ಕಳೆದ 6 ವರ್ಷಗಳಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ: ಡಿ.ಕೆ.ಶಿವಕುಮಾರ್ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷವಾಗಿದೆ. ಈ ಅವಧಿಯಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ? ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷವಾಗಿದೆ. ಈ ಅವಧಿಯಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ? ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಪ್ರಶ್ನಿಸಿದ್ದಾರೆ.

ಇಂದು ಕಾಂಗ್ರೆಸ್ ಭವನದಲ್ಲಿ ಬಿಜೆಪಿ ಸರಕಾರದ ಜನ ವಿರೋಧಿ ನಡೆ ಕುರಿತ ಗೀತೆಗಳುಳ್ಳ ಆಡಿಯೋ-ವಿಡಿಯೋ ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಅತಿ ದೊಡ್ಡ ಬಹುಮತ ಇರುವ ಸರ್ಕಾರ ಇದೆ. ಇದು ಜನರು ಕೊಟ್ಟ ತೀರ್ಪು. ನಾವು ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಸರ್ಕಾರ ನುಡಿದಂತೆ ನಡೆಯಿತಾ? ಕೊಟ್ಟ ಮಾತು ಉಳಿಸಿಕೊಂಡಿತಾ? ಈ ದೇಶಕ್ಕೆ ಆದ ಲಾಭ ಏನು? ಎಂದು ಪ್ರಶ್ನಿಸಿದರು.

ಈ ಹಿಂದೆ ಆರ್ಥಿಕ ತಜ್ಞರು ಪ್ರಧಾನಮಂತ್ರಿಯಾಗಿದ್ದಾ ಗ ದೇಶ ಹೇಗಿತ್ತು? ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷ ಆಯ್ತು. ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ? ಜನರಿಗೆ ಅವರು ಉದ್ಯೋಗ ಕೊಟ್ಟರಾ? ಕಪ್ಪು ಹಣ ತಂದರಾ? ರಾಜ್ಯದಲ್ಲಿ ಶಾಂತಿ ಕಾಪಾಡಿದರಾ? ದೇಶದ ಗಡಿ ಉಳಿಸಿಕೊಂಡರಾ? ದೇಶದ ಐಕ್ಯತೆ, ಸಮಗ್ರತೆ,ಶಾಂತಿ ಉಳಿಸಿಕೊಂಡರಾ? ರೈತ ಉಳಿದನಾ? ಕಾರ್ಮಿ ಕ ಉಳಿದನಾ? ಇದರ ಬಗ್ಗೆ ಬಿಜೆಪಿ ಸ್ನೇಹಿತರು ಉತ್ತರಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ನಾನು ಪ್ರಕೃತಿ ನಿಯಮದಲ್ಲಿ ನಂಬಿಕೆ ಇಟ್ಟವನು. ಇಡೀ ಪ್ರಪಂಚ, ಮನುಕುಲ ನರಳುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಕಾಪಾಡದ ಸರ್ಕಾರ ನಮಗೆ ಬೇಕೇ? ಶಾಲೆಗೆ ಹೋಗುವ ಚಿಕ್ಕಮಕ್ಕಳು, ಅವರ ಪೋಷಕರು ಆತಂಕ ಪಡುವಂತಾಗಿದೆ. ಈ ದೇಶದಲ್ಲಿ ಶಾಂತಿ ಕಾಪಾಡಿ, ಅಭಿವೃದ್ಧಿ ಮಾಡಬೇಕು. ಜನರ ಬದುಕಿನ ಬಗ್ಗೆ ಕಾಳಜಿ ವಹಿಸಿ ,ನಾವೆಲ್ಲರೂ ಕೆಲಸ ಮಾಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com