ಕಮಲ ಪಾಳಯದಲ್ಲಿ ಎದ್ದ ಬಂಡಾಯದ ಕಾವು: ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡ 'ಬಂಡಾಯ' ಸಚಿವರು, ಕೇಂದ್ರ ನಾಯಕರ ಭೇಟಿಗೆ ನಿರ್ಧಾರ

ಸಚಿವ ಸಂಪುಟ ವಿಸ್ತರಣೆ ವಿಳಂಬ, ಪುನಾರಚನೆಗೆ ವರಿಷ್ಟರಿಂದ ಸಿಗದ ಅನುಮತಿ, ನಾಯಕತ್ವ ಗೊಂದಲ, ನಿಗಮಮಂಡಳಿ ನೇಮಕಾತಿಯಲ್ಲಿ ಕಡೆಗಣನೆ ಸೇರಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಂಡಾಯ ಕಾವು ಏರತೊಡಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿರುವ ಬಂಡಾಯ ಸಚಿವರು ಕೇಂದ್ರ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆಂದು...
ಬಂಡಾಯ ನಾಯಕರು
ಬಂಡಾಯ ನಾಯಕರು
Updated on

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಳಂಬ, ಪುನಾರಚನೆಗೆ ವರಿಷ್ಟರಿಂದ ಸಿಗದ ಅನುಮತಿ, ನಾಯಕತ್ವ ಗೊಂದಲ, ನಿಗಮಮಂಡಳಿ ನೇಮಕಾತಿಯಲ್ಲಿ ಕಡೆಗಣನೆ ಸೇರಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಂಡಾಯ ಕಾವು ಏರತೊಡಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿರುವ ಬಂಡಾಯ ಸಚಿವರು ಕೇಂದ್ರ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಕಳೆದ ವರ್ಷದ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದ ಉಳಿದ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಹಾಲಿ ಸಚಿವರು ಆಗ್ರಹಿಸುತ್ತಿದ್ದಾರೆ. 

ಶುಕ್ರವಾರವಷ್ಟೇ ಸಭೆ ಸೇರಿರುವ ಬಂಡಾಯ ನಾಯಕರು ಸಂಪುಟ ವಿಸ್ತರಣೆ ವಿಳಂಭ ಕುರಿತು ಹಾಗೂ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ನಾಯಕರಿಗೆ ಸಚಿವ ಕೊಡಿಸಲು ಶತಃ ಪ್ರಯತ್ನ ನಡೆಸಲು ನಿರ್ಧರಿಸಿದ್ದರೆಂದು ತಿಳಿದುಬಂದಿದೆ. ಈ ಕುರಿತು ಶೀಘ್ರಗಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ದೆಹಲಿಯ ಕೇಂದ್ರೀಯ ನಾಯಕರನ್ನು ಡಿಸೆಂಬರ್ 5 ರಂದು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ನಾಯಕರೊಬ್ಬರು ಹೇಳಿದ್ದಾರೆ. 

ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ಇದೊಂದು ಅನೌಪಚಾರಿಕ ಸಭೆಯಾಗಿತ್ತು. ಮುಖ್ಯಮಂತ್ರಿಗಳು, ಪಕ್ಷದ ವಿರುದ್ಧವಾಗಿ ಸಭೆಯನ್ನು ನಡೆಸಲಾಗಿರಲಿಲ್ಲ. ಸಬೆಯಲ್ಲಿ ಸಚಿವರಾದ ಬಿಸಿ ಪಾಟೀಲ್, ಎಸ್'ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್ ಮತ್ತು ಇತರೆ ನಾಯಕರು ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ. 

ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದ ನಾಯಕರೆಲ್ಲರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದ ಯಡಿಯೂರಪ್ಪ ಅವರು ಇದೀಗ ತಮ್ಮ ನಿರ್ಧಾರಕ್ಕೆ ಬದ್ಧರಾಗಿರಬೇಕೆಂದು ನಾಯಕರು ಇದೇ ವೇಳೆ ಆಗ್ರಹಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಕಳೆದ ವರ್ಷ ಉಪಚುನಾವಣೆ ಅಂತ್ಯಗೊಂಡ ಬಳಿಕ 10 ಮಂದಿಯನ್ನು ಸಚಿವರನ್ನಾಗಿ ಮಾಡಲಾಗಿತ್ತು. ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಮುನಿರತ್ನ ಅವರು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಮುನಿರತ್ನ, ಎಂಟಿಬಿ ನಾಗರಾಜ್, ಆರ್.ಶಂಕರ್, ವಿಶ್ವನಾಥ್ ಅವರು ಸಚಿವಾಕಾಂಕ್ಷಿಗಳಾಗಿದ್ದಾರೆ. 

ಈ ನಡುವೆ ಬಂಡಾಯ ನಾಯಕರ ನಾಯಕತ್ವ ವಹಿಸಿಕೊಂಡಿರುವಂತೆ ಬಿಂಬಿಸಿಕೊಳ್ಳುತ್ತಿರುವ ಸಚಿವ ರಮೇಶ್ ಜಾರಕಿಹೊಳಿಯವರು ಈ ಸಂಬಂಧ ಕೇಂದ್ರೀಯ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com