ಮೇ 25ರವರೆಗೆ ಕಾದು ನೋಡಿ, ನಮಗೆ ಅಧಿಕಾರ ಸಿಗುತ್ತದೆ: ರಮೇಶ್ ಜಾರಕಿಹೊಳಿ

ಮೈತ್ರಿ ಸರ್ಕಾರದಲ್ಲಿ ಹಲವು ದಿನಗಳ ಬಂಡಾಯದ ನಂತರ ಸ್ವಕ್ಷೇತ್ರ ಗೋಕಾಕ್ ಗೆ ಆಗಮಿಸಿದ ಶಾಸಕ...

Published: 03rd May 2019 12:00 PM  |   Last Updated: 03rd May 2019 12:37 PM   |  A+A-


Ramesh Jarakiholi

ರಮೇಶ್ ಜಾರಕಿಹೊಳಿ

Posted By : SUD SUD
Source : The New Indian Express
ಬೆಳಗಾವಿ: ಮೈತ್ರಿ ಸರ್ಕಾರದಲ್ಲಿ ಹಲವು ದಿನಗಳ ಬಂಡಾಯದ ನಂತರ ಸ್ವಕ್ಷೇತ್ರ ಗೋಕಾಕ್ ಗೆ ಆಗಮಿಸಿದ ಶಾಸಕ ರಮೇಶ್ ಜಾರಕಿಹೊಳಿ ಮೇ 25ರ ನಂತರ ನಮಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಮತ್ತು ಬಲ ಸಿಗಲಿದೆ. ಕಾದು ನೋಡಿ ಎಂದಿದ್ದಾರೆ.

ಗೋಕಾಕ್ ನಲ್ಲಿ ಕರ್ನಾಟಕ ಹಾಲು ಒಕ್ಕೂಟದ ನೂತನ ನಿರ್ದೇಶಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉನ್ನತ ಸ್ಥಾನದಲ್ಲಿರುವ ಇಂದಿನ ಎಲ್ಲಾ ಸಚಿವರುಗಳು ಸದ್ಯದಲ್ಲಿಯೇ ಮಾಜಿ ಸಚಿವರುಗಳಾಗಲಿದ್ದಾರೆ ಎಂದು ತಮ್ಮ ಸೋದರ ಮತ್ತು ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸದೆ ಹೇಳಿದರು.

ಮೇ 25ರ ನಂತರ ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣ ನಡೆಯಲಿದೆ. ಕೆಂಪು ದೀಪಗಳಿಂದ ಉರಿಯುವ ಕಾರಿನಲ್ಲಿ ಸುತ್ತಾಡುವ ಸಚಿವರುಗಳನ್ನು ನೋಡಿ ಯಾರೂ ಕೂಡ ಹೆದರಬೇಕಾಗಿಲ್ಲ. ಯಾವ ನಾಯಕರನ್ನೂ ನಂಬಬೇಡಿ, ಒಂದಲ್ಲ ಒಂದು ದಿನ ಅವರು ಬೆನ್ನಹಿಂದಿನಿಂದ ಬಂದು ಚೂರಿ ಹಾಕುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಕಳೆದ ಕೆಲ ವಾರಗಳಿಂದ ರಾಜಕೀಯ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಪರಸ್ಪರ ಕಿತ್ತಾಡುತ್ತಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಪಕ್ಷದ ನಾಯಕರಾಗಿ ರಮೇಶ್ ಜಾಗಕ್ಕೆ ತಮ್ಮ ಮತ್ತೊಬ್ಬ ಸೋದರ ಲಖನ್ ಜಾರಕಿಹೊಳಿ ಅವರನ್ನು ತಂದು ಕೂರಿಸುವಂತೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಡ ಹಾಕುತ್ತಿದ್ದಾರೆ. ತಮ್ಮ ರಾಜಕೀಯ ಜೀವನ ಅಧೋಗತಿಗೆ ಬರಲು ಸೋದರ ಸತೀಶ್ ಜಾರಕಿಹೊಳಿಯೇ ಕಾರಣ ಎಂದು ಆರೋಪಿಸಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp