ಕೈಮಗ್ಗ ಮಂಡಳಿ ರದ್ದು ನಿರ್ಧಾರಕ್ಕೆ ವಿರೋಧ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

ಅಖಿಲ ಭಾರತ ಕೈಮಗ್ಗ ಮಂಡಳಿ ಮತ್ತು ಅಖಿಲ ಭಾರತ ಕರಕುಶಲ ಮಂಡಳಿ ರದ್ದುಪಡಿಸುವ ಕೇಂದ್ರ ಜವಳಿ ಸಚಿವಾಲಯದ ನಿರ್ಧಾರವನ್ನು ಹಂಪಡೆಯುವಂತೆ ಆಗ್ರಹಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಅಖಿಲ ಭಾರತ ಕೈಮಗ್ಗ ಮಂಡಳಿ ಮತ್ತು ಅಖಿಲ ಭಾರತ ಕರಕುಶಲ ಮಂಡಳಿ ರದ್ದುಪಡಿಸುವ ಕೇಂದ್ರ ಜವಳಿ ಸಚಿವಾಲಯದ ನಿರ್ಧಾರವನ್ನು ಹಂಪಡೆಯುವಂತೆ ಆಗ್ರಹಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. 

ಕೇಂದ್ರ ಸರ್ಕಾರದ ನಿರ್ಧಾರ ನೇಕಾರ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ನಾಲ್ಕನೇ ಕೈಮಗ್ಗ ಗಣತಿ ಪ್ರಕಾರ ದೇಶದಲ್ಲಿ 31.45 ಲಕ್ಷ ಕುಟುಂಬಗಳು ಕೈಮಗ್ಗವನ್ನು ಅವಲಂಬಿಸಿವೆ. 2020-21 ಆಯವ್ಯಯದಲ್ಲಿ ಈ ಎರಡೂ ಮಂಡಳಿಗಳಿಗೆ ರೂ.485 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. 

ಈ ಮಂಡಳಿಗಳನ್ನು ಮುಚ್ಚುವ ನಿರ್ಧಾರ ಕೈಮಗ್ಗವನ್ನೇ ನಂಬಿದ ಲಕ್ಷಾಂತರ ಕುಟುಂಬಗಳಿಗೆ ಮಾರಕವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

‘21 ಲಕ್ಷಕ್ಕೂ ಹೆಚ್ಚು ಎಸ್‌.ಸಿ, ಎಸ್‌.ಟಿ ಹಾಗೂ ಇತರ ಹಿಂದುಳಿದ ಕುಟುಂಬಗಳು ಕೈಮಗ್ಗ ವಲಯವನ್ನು ಆಶ್ರಯಿಸಿವೆ. ಈ ಮಂಡಳಿಗಳನ್ನು ಬಲಪಡಿಸುವ ಮೂಲಕ ಕೇಂದ್ರ ಸರ್ಕಾರ, ಈ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಎಲ್ಲ ಕಾರಣಗಳಿಗೆ ಎರಡೂ ಮಂಡಳಿಗಳನ್ನು ರದ್ದುಪಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com