ಸಮ್ಮಿಶ್ರ ಸರ್ಕಾರದ ಮೊದಲ ಅತೃಪ್ತ ಶಾಸಕ ಸಿದ್ದರಾಮಯ್ಯ: ವಿ  ಶ್ರೀನಿವಾಸ್​ ಪ್ರಸಾದ್​​​

ಯಡಿಯೂರಪ್ಪ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಮನಸ್ಸಿನಲ್ಲಿರುವುದನ್ನ ಹೇಳಿದ್ದಾರೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.  
ಸಿದ್ದರಾಮಯ್ಯ ಹಾಗೂ ಶ್ರೀನಿವಾಸ ಪ್ರಸಾದ್
ಸಿದ್ದರಾಮಯ್ಯ ಹಾಗೂ ಶ್ರೀನಿವಾಸ ಪ್ರಸಾದ್

ಚಾಮರಾಜನಗರ: ಯಡಿಯೂರಪ್ಪ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಮನಸ್ಸಿನಲ್ಲಿರುವುದನ್ನ ಹೇಳಿದ್ದಾರೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. 

ಬಿಎಸ್​ವೈ ಮಾತನಾಡಿರುವುದರಲ್ಲಿ ತಪ್ಪೇನಿಲ್ಲ: ಆಡಿಯೋ ವೈರಲ್​ ಬಗ್ಗೆ ವಿ.ಶ್ರೀನಿವಾಸ ಪ್ರಸಾದ್ ಪ್ರತಿಕ್ರಿಯೆನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಅಸಲಿಯೋ,ನಕಲಿಯೋ ಎಂದು ಜಿಜ್ಞಾಸೆಯಿದೆ. ಒಂದು ವೇಳೆ ಅವರು ಮಾತನಾಡಿದ್ದರೂ ತಪ್ಪೇನಿಲ್ಲ. ಅವರು ಯಾರಿಂದ ಸರ್ಕಾರ ರಚಿಸಿದ್ದೇವೆ ಎಂದು ಹೇಳಿದ್ದಾರೆ. ರಾಜೀನಾಮೆ ನೀಡಿದ12 ಮಂದಿ ಅನರ್ಹ ಶಾಸಕರಲ್ಲ. ಅವರು ಅತೃಪ್ತ ಶಾಸಕರು. ದೋಸ್ತಿ ಸರ್ಕಾರದ ಮೊದಲ ಅತೃಪ್ತ ಶಾಸಕ ಅಂದರೆ ಅದು ಸಿದ್ದರಾಮಯ್ಯ. ಮೈತ್ರಿ ಸರ್ಕಾರದ ವಿರುದ್ಧ ಮೊದಲು ಅತೃಪ್ತಿ ವ್ಯಕ್ತಪಡಿಸಿದ್ದೇ ಅವರು ಎಂದು ಲೇವಡಿ ಮಾಡಿದರು.

ಅತೃಪ್ತ ಶಾಸಕರು ರಾಜೀನಾಮೆ ನೀಡದಿದ್ದರೇ ಸರ್ಕಾರ ಎಲ್ಲಿ ರಚನೆಯಾಗುತ್ತಿತ್ತು. ಆದ್ದರಿಂದ,ಬಿಎಸ್​ವೈ ಅವರು ಅತೃಪ್ತ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿರುವುದಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಸಿದ್ದರಾಮಯ್ಯ ಕಾಡಿ-ಬೇಡಿ ವಿಪಕ್ಷ ನಾಯಕರಾಗಿದ್ದಾರೆ. ಕಾಂಗ್ರೆಸ್ ಸೋತು ಸುಣ್ಣವಾಗಿರುವುದರಿಂದ ಆಡಿಯೋ ವೈರಲ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ. ಅವರಿಗೆ ಬೇರೆ ಯಾವ ವಿಷಯಗಳು ಇಲ್ಲ. ಉಪಚುನಾವಣೆ ಬಳಿಕ ಸರ್ಕಾರ ಬೀಳಲಿದೆ ಹಾಗೂ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಪ್ರತಿಪಕ್ಷಗಳ ಮಾತಿನಲ್ಲಿ ಹುರುಳಿಲ್ಲ. ಮಧ್ಯಂತರ ಚುನಾವಣೆ ಎಂಬುದು ಕನಸು ಎಂದರು. ಕರ್ನಾಟಕದ ಅನರ್ಹ ಶಾಸಕರ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ ನ್ಯಾಯದ ಪರ ತೀರ್ಪು ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವರದಿ: ಗೂಳಿಪುರ ನಂದೀಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com