ಸವದಿ ಡಿಸಿಎಂ ಆಗಬಹುದಾದರೇ ನಾವೇಕೆ ಮಂತ್ರಿಯಾಗಬಾರದು: ಸಿಎಂ ಗೆ ರೆಬೆಲ್ ಗಳ ಎಚ್ಚರಿಕೆ

ಗೆದ್ದ ಬಂಡಾಯ ಶಾಸಕರಿಗೆ ಮಂತ್ರಿಗಿರಿ ಕೊಡಿಸಲು ಹೈಕಮಾಂಡ್ ಜೊತೆ ಸಿಎಂ ಯಡಿಯೂರಪ್ಪ ಸೆಣಸಾಡುತ್ತಿರುವ ಕಾರಣ ಸೋತ ರೆಬೆಲ್ ಶಾಸಕರಿಗೆ ಕಾಯದೇ ಬೇರೆ ದಾರಿಯಿಲ್ಲದಂತಾಗಿದೆ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಬೆಂಗಳೂರು: ಗೆದ್ದ ಬಂಡಾಯ ಶಾಸಕರಿಗೆ ಮಂತ್ರಿಗಿರಿ ಕೊಡಿಸಲು ಹೈಕಮಾಂಡ್ ಜೊತೆ ಸಿಎಂ ಯಡಿಯೂರಪ್ಪ ಸೆಣಸಾಡುತ್ತಿರುವ ಕಾರಣ ಸೋತ ರೆಬೆಲ್ ಶಾಸಕರಿಗೆ ಕಾಯದೇ ಬೇರೆ ದಾರಿಯಿಲ್ಲದಂತಾಗಿದೆ.

ಮಂತ್ರಿಗಿರಿಗಾಗಿ ಕಾಯುತ್ತಿರುವ ಸೋತ ಶಾಸಕರು ದಾಳಗಳನ್ನು ಕಳೆದು ಕೊಂಡಜೂಜುಕೋರರಂತಾಗಿದ್ದಾರೆ, ಈ ಸತ್ಯ ಅವರಿಗೂ ಗೊತ್ತಿದೆ. ಮಾಜಿ ಸಚಿವ ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್  ತಮ್ಮ ರಾಜಕೀಯ ಜೀವನವನ್ನೇ ಪಣಕ್ಕಿಟ್ಟಿದ್ದಾರೆ.

ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಬಂಡಾಯ ಶಾಸಕರ ಪಾಲಿದೆ.  ಆದರೆ ಸೋತ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ಎಲ್ಲಿಯೂ ಮಾತನಾಡುತ್ತಿಲ್ಲ,  ಸಮ್ಮಿಶ್ರ ಸರ್ಕಾರದಲ್ಲಿ ಎಂಟಿಬಿ ನಾಗರಾಜ್ ಅವರನ್ನು ಮಂತ್ರಿ ಮಾಡಲಾಗಿತ್ತು.  ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರ ತಮ್ಮನ್ನು ಮಂತ್ರಿ ಮಾಡುತ್ತಾರೆ ಎಂಬ ಆಸೆಯಿಂದ ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಡೆದ ರಾಜಕೀಯ ಡ್ರಾಮಾದ ಪ್ರಮುಖ ಸಾರಥಿ ಅವರೇ ಆಗಿದ್ದರು, ವಿಶ್ವನಾಥ್ ಅವರ  44 ವರ್ಷಗಳ ರಾಜಕೀಯ ಅನುಭವ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರಿಂದಾಗಿ ಹಳ್ಳ ಹಿಡಿಯುತ್ತಿದೆ. 

ಬಂಡಾಯ ಶಾಸಕರ ಜೊತೆ ನಾನು ಸೇರಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು,  ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನನ್ನ ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ ಎಂದು ವಿಶ್ವನಾಥ್ ನೊಂದು ನುಡಿದಿದ್ದಾರೆ. 

ವಿಶ್ವನಾಥ್ ಸೇರಿ ಎಲ್ಲಾ 17 ಶಾಸಕರಿಗೂ ಮಂತ್ರಿ ಸ್ಥಾನ ನೀಡಲಾಗುವುಗದು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದರು. ಯಡಿಯೂರಪ್ಪ ನಿಮ್ಮನ್ನು ಕಡೆಗಣಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್.  ರಾಜಕೀಯದಲ್ಲಿ ಎಲ್ಲವನ್ನು ಮುಕ್ತವಾಗಿ ತೆರೆದಿಡಲಾಗದು,  ಕೆಲವನ್ನು ಅಂತರಂಗದಲ್ಲಿ ಮುಚ್ಚಿಡಬೇಕಾಗುತ್ತದೆ.  ಇದು ಹೊರಜಗತ್ತಿಗೆ ಕಾಣಲು ಸಾಧ್ಯವಿಲ್ಲ,

17 ಶಾಸಕರು ಸಂಪೂರ್ಣವಾಗಿ ಬಿಜೆಪಿ ನಿಷ್ಛವಾಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಶ್ವನಾಥ್ ಮತ್ತು ನಾಗರಾಜ್ ಇಬ್ಬರ ಪರಿಸ್ಥಿತಿ ಕೆಟ್ಟದಾಗಿದೆ.

ಸೋತ ಲಕ್ಷ್ಣಣ ಸವದಿ ಡಿಸಿಎಂ ಆಗುವುದಾದರೇ ನಾನೇಕೆ ಮಂತ್ರಿಯಾಗಲಾಗದು ಎಂದು ಪ್ರಶ್ನಿಸಿರುವ ವಿಶ್ವನಾಥ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಯಾರು ಕಾರಣ ಎಂಬದನ್ನು ಸಿಎಂ ಯಡಿಯೂರಪ್ಪ ಮರೆಯಬಾರದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com