ಮಂಗಳೂರು ಗೋಲಿಬಾರ್ ಮತ್ತು ದೇಶದ್ರೋಹ ಕೇಸ್ ಪ್ರಕರಣ: ವಿಧಾನಸಭೆಯಲ್ಲಿ ಕೋಲಾಹಲ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್‌ ಹಾಗೂ ಬೀದರ್‌ ಶಾಹೀನ್‌ ಕಾಲೇಜು ವಿದ್ಯಾರ್ಥಿನಿ, ಮುಖ್ಯ ಶಿಕ್ಷಕಿ ಮೇಲೆ ದೇಶದ್ರೋಹ ಪ್ರಕರಣ ದಾಖಲು ವಿಚಾರವನ್ನು ವಿಪಕ್ಷ ಕಾಂಗ್ರೆಸ್‌ ಮಂಗಳವಾರ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದು, ಎರಡು ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

Published: 19th February 2020 10:13 AM  |   Last Updated: 19th February 2020 10:13 AM   |  A+A-


Siddramaiah

ವಿಧಾನಸಭೆಯಲ್ಲಿ ಸಿದ್ದರಾಮಯ್ಯ

Posted By : Shilpa D
Source : The New Indian Express

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್‌ ಹಾಗೂ ಬೀದರ್‌ ಶಾಹೀನ್‌ ಕಾಲೇಜು ವಿದ್ಯಾರ್ಥಿನಿ, ಮುಖ್ಯ ಶಿಕ್ಷಕಿ ಮೇಲೆ ದೇಶದ್ರೋಹ ಪ್ರಕರಣ ದಾಖಲು ವಿಚಾರವನ್ನು ವಿಪಕ್ಷ ಕಾಂಗ್ರೆಸ್‌ ಮಂಗಳವಾರ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದು, ಎರಡು ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಾಗಿ ಕುಸಿದಿದೆ. ರಾಜ್ಯ ಸರ್ಕಾರ ಪೊಲೀಸ್‌ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯ ದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ.  ಸಿಎಎ ವಿರೋಧಿಸುವವರ ವಿರುದ್ಧ ಬಿಜೆಪಿ ಕುಮ್ಮಕ್ಕಿ ನಿಂದಲೇ ಪ್ರಕರಣಗಳು ದಾಖಲಾಗಿ ಗೋಲಿಬಾರ್‌ನಂತಹ ಘಟನೆ ನಡೆದಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದು, ಆಡಳಿತಾರೂಢ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಪರಸ್ಪರ ಮಾತಿನ ಚಕಮಕಿಗೆ ಕಾರಣವಾಯಿತು.

ನು ಯಾರಿಗೂ ಡಿಕ್ಟೇಟ್‌ ಮಾಡುತ್ತಿಲ್ಲ. ನನ್ನ ಹಕ್ಕು ಮಂಡಿಸುತ್ತಿದ್ದೇನೆ, ನೀವು ನನ್ನ ಹಕ್ಕು ಕಸಿದುಕೊಳ್ಳಬೇಡಿ, ಇದು ಗಂಭೀರವಾದ ವಿಚಾರ, ಈಗ ಚರ್ಚೆ ಮಾಡದಿದ್ದರೆ ಅದರ ಮಹತ್ವವೇ ಹೋಗುತ್ತದೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯಕ್ಕೆ ನಮ್ಮ ವಿರೋಧವಿಲ್ಲ, ನಾವೆಲ್ಲರೂ ಅದರಲ್ಲಿ ಭಾಗವಹಿಸುತ್ತೇವೆ. 

ನೀವು ಹೀಗೆ ಮಾಡುವುದಾದರೆ ನಾವು ಬಹಿಷ್ಕರಿಸಬೇಕಾಗುತ್ತದೆ, ವಿಪಕ್ಷ ಇಲ್ಲದ ಸದನ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ನಡುವೆ ಮಾತಿನ ಚಕಮಕಿಗೂ ಸದನ ಸಾಕ್ಷಿಯಾಯಿತು.

ಸಿದ್ದರಾಮಯ್ಯ ಅವರು ನಿಯಮ 60ರಡಿ ನಿಲುವಳಿ ಸೂಚನೆ ಮಂಡಿಸಿ ವಿಷಯ ಪ್ರಸ್ತಾವ ಮಾಡಿದ ಅನಂತರ ನಿಯಮ 69ರಡಿ ಪರಿವರ್ತನೆ ಮಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಬುಧವಾರ ಅಪರಾಹ್ನ 3 ಗಂಟೆಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ರಾಜ್ಯ ಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ದಡಿ ಮಾತನಾಡಲು ಅವಕಾಶ ಕೊಟ್ಟಿದ್ದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು. 

ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದ್ದ ಜೆಡಿಎಸ್‌, ಕಲಾಪ ಬಹಿಷ್ಕಾರದಲ್ಲಿ ಕಾಂಗ್ರೆಸ್‌ ಜತೆಗೂಡಲಿಲ್ಲ. ಅನಂತರ ಮಧ್ಯಾಹ್ನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಿದ್ದರಾಮಯ್ಯ ಅವರ ಕಚೇರಿಗೆ ತೆರಳಿ ಸಂಧಾನ ನಡೆಸಿ, ಸದನಕ್ಕೆ ಕರೆತಂದರು. ಬುಧವಾರ ಮಧ್ಯಾಹ್ನದ ಬದಲು ಬೆಳಗ್ಗೆಯೇ ಚರ್ಚೆಗೆ ಅವಕಾಶ ಕೊಡಲಾಗುವುದು ಎಂದು ಸ್ಪೀಕರ್‌ ರೂಲಿಂಗ್‌ ನೀಡಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp