ನೋವು ಅನುಭವಿಸಿದವರಿಗೆ ಲಾಭ ಇದ್ದೇ ಇರುತ್ತದೆ: ಡಿ.ಕೆ ಶಿವಕುಮಾರ್

ಧರ್ಮ, ದೇವರು, ಹಿಂದುತ್ವ ಯಾರ ಆಸ್ತಿಯಲ್ಲ.‌ ಆದರೆ ಅದನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಕಲಬುರಗಿ:  ಧರ್ಮ, ದೇವರು, ಹಿಂದುತ್ವ ಯಾರ ಆಸ್ತಿಯಲ್ಲ.‌ ಆದರೆ ಅದನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ‌

ಗಾಣಗಾಪುರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ತೊಂದರೆ ಕೊಡುವುದೇ ಕೆಲವರ ಕೆಲಸವಾಗಿ ಬಿಟ್ಟಿದೆ. ತೊಂದರೆ ಕೊಡುವುದರಲ್ಲಿಯೇ ಕೆಲವರಿಗೆ ಖುಷಿ ಸಿಗುತ್ತದೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಎಲ್ಲಿ ನೋವಿರುತ್ತದೆಯೋ ಅಲ್ಲಿ ಲಾಭ ಇರುತ್ತದೆ  ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಕೆಶಿ ಪರವಾಗಿ ಹೋರಾಟದ ವೇಳೆ 82 ಕೋಟಿ ಸಾರ್ವಜನಿಕ ಆಸ್ತಿ ಹಾನಿ ಉಂಟಾದ ವಿಚಾರದ ಬಗ್ಗೆ ಮಾತನಾಡಿದ ಅವರು, ಹೈಕೋರ್ಟ್‌ಗೆ ಪಿ.ಐ.ಎಲ್. ಯಾರು ಸಲ್ಲಿಸಿದ್ದಾರೆ ಎನ್ನುವುದು ಗೊತ್ತಿದೆ. ಅದರ ಹಿಂದೆ ಪಿತೂರಿ ಯಾರು ಮಾಡುತ್ತಿದ್ದಾರೆ ಎಂಬುದು ಕೂಡ ಗೊತ್ತಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಎಷ್ಟೆಷ್ಟೋ ಹೋರಾಟಗಳಾಗಿವೆ, ಕಲ್ಲು ತೂರಾಟಗಳಾಗಿವೆ. ಆ ವೇಳೆ ಯಾಕೆ ಯಾರೂ ಪಿ.ಐ.ಎಲ್. ಹಾಕಲಿಲ್ಲ. ಈಗ ಯಾಕೆ ಹಾಕಿದ್ದಾರೆ. ಯಾರು ಈ ಪಿ.ಐ.ಎಲ್ ಹಾಕಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com