ಸಂಪಟ ಪುನಾರಚನೆ ವೇಳೆ ಸ್ಥಾನ ಉಳಿಸಿಕೊಳ್ಳಲು ಕಸರತ್ತು:  ರಾಜ್ಯ ಬಿಜೆಪಿ ನಾಯಕರ ದೆಹಲಿ ದಂಡಯಾತ್ರೆ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ದೆಹಲಿ ರಹದಾರಿಯಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ, ಏಕೆಂದರೇ,  ಬಿಜೆಪಿ ಮುಖಂಡರುಗಳಾದ ಸಿಪಿ ಯೋಗೇಶ್ವರ್, ರಮೇಶ್ ಜಾರಕಿಹೊಳಿ, ವಿಶ್ವನಾಥ್, ಕೋಟಾ ಶ್ರೀನಿವಾಸ ಪೂಜಾರಿ ಕಳೆದ ಕೆಲವು ದಿನಗಳಿಂದ ದೆಹಲಿ ಯಾತ್ರೆ ನಡೆಸುತ್ತಿದ್ದಾರೆ.
ವಿಧಾನಸಭೆ (ಸಂಗ್ರಹ ಚಿತ್ರ)
ವಿಧಾನಸಭೆ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ದೆಹಲಿ ರಹದಾರಿಯಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ, ಏಕೆಂದರೇ,  ಬಿಜೆಪಿ ಮುಖಂಡರುಗಳಾದ ಸಿಪಿ ಯೋಗೇಶ್ವರ್, ರಮೇಶ್ ಜಾರಕಿಹೊಳಿ, ವಿಶ್ವನಾಥ್, ಕೋಟಾ ಶ್ರೀನಿವಾಸ ಪೂಜಾರಿ ಕಳೆದ ಕೆಲವು ದಿನಗಳಿಂದ ದೆಹಲಿ ಯಾತ್ರೆ ನಡೆಸುತ್ತಿದ್ದಾರೆ.

ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದರ ಜೊತೆಗೆ ತಮ್ಮ ಬೆಂಬಲಿರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ,  ಯೋಗೇಶ್ವರ್ ಸಂಪುಟ ಸೇರಲು ಸರ್ಕಸ್ ಮಾಡುತ್ತಿದ್ದರೇ, ರಮೇಶ್ ಜಾರಕಿಹೊಳಿ ತಮ್ಮ ತಂಡದ ಎಂಟಿಬಿ ನಾಗರಾಜ್,ಆರ್ ಶಂಕರ್ ಮತ್ತು ವಿಶ್ವನಾಥ್ ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ.

ಇನ್ನೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸಿಟಿ ರವಿ ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ, ಸಂಪುಟ ಪುನಾರಚನೆ ವೇಳೆ ತಮ್ಮ ಸ್ಥಾನಗಳಿಗೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಲ್ಲಿ ಪರಾಭವಗೊಂಡಿದ್ದ ಎಚ್ ವಿಶ್ವನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸಲು ಒತ್ತಡ ಹಾಕುತ್ತಿದ್ದಾರೆ, ಮೂವರು ಬಂಡಾಯಾರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಮಾತ್ರವಲ್ಲದೇ ರಾಜರಾಜೇಶ್ವರಿನಗರ ಮತ್ತು ಮಸ್ಕಿ ಶಾಸಕರುಗಳಿಗೂ ಸ್ಥಾನ ಕಲ್ಪಿಸಿಕೊಡುವುದು ಸಿಎಂ ಯಡಿಯೂರಪ್ಪ ಅವರ ಜವಾಬ್ದಾರಿಯಾಗಿದೆ. ಇದರ ಜೊತೆಗೆ ಉಮೇಶ್ ಕತ್ತಿ ಮತ್ತು ಇತರ ನಾಯಕರು ಕೂಡ ಈಗಾಗಲೇ ದೆಹಲಿಲ್ಲಿ ಬೀಡು ಬಿಟ್ಟಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com