ಮೋದಿ ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ: ಪ್ರಧಾನಿಯನ್ನು ಹಾಡಿ ಹೊಗಳಿದ ಜಿ.ಟಿ.ದೇವೇಗೌಡ

ಭರ್ಜರಿ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಅವರನ್ನು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ...

Published: 29th May 2019 12:00 PM  |   Last Updated: 29th May 2019 10:18 AM   |  A+A-


It was PM Modi's personal image that brought NDA to power for 2nd term: GT Devegowda

ಜಿಟಿ ದೇವೇಗೌಡ

Posted By : LSB LSB
Source : UNI
ಬೆಳಗಾವಿ: ಭರ್ಜರಿ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಅವರನ್ನು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರು ಹಾಡಿ ಹೊಗಳಿದ್ದು, ಮೋದಿ ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.

ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸವದಲ್ಲಿ ಮಾತನಾಡಿದ ಸಚಿವರು, ಮೋದಿ ಎರಡನೇ ಬಾರಿ ಭಾರೀ ಅಂತರದಿಂದ ಗೆದ್ದರು ಅವರಿಗೆ ಸ್ವ-ಹಿತಾಶಕ್ತಿ ಇಲ್ಲ, ದೇಶಕ್ಕಾಗಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದರು.

ಮೋದಿ ಅವರು ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರಿಂದ ಮತ್ತೆ ಅವರು ಪ್ರಧಾನಿ ಆಗುತ್ತಿದ್ದಾರೆ. ಅವರು ಯಾವತ್ತೂ ದೇಶ ದೇಶ ದೇಶ ಅಂತಾ ಹೇಳ್ತಾರೆ ಮತ್ತು ನೀವು-ನಾವು ಎಲ್ಲರೂ ದೇಶಕ್ಕಾಗಿ ದುಡಿಯಬೇಕೆಂದು ಮೋದಿ ಹೇಳ್ತಾರೆ. ಒಬ್ಬ ಪ್ರಧಾನಿ ನಾನು ಸಂಸದನಂತೆ ಸರಳವಾಗಿ ಇರ್ತಿನಿ ಅಂತಾ ಹೇಳ್ತಾರೆ. ಮೋದಿ ಟೀ-ಕಾಫೀ ಮಾರಾಟ ಮಾಡಿ ಕಷ್ಟಪಟ್ಟು ಬಂದಿದ್ದೇನೆ ಎಂದು ಹೇಳ್ತಾರೆ ಎಂದರು.

ದೇವಾಲಯಕ್ಕೆ ಹೋಗಿ ನೂರ ಸಲ ಪ್ರದಕ್ಷಿಣೆ ಮಾಡೋದಲ್ಲ, ತಂದೆ-ತಾಯಿ ಆಶೀರ್ವಾದವನ್ನು ಪಡೆಯಬೇಕು, ಗುರು-ಹಿರಿಯರ ಆಶೀರ್ವಾದ ಪಡೆಯಬೇಕು. ಆ ಮೂಲಕ ಈಗ ನರೇಂದ್ರ ಮೋದಿ ಅವರು ತಮ್ಮ ತಾಯಿ ಅವರಿಗೆ ಕಾಲು ಮುಗಿದು ನಮಸ್ಕಾರ ಮಾಡಿ ಎಲ್ಲರಿಗೂ ಮಾದರಿಯಾಗುವಂತೆ ತೋರಿಸಿದ್ದಾರೆ ಎಂದು ದೋಸ್ತಿ ಸರ್ಕಾರದ ಸಚಿವ ಜಿ.ಟಿ ದೇವೇಗೌಡ ಘಟಿಕೋತ್ಸವದಲ್ಲಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp