಾನ ಸಂಪೂರ್ಣ ವಿನಿಯೋಗಿಸಿಕೊಳ್ಳುವಲ್ಲಿಯೂ ರಾಜ್ಯ ಸಂಸದರು ವಿಫಲ!

16ನೇ ಲೋಕಸಭೆ ಅವಧಿಯಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಪರಿಪೂರ್ಣವಾಗಿ ಬಳಸಲು ವಿಫಲರಾಗಿದ್ದಾರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: 17ನೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಪ್ರಾರಂಭವಾಗಿರುವಾಗಲೇ 16ನೇ ಲೋಕಸಭೆ ಅವಧಿಯಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಪರಿಪೂರ್ಣವಾಗಿ ಬಳಸಲು ವಿಫಲರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ತಮಗೆ ಬಿಡುಗಡೆಯಾದ ಒಟ್ಟಾರೆ ನಿಧಿಯಲ್ಲಿ ರಾಜ್ಯದ ಸಂಸದರು ಇನ್ನೂ 82.5 ಕೋಟಿ ರು.ಗಳನ್ನು ಬಳಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.
2014ರಿಂದ 2019ರವೆಗಿನ 16ನೇ ಲೋಕಸಭೆ ಅವಧಿಯಲ್ಲಿ ಸಂಸದರಿಗೆ ಒಟ್ಟು .700 ಕೋಟಿ ಸಂಸದರ ನಿಧಿ ಲಭ್ಯವಿತ್ತು. ವರ್ಷಕ್ಕೆ ತಲಾ 5 ಕೋಟಿಯಂತೆ 5 ವರ್ಷಕ್ಕೆ .25 ಕೋಟಿ ನಿಗದಿಯಾಗಿತ್ತು. ಈವರೆಗೆ ಒಟ್ಟು .559 ಕೋಟಿ ಬಿಡುಗಡೆಯಾಗಿದ್ದು, ಬಡ್ಡಿ ಸಹಿತ .559.10 ಕೋಟಿ ಬಳಕೆಗೆ ಮಂಜೂರಾಗಿದೆ. 
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಂಸದರ ನಿಧಿಯನ್ನು ಈಗ ಬಳಸಿಕೊಳ್ಳುವಂತಿಲ್ಲ, ಸಂಸದರ ನಿಧಿಯನ್ನು ಬಳಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೂ ಹೇಳಲು ಸಾಧ್ಯವಿಲ್ಲ, ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯಿಂದಾಗಿ 2.50 ಕೋಟಿ ರು ಅನುದಾನದ ಹಣ ಬಾಕಿ ಉಳಿದುಕೊಂಡಿದೆ. 
ಹಲವು ತಾಂತ್ರಿಕ ತೊಂದರೆಗಳಿಂದಾಗಿ ಸಂಸದರ ಅನುದಾನ ನಿಧಿ ಬಳಕೆಯಾಗಿಲ್ಲ, ದೇವಾಲಯ, ಸಮುದಾಯ ಭವನ, ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಂಸದರ ನಿಧಿಯಿಂದ ಹಣ ಪಡೆಯುವಂತೆ  ಹಲವು ಸಂಸದರು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕಳಿಸಿದ್ದರೂ ಉಪಯೋಗವಾಗಿಲ್ಲ ಎಂದು ಮೂಲಗಳು ತಿಳಿಸಿವೆ, 
ರಾಜ್ಯದ ಒಟ್ಟು 28 ಸಂಸದರಿಗೆ 700 ಕೋಟಿ ರೂ ಅನಪದಾನ ಸಿಗುತ್ತದೆ ಸರ್ಕಾರ ಐದು ವರ್ಷಕ್ಕೆ 542 ಕೋಟಿ ಬಿಡುಗಡೆ ಮಾಡಿದೆ, ಆದರೆ ಹಲವು ಸಂಸದರು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ,  
ಸಂಸದರು ತಮ್ಮ ನಿಧಿಯಿಂದ ಹಣ ಬಳಕೆಮಾಡದೇ ಇದ್ದರೆ ಅದು ವ್ಯರ್ಥವಾಗುವುದಿಲ್ಲ,  ಮುಂದಿನ ಬಾರಿ ಸಂಸದರಾಗಿ ಆಯ್ಕೆಯಾಗುವವರಿಗೆ ಆ ಹಣ ದೊರಕುತ್ತದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com