10+3 ಸೂತ್ರ: ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ರಹಸ್ಯ ಭೇಟಿ!

ಸಂಪುಟ ವಿಸ್ತರಣೆಯ 10+3 ಸೂತ್ರ ಘೋಷಿಸುತ್ತ ಇದ್ದ ಹಾಗೇ, ಇತ್ತ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಂಗಳೂರು: ಸಂಪುಟ ವಿಸ್ತರಣೆಯ 10+3 ಸೂತ್ರ ಘೋಷಿಸುತ್ತ ಇದ್ದ ಹಾಗೇ, ಇತ್ತ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ಮುಗಿಸಿ ಧವಳಗಿರಿಗೆ ಬರುತ್ತಿದ್ದ ಹಾಗೇ ರಹಸ್ಯವಾಗಿ ರಮೇಶ್ ಜಾರಕಿಹೊಳಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದರು.ನೂತನ ಶಾಸಕರಲ್ಲಿ ಒಬ್ಬರನ್ನು ಕೈ ಬಿಡಲು ನಿರ್ಧಾರವಾಗಿದ್ದು,ಹೀಗಾಗಿ ಮಹೇಶ್ ಕುಮ್ಟಳ್ಳಿಗೆ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ. 

ಈ ಸಂಬಂಧ ಸಿಎಂ ರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದ ಬಳಿಕ ರಮೇಶ್ ಜಾರಕಿಹೊಳಿ ಇದುವರೆಗೂ ಯಡಿಯೂರಪ್ಪನವರ ಮನೆ ಬಾಗಿಲು ತುಳಿದಿಲ್ಲ. ಕೇವಲ ಫೋನ್ ಗಳಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧ ಚರ್ಚೆ ನಡೆಸುತ್ತಿದ್ದರು. ಆದ್ರೆ, ಇದೀಗ ದಿಢೀರನೇ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಹಿಂಬಾಗಿಲಿನಿಂದ ಕಾಲಿಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಬಿಜೆಪಿ ಶಾಸಕರಾಗಿ ಏಕೆ ಅವರು ಮುಂಬಾಗಿಲು ಬಿಟ್ಟು ಹಿಂಬಾಗಿಲಿನಿಂದ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ ಎನ್ನುವ ಚರ್ಚೆಗಳು ಬಿಜೆಪಿ ವಲಯದಲ್ಲಿ ನಡೆದಿವೆ.

11 ಶಾಸಕರಿಗೂ ಮಂತ್ರಿ ಮಾಡುವಂತೆ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆದ್ರೆ, 10 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಈಗಾಗಲೇ ತೀರ್ಮಾನಿಸಿದ್ದಾರೆ. 

ಮಹೇಶ್ ಕುಮಟಳ್ಳಿಯನ್ನು ಸಂಪುಟದಿಂದ ಕೈಬಿಡಲಾಗುತ್ತಿದ್ದು ಅವರನ್ನು ಸಮಧಾನ ಮಾಡುವಂತೆ ಬಿಎಸ್ ವೈ, ರಮೇಶ್ ಜಾರಕಿಹೊಳಿಗೆ ಸಂದೇಶ ನೀಡಿದ್ದಾರೆ. ಆದ್ರೆ, ಇದಕ್ಕೆ ಒಪ್ಪದ ರಮೇಶ್ ಜಾರಕಿಹೊಳಿ ಅದು ಸಾಧ್ಯವೇ ಇಲ್ಲ. 11 ಶಾಸಕರಿಗಳಿಗೂ ಮಂತ್ರಿ ಸ್ಥಾನ ಕೊಡಬೇಕೆಂದು ಯಡಿಯೂರಪ್ಪಗೆ ಮರು ಸಂದೇಶ ಕೊಟ್ಟಿದ್ದಾರೆ.

ಇದರಿಂದ ಸಿಎಂ ಕೊಂಚ ಆತಂಕಕ್ಕೊಳಗಾಗಿದ್ದು, ಈ ಬಗ್ಗೆ ಚರ್ಚೆ ಮಾಡಲು ರಮೇಶ್ ಜಾರಕಿಹೊಳಿಗೆ ಧವಳಗಿರಿ ನಿವಾಸಕ್ಕೆ ಬರುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಅದರಂತೆ  ರಮೇಶ್ ಜಾರಕಿಹೊಳಿ ಯಾರ ಕಣ್ಣಿಗೂ ಬೀಳಬಾರದೆಂದು ಯಡಿಯೂರಪ್ಪನವರನ್ನ ಭೇಟಿ ಮಾಡಲು ಹಿಂಬಾಗಿನಿಂದ ತೆರಳಿದ್ದಾರೆ. ಆದ್ರೆ, ಇಬ್ಬರ ನಡುವೆ ಏನೆಲ್ಲಾ ಚರ್ಚೆಗಳು ನಡೆದವು ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com