ಮೇಲ್ಮನೆ ಗದ್ದಲ: ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟೀಸ್; ಸಮಗ್ರ ವರದಿ ಸಲ್ಲಿಸುವಂತೆ ಸಭಾಪತಿ ಸೂಚನೆ

ಸದನ ಕಾರ್ಯಕಲಾಪ ದಾರಿ ತಪ್ಪಲು ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಅತೀವ ನಿರ್ಲಕ್ಷ್ಯ ತೋರಿರುವ ವಿಧಾನಪರಿಷತ್ ಕಾರ್ಯದರ್ಶಿಯವರಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ವಿಧಾನ ಪರಿಷತ್
ವಿಧಾನ ಪರಿಷತ್
Updated on

ಬೆಂಗಳೂರು: ಸದನ ಕಾರ್ಯಕಲಾಪ ದಾರಿ ತಪ್ಪಲು ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಅತೀವ ನಿರ್ಲಕ್ಷ್ಯ ತೋರಿರುವ ವಿಧಾನಪರಿಷತ್ ಕಾರ್ಯದರ್ಶಿಯವರಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಕರ್ತವ್ಯ ನಿರ್ಲಕ್ಷ್ಯ ಮಾಡಿರುವ ನಿಮ್ಮಮೇಲೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯನ್ವಯ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ನಡಾವಳಿಕೆ ವಿಧಾನಮಂಡಲದ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ನಿಯಮ ಬಾಹಿರವಾಗಿ, ಬೇಜವಾಬ್ದಾರಿ ಮತ್ತು ಕರ್ತವ್ಯ ನಿರ್ಲಕ್ಷ್ಯತನದ ನಡವಳಿಕೆ ಪ್ರದರ್ಶಿಸಿದ್ದೀರಿ. ನಿಮ್ಮ ಕಾರ್ಯನಿರ್ವಹಣೆ ಅಧಿಕಾರ ವ್ಯಾಪ್ತಿ ಮೀರಿದ್ದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ತಿಂಗಳ 15 ರಂದು ಸದನದಲ್ಲಿ ಅಹಿತಕರ ಘಟನೆ ನಡೆದಿದೆ. ಆಡಳಿತ ಪಕ್ಷದ ಸದಸ್ಯರು ನಾನು ಸದನಕ್ಕೆ ಪ್ರವೇಶ ಮಾಡುವುದನ್ನು ನಿರ್ಬಂಧಿಸಿರುವುದು ಸೇರಿದಂತೆ ಸದನದ ಕಾರ್ಯಕಲಾಪಗಳ ನಿಯಮಾವಳಿಗಳಿಗೆ ವ್ಯಕ್ತಿರಿಕ್ತವಾದ ಘಟನೆಗಳು ನಡೆದಿವೆ. ಇವು ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೂ ಸಹ ಗುರಿಯಾಗಿವೆ.

ಇಂತಹ ಬೆಳವಣಿಗೆಯಿಂದ ಶತಮಾನಕ್ಕೂ ಮೀರಿದ ಇತಿಹಾಸವುಳ್ಳ ಸದನದ ಘನತೆಗೆ ಧಕ್ಕೆಯಾಗಿದೆ. ಸದನದ ಸಭಾಪತಿಯಾಗಿ ಸಾರ್ವಜನಿವಾಗಿ ಹೇಳಿಕೆ ನೀಡಬೇಕಾಗಿದ್ದು, ಇದಕ್ಕೆ ಪೂರಕವಾಗುವಂತೆ ಸದನದ ಎಲ್ಲಾ ಘಟನೆಗಳಿಗೂ ಪ್ರತ್ಯಕ್ಷದರ್ಶಿಯಾಗಿದ್ದ ತಾವು ಸದನ ಪ್ರಾರಂಭವಾದ ಮತ್ತು ತಾವು ಬಂದು ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ ಘಟನೆಯವರೆಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಪ್ರತಾಪ್ ಚಂದ್ರ ಶೆಟ್ಟಿ ಸೂಚಿಸಿದ್ದಾರೆ.

ವಿಧಾನಪರಿಷತ್ತಿನ ಜಾಲತಾಣದಲ್ಲಿ ಕಾರ್ಯದರ್ಶಿಯಾದ ತಾವು ಪ್ರಕಟಿಸಿರುವ ದೃಷ್ಯ ಮಾಲಿಕೆಯನ್ನು ವೀಕ್ಷಿಸಿದ್ದೇನೆ. ಕೋರಂ ಬೆಲೆ ಇನ್ನೂ ಚಾಲನೆಯಲ್ಲಿದ್ದಾಗಲೇ ನಿಯಮ ಬಾಹಿರವಾಗಿ ಉಪಸಭಾಪತಿ ಅವರು ಸಭಾಪತಿ ಪೀಠ ಅಲಂಕರಿಸಿದ್ದರು. ಸಭಾಪತಿ ಅವರು ಸದನ ಪ್ರವೇಶಿಸಿಸುವ ದ್ವಾರವನ್ನು ಮುಚ್ಚಿ ನನ್ನ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಸಹ ಕಂಡು ಬಂದಿದೆ.

ಅಲ್ಲದೇ ನಿಯಮ ಬಾಹಿರವಾಗಿ ಪೀಠ ಅಲಂಕರಿಸಿದ್ದ ಉಪಸಭಾಪತಿ ಅವರಿಗೆ ಸರಿಯಾಗಿ ಮಾಹಿತಿ ನೀಡದೇ ಸದನ ಮುಂದುವರೆಸುವ ಚಿತಾವಣೆ ನಡೆದಿದ್ದು, ಇದಕ್ಕೆ ತಾವು ದಾಖಲೆಗಳನ್ನು ಒದಗಿಸಿರುವುದು ಕಂಡು ಬಂದಿದೆ. ತಮ್ಮ ಕರ್ತವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾದ ಹಲವು ಅಂಶಗಳನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ತಕ್ಷಣವೇ ಸಮಗ್ರ ವರದಿ ಸಲ್ಲಿಸುವಂತೆ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com