'ಗೋಲಿಬಾರ್ ಮಾಡೋರಿಗೆ ಜನ ಪೊರಕೇಲಿ ಹೊಡುದ್ರು.. SHOCK ಹೊಡೀತಾ??': ದೆಹಲಿ ಫಲಿತಾಂಶದ ಕುರಿತು ಪ್ರಕಾಶ್ ರೈ ಗೇಲಿ!

ಗೋಲಿಬಾರ್ ಮಾಡೋರಿಗೆ ಜನ ಪೊರಕೇಲಿ ಹೊಡುದ್ರು.. SHOCK ಹೊಡೀತಾ?? ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

Published: 11th February 2020 02:17 PM  |   Last Updated: 11th February 2020 02:17 PM   |  A+A-


Actor Prakash raj hits back at BJP

ಪ್ರಕಾಶ್ ರೈ ಮತ್ತು ಸಿಹಿ ಹಂಚುತ್ತಿರುವ ಕೇಜ್ರಿವಾಲ್

Posted By : Srinivasamurthy VN
Source : Online Desk

ಬೆಂಗಳೂರು: ಗೋಲಿಬಾರ್ ಮಾಡೋರಿಗೆ ಜನ ಪೊರಕೇಲಿ ಹೊಡುದ್ರು.. SHOCK ಹೊಡೀತಾ?? ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮೇಲುಗೈ ಸಾಧಿಸಿದ್ದು, ಈ ಬಾರಿಯೂ ಆಮ್ ಆದ್ಮಿ ಪಕ್ಷ ದೆಹಲಿ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಬಯಕೆ ಹೊಂದಿರುವ ಬಿಜೆಪಿಯ ಕನಸು ಭಗ್ನವಾಗಿದ್ದು, ಬಿಜೆಪಿ ವಿರೋಧಿಗಳು ಇದನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ನಟ ಪ್ರಕಾಶ್ ರೈ, ಇದು ಬಿಜೆಪಿಗೆ ಜನರು ಕೊಟ್ಟಿರುವ ಪೊರಕೆ ಏಟು ಎಂದು ಲೇವಡಿ ಮಾಡಿದ್ದಾರೆ. 'ದೆಹಲಿ ಫಲಿತಾಂಶವು ರಾಜಧಾನಿಯಲ್ಲಿ ಬಿಜೆಪಿಗೆ ನೀಡಿದ ಗಲ್ಲುಶಿಕ್ಷೆ ಎಂಬ ಎರಡು ಅರ್ಥದ ಪದವನ್ನು ಬಳಸಿರುವ ಅವರು, ಗುಂಡು ಹಾರಿಸಿ ಎಂದು ಕರೆ ನೀಡಿದವರಿಗೆ ಜನರು ಶಾಕ್ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ದೆಹಲಿ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಪ್ರತಿಭಟನಾಕಾರರಿಗೆ ಗುಂಡುಹೊಡೆಯಬೇಕು ಎಂದು ಹೇಳಿದ್ದರು. ಇದು ವ್ಯಾಪಕ ಆಕ್ರೋಶ, ಟೀಕೆಗೆ ಒಳಗಾಗಿತ್ತು. ಇದೇ ಹೇಳಿಕೆಯನ್ನು ಹಿನ್ನಲೆಯಾಗಿಸಿಕೊಂಡು ಪ್ರಕಾಶ್ ರೈ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Stay up to date on all the latest ರಾಜಕೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp