'ಸಿದ್ದರಾಮಯ್ಯರ ಹೇಳಿಕೆ ಮೂರ್ಖತನದ್ದು; ಅವಕಾಶ ಹೇಗೆ ಕೊಡೊದಿಲ್ಲವೋ ನಾವು ನೋಡ್ತೀವಿ'

ಯತ್ನಾಳ್ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ವಿಧಾನಸಭಾ ಹಾಗೂ ವಿಧಾನ ಮಂಡಲ ಸಭೆ ನಡೆಸಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯರ ಹೇಳಿಕೆ ಮೂರ್ಖತನದ್ದು ಎಂದು  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಂಗಾವತಿ: ಯತ್ನಾಳ್ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ವಿಧಾನಸಭಾ ಹಾಗೂ ವಿಧಾನ ಮಂಡಲ ಸಭೆ ನಡೆಸಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯರ ಹೇಳಿಕೆ ಮೂರ್ಖತನದ್ದು ಎಂದು  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಧನಾ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಚರ್ಚೆ ಪರಿಹಾರಕ್ಕೆ ಇರುವ ವೇದಿಕೆ. ಸಂವಿಧಾನ ಬದ್ಧವಾಗಿರುವ ಈ ವೇದಿಕೆಯನ್ನು ನಡೆಸಲು ಬಿಡುವುದಿಲ್ಲ ಎಂದು ಹೇಳಿರುವುದು ಸಿದ್ದರಾಮಯ್ಯರ ಹೇಳಿಕೆಯ ಬಗ್ಗೆ ಏನು ಹೇಳಬೇಕು?.

ಕಾಂಗ್ರೆಸ್ಸಿಗರು ಸಭೆ ನಡೆಸಲು ಹೇಗೆ ಬಿಡುವುದಿಲ್ಲವೋ ನಾವು ನೊಡುತ್ತೇವೆ. ವೈಯಕ್ತಿಕ ಚಿಚಾರ ವ್ಯಕ್ತಪಡಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಯತ್ನಾಳ ಹೇಳಿಕೆಯಲ್ಲಿ ಯಾವುದೇ ವೈರುದ್ಧ್ಯ ಇಲ್ಲ. ಹಿರಿಯರಾಗಿ ದೊರೆಸ್ವಾಮಿ ನಮಗೆಲ್ಲ ಮಾರ್ಗದರ್ಶನ ನೀಡಬೇಕು. ಆದರೆ ಕಾಂಗ್ರೆಸ್ ಮುಖವಾಣಿಯಂತೆ ಮಾತನಾಡೋದು ಸರಿಯಲ್ಲ. 

ಯತ್ನಾಳ್ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸುತ್ತಿರುವ ಕಾಂಗ್ರೆಸ್ಸಿಗರೇನು ಸಾಚಾಗಳಾ? ಈ ಹಿಂದೆ ಮೋದಿಯನ್ನು ಕೊಲೆಗಡುಕ ಎಂದು ಆರೋಪಿಸಿದ್ದ ಸಿದ್ದರಾಮಯ್ಯ ಮೇಲೆ ಹೈಕಮಾಂಡ್ ಏನಾದರೂ ಕ್ರಮಬಲಕೈಗೊಂಡಿತ್ತೆ? 
ಆಗ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರಕ್ಕೆ ಹಾಕಬಹುದಿತ್ತಲ್ಲ? ಕಾಂಗ್ರೆಸ್ಸಿಗರು ಮಾತನಾಡಿದರೆ ಸರಿ ಬೇರೆಯವರು ಮಾತನಾಡಿದರೆ ತಪ್ಪು ಹುಡುಕುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

-ವರದಿ: ಎಂ.ಜೆ. ಶ್ರೀನಿವಾಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com