ಕೋವಿಡ್-19 ಭೀತಿ ಹಿನ್ನೆಲೆ, ವಿಧಾನಪರಿಷತ್ ನ 4 ಸ್ಥಾನಗಳ ಚುನಾವಣೆ ಮುಂದೂಡಿಕೆ 

ಕೋವಿಡ್ -19 ಭೀತಿ ಹಿನ್ನೆಲೆಯಲ್ಲಿ ವಿಧಾನಸಭಾ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಈ ತಿಂಗಳ ನಂತರ ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ವಿಧಾನಪರಿಷತ್
ವಿಧಾನಪರಿಷತ್

ಬೆಂಗಳೂರು: ಕೋವಿಡ್ -19 ಭೀತಿ ಹಿನ್ನೆಲೆಯಲ್ಲಿ ವಿಧಾನಸಭಾ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಈ ತಿಂಗಳ ನಂತರ ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಆರ್ ಚೌಡ ರೆಡ್ಡಿ ತುಪಾಲಿ ( ಜೆಡಿಎಸ್ ) ಎಸ್ ವಿ ಸಂಕನೂರು ( ಬಿಜೆಪಿ ) ಹಾಗೂ ಶಿಕ್ಷಕರ ಕ್ಷೇತ್ರದಿಂದ ಗೆದಿದ್ದ ಪುಟ್ಟಣ್ಣ  ಹಾಗೂ ಕಾಂಗ್ರೆಸ್ ಪಕ್ಷದ ಶರಣಪ್ಪ ಮಟ್ಟೂರು ಅವರ ವಿಧಾನ ಪರಿಷತ್ ಸದಸ್ಯತ್ವ ಅವಧಿ ಜೂನ್ 30ಕ್ಕೆ ಕೊನೆಯಾಗಲಿದೆ.

ಚುನಾವಣಾ ಮುಂದೂಡಿದ ಮಾತ್ರಕ್ಕೆ ಸದಸ್ಯರ ಅವಧಿ ವಿಸ್ತರಣೆಯಾಗಿದೆ ಎಂಬರ್ಥವಲ್ಲ ಎಂದು ಚುನಾವಣಾ ಆಯೋಗದ ಸಿಇಒ ಸಂಜೀವ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಆದಾಗ್ಯೂ, ಐದು ನಾಮನಿರ್ದೇಶಿತ ಹಾಗೂ ಏಳು ಚುನಾಯಿತರು ಸೇರಿದಂತೆ  12 ಸ್ಥಾನಗಳಿಗೆ ಈ ತಿಂಗಳ ನಂತರ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತೀವ್ರ ಸಿದ್ಧತೆ ಹಾಗೂ ಲಾಬಿಯಲ್ಲಿ ತೊಡಗಿವೆ. ರಾಜ್ಯಸಭಾ ಚುನಾವಣೆ ಮುಗಿದ ನಂತರ ವಿಧಾನಪರಿಷತ್ ಚುನಾವಣೆಯೂ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com