'ಡಿ.ಕೆ.ಶಿವಕುಮಾರ್ ಕೊತ್ವಾಲ್ ರಾಮಚಂದ್ರನ ಸಂಸ್ಕೃತಿ ಬಿಟ್ಟು, ಕೆಪಿಸಿಸಿ ಹುದ್ದೆಗೆ ಗೌರವ ನೀಡಲಿ'

ಡಿಕೆ ಶಿವಕುಮಾರ್, ನನ್ನ ಮತ್ತು ಪಕ್ಷದ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಅವರು ಇನ್ನು ಮುಂದಾದರೂ ಕೊತ್ವಾಲ್ ರಾಮಚಂದ್ರನ ಸಂಸ್ಕೃತಿಯಿಂದ ಹೊರಬರಬಂದು ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು ಸಿಪಿ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. 
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on: 

ರಾಮನಗರ: ಡಿಕೆ ಶಿವಕುಮಾರ್, ನನ್ನ ಮತ್ತು ಪಕ್ಷದ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಅವರು ಇನ್ನು ಮುಂದಾದರೂ ಕೊತ್ವಾಲ್ ರಾಮಚಂದ್ರನ ಸಂಸ್ಕೃತಿಯಿಂದ ಹೊರಬರಬಂದು ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು ಸಿಪಿ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಮಾಡಿ ಸ್ಪಷ್ಟನೆ ನೀಡುವುದರ ಜೊತೆಗೆ ತಿರುಗೇಟು ನೀಡಿದ್ದಾರೆ. ನಾನು ಡಿ.ಕೆ.ಶಿವಕುಮಾರ್ ಕಾಲು ಹಿಡಿದಿಲ್ಲ. ಅಂತಹ ಸಂದರ್ಭ ನನಗೆ ಬರುವುದು ಇಲ್ಲ. ಕೆಪಿಸಿಸಿ ಹುದ್ದೆಗೆ ಅವರು ಅಗೌರವ ತರಬಾರದು ಎಂದು ವ್ಯಂಗ್ಯವಾಡಿದ್ದಾರೆ.

ಆರು  ತಿಂಗಳ ಹಿಂದೆಯೇ ನನ್ನನ್ನು ಎಂಎಲ್​ಸಿ ಮಾಡುವುದು ಗೊತ್ತಿತ್ತು. ನಾನು ಸರ್ಕಾರ ಕೆಡವಲು ಯಾವುದೇ ಪ್ರಯತ್ನ ಮಾಡಿಲ್ಲ. ಆದರೆ, ಶಿವಕುಮಾರ್ ಮತ್ತು ಸಹೋದರ ಸುರೇಶ್ ಸುಳ್ಳು ಹೇಳುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಡಿಕೆಶಿ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com