ಸಿದ್ದರಾಮಯ್ಯ-ರಾಹುಲ್ ಗಾಂಧಿ ಭೇಟಿ: ಪಕ್ಷದ ಪುನಶ್ಚೇತನದ ಬಗ್ಗೆ ಚರ್ಚೆ

: ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾದ ಜಮೀರ್‌ ಅಹಮದ್‌, ರಾಘವೇಂದ್ರ ಇಟ್ನಾಳ, ಭೀಮಾ ನಾಯ್ಕ, ಭೈರತಿ ಸುರೇಶ್‌, ತರೀಕೆರೆಯ ಮಾಜಿ ಶಾಸಕ ಶ್ರೀನಿವಾಸ್‌ ಮತ್ತಿತರರನ್ನೊಳಗೊಂಡ ತಂಡದೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.
ಸಿದ್ದರಾಮಯ್ಯ-ರಾಹುಲ್ ಗಾಂಧಿ ಭೇಟಿ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಭೇಟಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾದ ಜಮೀರ್‌ ಅಹಮದ್‌, ರಾಘವೇಂದ್ರ ಇಟ್ನಾಳ, ಭೀಮಾ ನಾಯ್ಕ, ಭೈರತಿ ಸುರೇಶ್‌, ತರೀಕೆರೆಯ ಮಾಜಿ ಶಾಸಕ ಶ್ರೀನಿವಾಸ್‌ ಮತ್ತಿತರರನ್ನೊಳಗೊಂಡ ತಂಡದೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಶಸ್ತ್ರ ಚಿಕಿತ್ಸೆ ನಂತಕ ಇದೇ ಮೊದಲ ಬಾರಿಗೆ ಹೈಕಮಾಂಡ್ ಭೇಟಿ ಮಾಡಿದ್ದಾರೆ, ಇದೇ ವೇಳೆ ಸಿದ್ದರಾಮಯ್ಯ ಅವರ ಆರೋಗ್ಯದ ಬಗ್ಗೆ ರಾಹುಲ್ ವಿಚಾರಿಸಿದ್ದಾರೆ.

ರಾಜ್ಯದಲ್ಲೂ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಪ್ರಮುಖ ಸಮುದಾಯಗಳ ಒಳಗೊಳ್ಳುವಿಕೆಗೆ ಆದ್ಯತೆ ನೀಡುವುದರೊಂದಿಗೆ ಪ್ರಾದೇಶಿಕತೆಗೂ ಒತ್ತು ನೀಡುವ ಈ ಸೂತ್ರ ಅನುಸರಿಸುವುದರಿಂದ ಪಕ್ಷದ ಬಲವರ್ಧನೆ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು’ ಎಂಬ ಬೇಡಿಕೆಯನ್ನು ಕೆಲಬೆಂಬಲಿಗರು ಹೈಕಮಾಂಡ್‌ ಮುಂದೆ ಇರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com