ದಾವಣಗೆರೆ ಕೋವಿಡ್ ನಿಯಂತ್ರಣ ಸಭೆ: ಏಕವಚನದಲ್ಲೇ ಬೈದಾಡಿಕೊಂಡ ಸಂಸದ, ಶಾಸಕರು

ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಏಕವಚನದಲ್ಲೇ ವಾಕ್ ಸಮರಕ್ಕೀಳಿದಿದ್ದ ಘಟನೆಯೊಂದು ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದಿದೆ‌.
ಜಿ.ಎಂ.ಸಿದೇಶ್ವರ, ಮಾಡಾಳು ವಿರುಪಾಕ್ಷಪ್ಪ
ಜಿ.ಎಂ.ಸಿದೇಶ್ವರ, ಮಾಡಾಳು ವಿರುಪಾಕ್ಷಪ್ಪ
Updated on: 

ದಾವಣಗೆರೆ: ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಏಕವಚನದಲ್ಲೇ ವಾಕ್ ಸಮರಕ್ಕೀಳಿದಿದ್ದ ಘಟನೆಯೊಂದು ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದಿದೆ‌.

ಕೋವಿಡ್ ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಭಸವರಾಜ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಇಬ್ಬರು ರಾಜಕಾರಣಿಗಳ ನಡುವೆ ಮಾತಿನ ಚಕಮಕಿ ಬೆಳೆದಿದೆ.

ಏ ಎನೋ ಮಾತಾಡುತ್ತೀಯಾ ನೀನು ಎಂದ ಸಂಸದರಿಗೆ, ಏ ಕುತುಕೊಳ್ಳೊ ನೀನು, ನಿಂದೇನೋ ಎಂದು ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಏಕವಚನದಲ್ಲೇ‌ ತಿರುಗೇಟು ನೀಡಿದ್ದಾರೆ.

ಮಾಡಾಳು ವಿರುಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತಾಡುತ್ತಿರುವ ವೇಳೆ ಸಂಸದರ ಆಕ್ಷೇಪಣೆಗೆ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಏಕವಚನದಲ್ಲಿ ಮಾತನಾಡಿದ್ದಾರೆ.

ನಂತರ ಮಾಡಾಳು ವಿರುಪಾಕ್ಷಪ್ಪ ಅವರ ಮಾತಿಗೆ ಆಕ್ರೋಶಗೊಂಡ ಸಂಸದರು ಕುರ್ಚಿಯಿಂದ ಎದ್ದು ಬಂದಿದ್ದು, ಸ್ವಪಕ್ಷೀಯರೇ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಆರಂಭಿಸಿದ್ದಾರೆ.

ತಕ್ಷಣವೇ ಎಸ್ ಪಿ ಹನುಮಂತರಾಯ ಅವರು ಮಧ್ಯ ಪ್ರವೇಶಿಸಿ ಗಲಾಟೆ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com