ಯೋಗೇಶ್ವರ್'ಗೆ ಕೈತಪ್ಪಿದ ಸಚಿವ ಸ್ಥಾನ: ಸಂಭ್ರಮಕ್ಕೆ ಸಜ್ಜಾಗಿದ್ದ ಬೆಂಬಲಿಗರಿಗೆ ತೀವ್ರ ಬೇಸರ

ಸಿ.ಪಿ.ಯೋಗೇಶ್ವರ್ ಅವರು ಮಂತ್ರಿಯಾಗಿಯೇ ಆಗುತ್ತಾರೆಂದು ನಂಬಿಕೊಂಡು ಸಂಪುಟ ವಿಸ್ತರಣೆಗೂ ಮುನ್ನವೇ ನೂತನ ಸಚಿವರಿಗೆ ಅಭಿನಂದನೆಗಳು ಎಂದು ಹೇಳಿ ಬ್ಯಾನರ್ ಗಳನ್ನು ಹಾಕಿದ್ದ ಬೆಂಬಲಿಗರಿಗೆ, ಸಚಿವ ಸಂಪುಟ ವಿಸ್ತರಣೆ ಬಳಿಕ ತೀವ್ರ ನಿರಾಸೆಯಾಗಿದೆ.
ಯೋಗೇಶ್ವರ್
ಯೋಗೇಶ್ವರ್

ಮೈಸೂರು: ಸಿ.ಪಿ.ಯೋಗೇಶ್ವರ್ ಅವರು ಮಂತ್ರಿಯಾಗಿಯೇ ಆಗುತ್ತಾರೆಂದು ನಂಬಿಕೊಂಡು ಸಂಪುಟ ವಿಸ್ತರಣೆಗೂ ಮುನ್ನವೇ ನೂತನ ಸಚಿವರಿಗೆ ಅಭಿನಂದನೆಗಳು ಎಂದು ಹೇಳಿ ಬ್ಯಾನರ್ ಗಳನ್ನು ಹಾಕಿದ್ದ ಬೆಂಬಲಿಗರಿಗೆ, ಸಚಿವ ಸಂಪುಟ ವಿಸ್ತರಣೆ ಬಳಿಕ ತೀವ್ರ ನಿರಾಸೆಯಾಗಿದೆ. 

ಈ ಹಿಂದೆ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆಗೆ ಸಜ್ಜಾಗಿದ್ದರು. ನೂತನ ಸಚಿವರಿಗೆ ಅಭಿನಂತನೆ ಕೋರುವ ಬ್ಯಾನರ್ ಗಳನ್ನು ರಸ್ತೆಗಳಲ್ಲಿ ಹಾಕಿದ್ದರು. ರಾಮನಗರ, ಚನ್ನಪಟ್ಟಣದಲ್ಲಿ ಈ ಬ್ಯಾನರ್ ಗಳು ರಾರಾಜಿಸುತ್ತಿದ್ದವು. ಆದರೆ ಕೊನೆ ಕ್ಷಣದಲ್ಲಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಇದರಿಂತೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಯೋಗೇಶ್ವರ್ ಅವರು ಸಚಿವರಾದರೆ, ಚೆನ್ನಪಟ್ಟಣ ಹಾಗೂ ರಾಮನಗರ ಹೆದ್ದಾರಿಯನ್ನು ಬಂದ್ ಮಾಡಿ, ಸ್ಥಲದಲ್ಲಿ ದೊಡ್ಡ ಮಟ್ಟದಲ್ಲಿ ಸಂಭ್ರಮವಾಚರಿಸಲು ಬೆಂಬಲಿಗರು ಸಜ್ಜಾಗಿದ್ದರು. ಈ ಮೂಲಕ ಕುಮಾರಸ್ವಾಮಿ ಹಾಗೂ ಡಿಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಲು ಮುಂದಾಗಿದ್ದರು. 

ಯೋಗೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ಯಡಿಯೂರಪ್ಪ ನಿರ್ಧರಿಸಿದ್ದರು. ಆದರೆ, ಇದಕ್ಕೆ ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಯೋಗೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಇದಕ್ಕೂ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com