ಯಾರ್ಗಪ್ಪಾ 'ಒತ್ತೋದು': ಹುಣಸೂರಿನಲ್ಲಿ ಕುರುಬ ಮತದಾರರಿಗೆ ಚಿಂತೆಯೋ ಚಿಂತೆ!

ಡಿಸೆಂಬರ್ ನಲ್ಲಿ ನಡೆಯುವ ರಾಜ್ಯ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಖಂಡಿತವಾಗಿಯೂ ಕುರುಬ ಸಮುದಾಯದ ನಾಯಕರುಗಳಿಗೆ ಬಿಸಿ ತಟ್ಟಲಿದೆ.
ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್
ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್

ಮೈಸೂರು: ಡಿಸೆಂಬರ್ ನಲ್ಲಿ ನಡೆಯುವ ರಾಜ್ಯ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಖಂಡಿತವಾಗಿಯೂ ಕುರುಬ ಸಮುದಾಯದ ನಾಯಕರುಗಳಿಗೆ ಬಿಸಿ ತಟ್ಟಲಿದೆ.

ಕುರುಬ ಸಮುದಾಯದ ಮೂರು ಪ್ರಭಾವಿ ನಾಯಕರುಗಳಾದ ಸಿದ್ದರಾಮಯ್ಯ, ಎಚ್ ವಿಶ್ವನಾಥ್ ಮತ್ತು ಕೆಎಸ್ ಈಶ್ವರಪ್ಪ ಈಗಾಗಲೇ ಅಖಾಡಕ್ಕಿಳಿದು ಸಿದ್ಧತೆ ನಡೆಸುತ್ತಿದ್ದಾರೆ, ಈ ಬಿಸಿ ಹುಣಸೂರು ಮತ್ತು ಕೆಆರ್ ಪೇಟೆ ಕ್ಷೇತ್ರಗಳಿಗೆ ತಟ್ಟಿದೆ, ಸಮುದಾಯದ ಪ್ರಮುಖರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ  ಅವರಿಂದ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದೆ,  ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಕಮ್ ಬ್ಯಾಕ್ ಗಾಗಿ ಹವಣಿಸುತ್ತಿದ್ದಾರೆ.

ಇದರ ಜೊತೆಗೆ ಕರ್ನಾಟಕದಲ್ಲಿನ ತಮ್ಮ ವಿರೋಧಿಗಳಿಗೆ ತಮ್ಮ ಸಾಮರ್ಥ್ಯ ಕುರಿತ ಪ್ರಬಲ ಸಂದೇಶ ರವಾನಿಸುವ ದೃಷ್ಟಿಯಿಂದ 15 ವಿಧಾನಸಭೆ ಕ್ಷೇತ್ರಗಳಲ್ಲೂ ತಾಲೀಮು ನಡೆಸುತ್ತಿದ್ದಾರೆ.

ಈಶ್ವರಪ್ಪ ಮತ್ತು ವಿಶ್ವನಾಥ್ ಕೆಲವು ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯಬಹುದು ಎಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹುಣಸೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಮತ್ತೆ  ತಾವು ಸಿಎಂ ಆಗಬೇಕೆಂಬ ಬಯಕೆಗೆ ಮತ್ತಷ್ಟು ಪುಷ್ಟಿ ನೀಡುತ್ತಿದ್ದಾರೆ.

ಇದರ ಬೆನ್ನಲ್ಲೆ ಎಚ್.ವಿಶ್ವನಾಥ್ ಕೂಡ ತಮ್ಮ ಸಮುದಾಯದ ಮುಖಂಡರುಗಳ ಜೊತೆ ಸಭೆ ನಡೆಸಿದ್ದಾರೆ, ಮುಂಬರುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ, ಸಮುದಾಯದ ಮತದಾರರ ಮಸ್ಸು ಗೆಲ್ಲಲು ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ, ಹುಣಸೂರಿನಲ್ಲಿರುವ ಸಮುದಾಯದ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ಹುಣಸೂರಿನಲ್ಲಿರುವ ಒಕ್ಕಲಿಗ ಸಮುದಾಯದವರು ಈಗಾಗಲೇ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಕುರುಬರು ಪ್ರಬುದ್ಧರು, ಅವರನ್ನು ಯಾವುದೇ ಪಕ್ಷ ಅಥವಾ ನಾಯಕನೊಬ್ಬ ನಿಯಂತ್ರಿಸಲು ಸಾಧ್ಯವಿಲ್ಲ,  ತಾಸೂಬಕಿಗೆ ಯಾವುದ ಒಳ್ಳೆಯದು ಎಂಬ ಬಗ್ಗೆ ಅವರಿಗೆ ಅರಿವಿದೆ ಎಂದು ಮಾಜಿ ಸಚಿವ ವಿಶ್ವನಾಥ್ ಹೇಳಿದ್ದಾರೆ, 

ಕುರುಬ ಸಮುದಾಯದ ಮೇಲೆ ಸಿದ್ದರಾಮಯ್ಯ ಅವರ ಹಿಡಿತ ತಗ್ಗಿಸಲು ಬಿಜೆಪಿ ಈಶ್ವರಪ್ಪ ಅವರನ್ನು ಮುಂದೆ ಬಿಟ್ಟಿದೆ. ಈ ಭಾಗದಲ್ಲಿ ಬಿಜೆಪಿ ಗೆದ್ದರೇ ಪಕ್ಷ ಮತ್ತಷ್ಟು ಪ್ರಾಬಲ್ಯವಾಗಲಿದೆ ಎಂಬುದು ಬಿಜೆಪಿ ಆಸೆಯಾಗಿದೆ. ಆದರೆ ಮೂವರು ನಾಯಕರುಗಳ ಪ್ರಾಬಲ್ಯದಿಂದ ಮತದಾರರಲ್ಲಿ ಗೊಂದಲ ಮೂಡಿದೆ, ಯಾರಿಗೆ ತಾವು ಬೆಂಬಲಿಸಬೇಕು ಎಂಬ ಕನ್ ಫ್ಯೂಶನ್ ನಲ್ಲಿ ಮುಳುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com