ಕತ್ತಿ ವರಸೆಗೆ ಯಡಿಯೂರಪ್ಪ ಸುಸ್ತು: ಮನವೊಲಿಕೆ ಜವಾಬ್ದಾರಿ ಸವದಿಗೆ ವಹಿಸಿದ ಸಿಎಂ

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಉಮೇಶ್ ಕತ್ತಿ ನಿನ್ನೆ ಸಂಜೆಯಿಂದ ಬಿಜೆಪಿ ನಾಯಕರ ಕೈಗೆ ಸಿಕ್ಕದೆ ದೂರ ಉಳಿದಿದ್ದು,ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ
ಶಾಸಕ ಉಮೇಶ್ ಕತ್ತಿ
ಶಾಸಕ ಉಮೇಶ್ ಕತ್ತಿ
Updated on: 

ಬೆಂಗಳೂರು: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಉಮೇಶ್ ಕತ್ತಿ ನಿನ್ನೆ ಸಂಜೆಯಿಂದ ಬಿಜೆಪಿ ನಾಯಕರ ಕೈಗೆ ಸಿಕ್ಕದೆ ದೂರ ಉಳಿದಿದ್ದು,ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ

ರಾಜಭವನಕ್ಕೆ ಕಳುಹಿಸಿದ್ದ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಆಕ್ರೋಶಗೊಂಡು ಸಿಎಂ ನಿವಾಸದಿಂದ ನಿರ್ಗಮಿಸಿದ ಕತ್ತಿ ನಂತರ ಸಿಎಂ‌ ಸೇರಿದಂತೆ ಯಾವ ಬಿಜೆಪಿ ನಾಯಕರ ಕೈಗೂ ಸಿಗದೇ ದೂರ ಉಳಿದಿದ್ದಾರೆ

ರಾತ್ರಿಯೇ ಸಿಎಂ‌ ಸೂಚನೆಯಂತೆ ಉಮೇಶ್ ಕತ್ತಿ ಅವರನ್ನು ಹುಡುಕಿ ಕೊಂಡು  ಡಿಸಿಎಂ ಗೋವಿಂದ ಕಾರಜೋಳ ಹಾಗು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋದರೂ ಕತ್ತಿ ಕೈಗೆ ಸಿಗಲಿಲ್ಲ,ಇಂದು ಬೆಳಗ್ಗೆಯೂ ಮತ್ತೊಮ್ಮೆ ಕತ್ತಿ ಸಂಪರ್ಕ ಮಾಡಲು ಯತ್ನಿಸಿದರೂ ಸಾಧ್ಯವಾಗದೆ ಕಾರಜೋಳ ಹಾಗು ಬೊಮ್ಮಾಯಿ ಸಿಎಂ ನಿವಾಸಕ್ಕೆ ಆಗಮಿಸಿ ಮಾಹಿತಿ ನೀಡಿದರು.

ನಂತರ ಸಿಎಂ ಕೂಡ ದೂರವಾಣಿ ಮೂಲಕ ಸಂಪರ್ಕ ಮಾಡಲು ಯತ್ನಿಸಿದರೂ ಸಾಧ್ಯವಾಗ ಲಿಲ್ಲ ಕಡೆಗೆ ಬೇಸರದಲ್ಲೇ ಸಿಎಂ ರಾಜಭವನಕ್ಕೆ ತೆರಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com