ಉಪೇಂದ್ರ
ಉಪೇಂದ್ರ

15 ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ: ಉಪೇಂದ್ರ

ಸಿನಿಮಾದಲ್ಲಿ ತೊಡಗಿ ಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುತ್ತಿಲ್ಲ ಎಂದು ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ರಾಜ್ಯಾಧ್ಯಕ್ಷ ಉಪೇಂದ್ರ ಅವರು ಹೇಳಿದ್ದಾರೆ. 

ಬೆಂಗಳೂರು:  ಸಿನಿಮಾದಲ್ಲಿ ತೊಡಗಿ ಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುತ್ತಿಲ್ಲ ಎಂದು ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ರಾಜ್ಯಾಧ್ಯಕ್ಷ ಉಪೇಂದ್ರ ಅವರು ಹೇಳಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ)ದ 15 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪರಿಚಯಿಸಿ ಅವರು, ಮಾತನಾಡಿದರು.

ಕಳೆದ ಮೂರು ವರ್ಷಗಳಿಂದ ಉತ್ತಮ ಪ್ರಜಾಕೀಯ ಪಕ್ಷ ಕಾರ್ಯ ನಿರ್ವಹಿಸುತ್ತಿದೆ. ದಿಢೀರ್‌ ಎಂದು ಬಂದಿರುವ ಉಪ ಚುನಾವಣೆಯಲ್ಲೂ ಸ್ಪರ್ಧಿಸಲಿದೆ. ಈಗ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಉಪೇಂದ್ರ ಹೇಳಿದರು. ಈಗಿನ ರಾಜಕೀಯ ವ್ಯವಸ್ಥೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಚುನಾವಣೆಯಲ್ಲಿ ಮತದಾರರು ವ್ಯಕ್ತಿ, ಪಕ್ಷ ನೋಡಿ ಮತ ಹಾಕಬಾರದು.

15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ:
ಡಾ.ನಾಗನಾಥ ವಿ ಯಾದ್ಗೀರ್‌ (ಅಥಣಿ ), ಎ.ಸಚಿನ್‌ಕುಮಾರ್‌ ( ಕಾಗವಾಡ), ಸಂತೋಷ ನಂದೂರ್‌ (ಗೋಕಾಕ), ಸುನೀಲ್‌ ಪವಾರ (ಯಲ್ಲಾಪುರ), ದೇವೇಂದ್ರಪ್ಪ (ಹಿರೇಕೆರೂರು ), ಐ.ಎಚ್‌.ಪಾಟೀಲ (ರಾಣೆ ಬೆನ್ನೂರು), ಮಹೇಶ ಲಂಬಾಣಿ (ವಿಜಯನಗರ ), ಫ‌ಣಿರಾಜ್‌ (ಚಿಕ್ಕಬಳ್ಳಾಪುರ ), ಎಂ.ಸಂತೋಷ ( ಕೆ.ಆರ್‌.ಪುರ), ಎಂ.ಮಂಜುನಾಥ್‌ (ಯಶವಂತಪುರ ), ವಿ.ಆಶಾರಾಣಿ ( ಮಹಾಲಕ್ಷಿ ಲೇ ಔಟ್‌), ವಿ.ಕೌಶಿಕ್‌ ರೆಡ್ಡಿ (ಶಿವಾಜಿ ನಗರ), ಆರ್‌.ಸುರೇಶ್‌ ರಾವ್‌ (ಹೊಸಕೋಟೆ), ಎಚ್‌.ಎಂ.ಚಂದ್ರೇಗೌಡ (ಕೃಷ್ಣರಾಜಪೇಟೆ ) ಮತ್ತು ದಿವಾಕರ್‌ ಗೌಡ ( ಹುಣಸೂರು).

ಎಲ್ಲಾ ಅಭ್ಯರ್ಥಿಗಳು ಆಟೋ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ, ಶಿವಾಜಿ ನಗರದ ಅಭ್ಯರ್ಥಿ ವಿ. ಕೌಶಿಕ್ ರೆಡ್ಡಿ ಮಾತ್ರ ಬೈನಾಕುಲರ್ ಚಿಹ್ನೆ ಅಡಿ ಸ್ಪರ್ಥಿಸುತ್ತಿದ್ದಾರೆ, ಶಿವಾಜಿ ನಗರ ಕ್ಷೇತ್ರದಲ್ಲಿ ಬೇರೋಬ್ಬ ಅಭ್ಯರ್ಥಿ ಆಟೋ ಚಿಹ್ನೆಯಲ್ಲಿ ಕಣಕ್ಕಿಳಿದಿದ್ದಾರೆ.

Related Stories

No stories found.

Advertisement

X

Advertisement

X
Kannada Prabha
www.kannadaprabha.com