ಕಾಂಗ್ರೆಸ್ ಕುತಂತ್ರ, ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್ ಆದೆ, ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ: ಎಚ್.ಡಿ. ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷದ ಕುತಂತ್ರ ಹಾಗೂ ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್ ಆದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ

ಮೈಸೂರು: ಕಾಂಗ್ರೆಸ್ ಪಕ್ಷದ ಕುತಂತ್ರ ಹಾಗೂ ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್ ಆದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 2006ರಲ್ಲಿ ಹಿಂದೆ ಸಿಎಂ ಆಗಿದ್ದಾಗ ಉತ್ತಮ ಹೆಸರು ಮಾಡಿದ್ದೆ. ನನಗೆ ಬಂದಿದ್ದ ಉತ್ತಮ ಹೆಸರನ್ನು ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿತು. ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರನ್ನು ಹಾಳು ಮಾಡಿದರು.  ಕಾಂಗ್ರೆಸ್‍ನಿಂದಲೇ ಎಲ್ಲವೂ ಸರ್ವನಾಶವಾಯಿತು. ಸಿದ್ದರಾಮಯ್ಯ ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿ ಅಪಪ್ರಚಾರ ಮಾಡಿದರು ಎಂದು ಕುಮಾರಸ್ವಾಮಿ ಹೇಳಿದರು, 

'ಕಾಂಗ್ರೆಸ್‌ನವರ ಕುತಂತ್ರ ಮತ್ತು ಎಚ್‌ಡಿ ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್‌ಗೆ ನಾನು ಹೆಸರು ಕಳೆದುಕೊಂಡೆ. ಇದರಿಂದಾಗಿ ನಮ್ಮ ಶಕ್ತಿ ಕುಂದಿತು. ನಮ್ಮ ನಮ್ಮ ಕುಟುಂಬಕ್ಕೆ ಒಂದು ಶಾಪ ಇದೆ. ನಾವು ಯಾರನ್ನು ಬೆಳೆಸುತ್ತೇವೆ ಅವರೇ ನಮ್ಮ ಬಗ್ಗೆ ಮಾತನಾಡುತ್ತಾರೆ. ಈ  ಶಾಪ ವಿಮೋಚನೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ. ನಾನು 2006ರಲ್ಲಿ ಹಿಂದೆ ಸಿಎಂ ಆಗಿದ್ದಾಗ ಉತ್ತಮ ಹೆಸರು ಮಾಡಿದ್ದೆ. ನನಗೆ ಬಂದಿದ್ದ ಉತ್ತಮ ಹೆಸರನ್ನು ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿತು. ಪ್ರೀಪ್ಲ್ಯಾನ್ ಮಾಡಿ ನನ್ನ  ಹೆಸರನ್ನು ಹಾಳು ಮಾಡಿದರು. ಕಾಂಗ್ರೆಸ್‍ನಿಂದಲೇ ಎಲ್ಲವೂ ಸರ್ವನಾಶವಾಯಿತು. ಸಿದ್ದರಾಮಯ್ಯ ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿ ಅಪಪ್ರಚಾರ ಮಾಡಿದರು ಎಂದು ಹೇಳಿದರು.

'ನಾನು ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಸಕ್ರಿಯ ಸಂಘಟನೆಗೆ ಇಳಿದು ಪಕ್ಷವನ್ನು ಬಲ ಪಡಿಸುತ್ತೇನೆ. ಸಂಕ್ರಾಂತಿಯ ಬಳಿಕ ಜೆಡಿಎಸ್‌ ಪಕ್ಷವನ್ನು ಪುನಶ್ಚೇತನ ಮಾಡಲಾಗುವುದು ಎಂದು ಹೇಳಿದರು, ಇದೇ ವೇಳೆ ನಾನು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ ಎಂದು ಹೇಳಿದ  ಕುಮಾರಸ್ವಾಮಿ, ಇದು ಬಿಜೆಪಿ ಸರ್ಕಾರ ಅಲ್ಲ. ಇಲ್ಲಿ ಇರುವುದು ರಾಜ್ಯದ ಸರ್ಕಾರ. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೂ ಬಂದರೂ ರಾಜ್ಯದ ಸರ್ಕಾರ ಆಗುತ್ತದೆ. ಈ ಸರ್ಕಾರ ಪ್ರಾಧಿಕಾರಗಳನ್ನು ಆರಂಭಿಸಿ ದುಂದುವೆಚ್ಚ ಹೆಚ್ಚಾಗಿದೆ. ಒಬ್ಬೊಬ್ಬ ಅಧ್ಯಕ್ಷರಿಗೆ 3-4 ಕೋಟಿ ರೂ  ವೆಚ್ಚವಾಗುತ್ತದೆ. ಅರ್ಧ ರಾತ್ರಿಯಲ್ಲಿ ಐಶ್ಚರ್ಯ ಬಂದರೆ ಹೇಗೇ ಆಡುತ್ತಾರೋ ಹಾಗೇ ಕೆಲ ಸಚಿವರು ಹಾಗೇ ಆಡುತ್ತಿದ್ದಾರೆ. ಕೆಲವರಿಗೆ ಸಚಿವ ಸ್ಥಾನದ ಘನತೆಯೇ ಗೊತ್ತಿಲ್ಲ. ಸಚಿವರು ಜನರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆಯಿಂದ ತತ್ತರಿಸಿದ ಜನರ ನೆರವಿಗೆ ಸಚಿವರು ಧಾವಿಸಲಿಲ್ಲ. ಸಚಿವರಿಗೆ ಯಾರು ಯಾವ ಇಲಾಖೆಯ ಮಂತ್ರಿ ಎಂಬುದೇ ಗೊತ್ತಿಲ್ಲ. ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಕ್ಕೆ ಸಚಿವರು ಹೋಗುತ್ತಿದ್ದಾರೆ. ಈಗಲಾದರೂ ಗ್ರಾಮಗಳ ಜನರ ಕಷ್ಟ ಆಲಿಸಲಿ. ಸರ್ಕಾರ ಸಲಹೆ  ಮತ್ತು ಟೀಕೆ ಯಾವುದನ್ನು ಲೆಕ್ಕಕ್ಕೆ ತೆಗೆದು ಕೊಳ್ಳುತ್ತಿಲ್ಲ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಎಂಬ ಮಾತಿನಂತೆ ಸರ್ಕಾರವಿದೆ. ಯಾವುದಕ್ಕೂ ತಲೆ ಕಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ರಾಜ್ಯದಲ್ಲಿ ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ. ನಮ್ಮ ಪಕ್ಷವನ್ನು ಬಿ ಟೀಂ ಎಂದು ಪದೇ ಪದೇ ಹೇಳಿ ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತೆ ಮಾಡಿದರು. ಈಗಲೂ ವಿಪಕ್ಷವಾಗಿ ಕಾಂಗ್ರೆಸ್  ಗಟ್ಟಿಯಾದ ವಿಚಾರ ಹಿಡಿದುಕೊಂಡು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಪಚುನಾವಣೆಯ ಸೋಲಿನ ಬಗ್ಗೆ ನಡೆದ ಆತ್ಮಾವಲೋಕನಾ ಸಭೆಯಲ್ಲಿ ಸಿದ್ದರಾಮಯ್ಯ ಜೆಡಿಎಸ್‌ ಪಕ್ಷವನ್ನು ಹಗರುವಾಗಿ ಕಾಣಬಾರದು ಎಂದು ತಿಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಕಾಂಗ್ರೆಸ್ ನ ಸೋಲು, ಗೆಲುವು ಜೆಡಿಎಸ್  ಮೇಲೆ ನಿಂತಿದೆ ಎಂಬುದು ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಸಿದ್ದರಾಮಯ್ಯ ಯಾರನ್ನು ಯಾವಾಗ ಭೇಟಿ ಮಾಡುತ್ತಾರೆ ಎಂಬುದು ನನಗೆ ಗೊತ್ತು. ಮೊನ್ನೆಯೂ ಅವರು ಯಾರನ್ನು ಎಲ್ಲಿ ಭೇಟಿ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನಾನು ಸಿಎಂ ಅವರನ್ನು ಭೇಟಿ  ಮಾಡಿದರೂ ಕದ್ದು ಮುಚ್ಚಿ ಭೇಟಿ ಮಾಡುವುದಿಲ್ಲ ಎಂದು ಟಾಂಗ್ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com