ಜಿಲ್ಲಾ ಉಸ್ತುವಾರಿಗೆ ಬಿಜೆಪಿಯಲ್ಲಿ ಮೂಲ ವಲಸಿಗರ ನಡುವೆ ಸಂಘರ್ಷ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವಲಸಿಗರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ತಿಂಗಳು ತುಂಬುತ್ತಿದೆ. ಆದರೆ ಈವರೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೊರೆತಿಲ್ಲ. ಸ್ವಂತ ಜಿಲ್ಲೆಗಳಲ್ಲಿಯೇ ಉಸ್ತುವಾರಿ ಜವಾಬ್ದಾರಿ ಇಲ್ಲದ ಅನಿಶ್ಚಿತತೆಗೆ ಸಿಲುಕಿದ್ದಾರೆ
ಮೂಲ, ವಲಸಿಗ ಸಚಿವರು
ಮೂಲ, ವಲಸಿಗ ಸಚಿವರು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವಲಸಿಗರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ತಿಂಗಳು ತುಂಬುತ್ತಿದೆ. ಆದರೆ ಈವರೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೊರೆತಿಲ್ಲ. ಸ್ವಂತ ಜಿಲ್ಲೆಗಳಲ್ಲಿಯೇ ಉಸ್ತುವಾರಿ ಜವಾಬ್ದಾರಿ ಇಲ್ಲದ ಅನಿಶ್ಚಿತತೆಗೆ ಸಿಲುಕಿದ್ದಾರೆ

ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆಗೂ ಮುನ್ನ ಸಂಪುಟದಲ್ಲಿದ್ದ 17 ಜನ ಸಚಿವರ ಪೈಕಿ  12 ಜನ ಸಚಿವರಿಗೆ ಎರಡು ಜಿಲ್ಲೆಗಳ ಉಸ್ತವಾರಿ ವಹಿಸಲಾಗಿದೆ.

ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿರುವ ಬಹುತೇಕ ಸಚಿವರು ಪ್ರಭಾವಿಗಳಾಗಿದ್ದು, ಅವರಿಂದ ಯಾವ ಜಿಲ್ಲೆಯನ್ನು ವಾಪಸ್ ಪಡೆಯಬೇಕೆಂಬ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಮೊದಲಿನಿಂದಲೂ ಸಂಪುಟದಲ್ಲಿರುವ ಸಚಿವರು ತಮಗೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡುವಂತೆಯೂ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ‌ ಇದೆ.

ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಆರ್. ಅಶೋಕ್,  ಬಸವರಾಜ್ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಬಿ. ಶ್ರೀರಾಮುಲು ಹಾಗೂ ಪ್ರಭು ಚೌಹ್ವಾಣ್ ಅವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ.

ಪ್ರಮುಖವಾಗಿ ಕೆಲವು ಸಚಿವರು ತಮ್ಮ ತವರು ಜಿಲ್ಲೆಯೊಂದಿಗೆ ಹೆಚ್ಚುವರಿಯಾಗಿ ಮತ್ತೊಂದು ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com