'ಸುಪ್ರೀಂ' ತೀರ್ಪು ತೃಪ್ತಿ ತಂದಿಲ್ಲ, ನನ್ನ ಪ್ರಕರಣದ ಮರು ಪರಿಶೀಲನೆಗೆ ಚಿಂತನೆ: ಅನರ್ಹ ಶಾಸಕ ಡಾ.ಸುಧಾಕರ್

ಸುಪ್ರೀಂ ಕೋರ್ಟಿನ ತೀರ್ಪು ಮರು ಪರಿಶೀಲನೆ ಆಗಬೇಕಿದೆ. ನಾನು ಅನರ್ಹತೆಯಡಿ ಬರುವುದಿಲ್ಲವೆಂಬುದು ನನ್ನ ಅಭಿಪ್ರಾಯ. ಬೇರೆಯ ಪ್ರಕರಣಗಳ ಜೊತೆ ನನ್ನ ಅರ್ಜಿನ್ನು ಪರಿಗಣಿಸಿದ್ದು ಸರಿಯಿಲ್ಲ ಎಂದು ಅನರ್ಹ ಶಾಸಕ ಡಾ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published: 14th November 2019 08:55 AM  |   Last Updated: 14th November 2019 08:55 AM   |  A+A-


Dr. Sudhakar

ಡಾ. ಸುಧಾಕರ್

Posted By : Vishwanath S
Source : UNI

ಬೆಂಗಳೂರು: ಸುಪ್ರೀಂ ಕೋರ್ಟಿನ ತೀರ್ಪು ಮರು ಪರಿಶೀಲನೆ ಆಗಬೇಕಿದೆ. ನಾನು ಅನರ್ಹತೆಯಡಿ ಬರುವುದಿಲ್ಲವೆಂಬುದು ನನ್ನ ಅಭಿಪ್ರಾಯ. ಬೇರೆಯ ಪ್ರಕರಣಗಳ ಜೊತೆ ನನ್ನ ಅರ್ಜಿನ್ನು ಪರಿಗಣಿಸಿದ್ದು ಸರಿಯಿಲ್ಲ ಎಂದು ಅನರ್ಹ ಶಾಸಕ ಡಾ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿಚಾರಣೆ ವೇಳೆ ನನ್ನ ಪ್ರಕರಣದ ಬಗ್ಗೆ ವಾದ ಮಂಡಿಸಲು ಅವಕಾಶ ಸಿಗಲಿಲ್ಲ ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಸುಧಾಕರ್ ತಿಳಿಸಿದ್ದಾರೆ.

ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ೧೨೩ ದಿನಗಳಾಗಿದೆ.ಇಂದು ಸರ್ವೋಚ್ಚ ನ್ಯಾಯಾಲಯ ಅಂತಿಮ ತೀರ್ಪು ನೀಡಿ ಸ್ಪೀಕರ್ ಆದೇಶವನ್ನ ಭಾಗಶಃ ಒಪ್ಪಿ ಅನರ್ಹತೆಯನ್ನು ಎತ್ತಿಹಿಡಿದಿದೆ ಆದರೆ ಕೆಲವೊಂದನ್ನು ತಿರಸ್ಕರಿಸಿದೆ ಎಂದರು.

ಇನ್ನು ಚುನಾವಣೆಗೆ ನಿಲ್ಲಬಾರದೆಂಬುದನ್ನ ತಿರಸ್ಕರಿಸಿದೆ. ತೀರ್ಪು ನೂರಕ್ಕೆ ನೂರು ನಮ್ಮ ಪರವಾಗಿಯೇ ಬರಬೇಕಿತ್ತು ಇತ್ತೀಚಿನ‌ ಕೆಲವು ಅಂಶಗಳಿಂದ ಈ ತೀರ್ಪು ಬಂದಿದೆ ಎಂದು ಅವರು ತೀರ್ಪನ್ನು ವಿಶ್ಲೇಷಿಸಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp