ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಕರ್ನಾಟಕದ ಎರಡು ಬಹುದೊಡ್ಡ ಪಕ್ಷಗಳಿಗೆ ಅನಿರೀಕ್ಷಿತ ಸಮಸ್ಯೆಗಳನ್ನು ತಂದೊಡ್ಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ,
ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳ ನೇಮಕ 2 ಪಕ್ಷಗಳಿಗೂ ಮಹತ್ವದ ವಿಷಯವಾಗಿದೆ. 2019 ರ ಆಗಸ್ಟ್ ನಲ್ಲಿ ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಹಲವು ಜಿಲ್ಲೆಗಳ ಪ್ರವಾಸ ಕೈಗೊಂಡರು, ಜಿಲ್ಲಾಧ್ಯಕ್ಷರುಗಳ ಬದಲಾವಣೆ ಜನವರಿಯಲ್ಲಿ ನಡೆಯಿತು. ಉಪಾಧ್ಯಕ್ಷ, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತಿ ಖಜಾಂಚಿ ಹುದ್ದೆಗಳಿಗೆ ಇನ್ನೂ ನೇಮಕವಾಗಿಲ್ಲ,
ಇದರ ಜೊತೆಗೆ ಮಹಿಳಾ ಮೋರ್ಚಾ, ಎಸ್ ಎಸ್ಸಿ ಎಸ್ ಟಿ ಮತ್ತು ಯುವ ಘಟಕಗಳಿಗೆ ಇನ್ನೂ ನೇಮಕವಾಗಿಲ್ಲ, ನೂರಕ್ಕೂ ಹೆಚ್ಚಿನ ಹುದ್ದೆಗಳಿಗೆ ಇನ್ನೂ ನೇಮಕವಾಗಿಲ್ಲ. ಹೊಸ ಪದಾಧಿಕಾರಿಗಳ ನೇಮಕದ ಪಟ್ಟಿಯನ್ನು ಹೈ ಕಮಾಂಡ್ ಗೆ ಕಳುಹಿಸಲಾಗಿದೆ, ಆದರೆ ಇನ್ನೂ ಪಟ್ಟಿ ಅಂತಿಮವಾಗಿ ಬಂದಿಲ್ಲ.
ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ, ಜೂನ್ 7ರಂದು ಅಧಿಕಾರ ಸ್ವೀಕಾರ ,ಸಾಧ್ಯತೆಯಿದ್ದು, ಅದಾದ ನಂತರ ಪದಾದಿಕಾರಿಗಳ ನೇಮಕ ಆಗುವ ಸಾದ್ಯತೆಯಿದೆ ಎಂದು ಹೇಳಲಾಗುತ್ತಿದೆ.
Advertisement