ಅಸ್ಸಾಂ ಪ್ರವಾಹಕ್ಕೆ ಎಚ್.ಡಿ. ದೇವೇಗೌಡ ಕಳವಳ; ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಮನವಿ

ಅಸ್ಸಾಂನಲ್ಲಿ ಪ್ರವಾಹದಿಂದಾಗಿರುವ ಅನಾಹುತಗಳಿಂದ ತೀವ್ರವಾಗಿ ನೊಂದಿರುವುದಾಗಿ ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದು, ಅಸ್ಸಾಂನಲ್ಲಿ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಿ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದೇವೇಗೌಡ
ದೇವೇಗೌಡ

ಬೆಂಗಳೂರು: ಅಸ್ಸಾಂನಲ್ಲಿ ಪ್ರವಾಹದಿಂದಾಗಿರುವ ಅನಾಹುತಗಳಿಂದ ತೀವ್ರವಾಗಿ ನೊಂದಿರುವುದಾಗಿ ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದು, ಅಸ್ಸಾಂನಲ್ಲಿ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಿ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೆಲವು ದಿನಗಳಿಂದ ಪರಿಸ್ಥಿತಿ ಸ್ಥಿರವಾಗಿ ಹದಗೆಡುತ್ತಿದ್ದು, 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಸುಮಾರು ನಾಲ್ಕು ದಶಲಕ್ಷದಷ್ಟು ಜನರು ಬಾಧಿತರಾಗಿದ್ದಾರೆ ಮತ್ತು ಸುಮಾರು 480 ಪರಿಹಾರ ಶಿಬಿರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ.

ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ 60 ಕ್ಕೂ ಹೆಚ್ಚು ಪ್ರಾಣಿಗಳ ಸಾವು ತುಂಬಾ ದುಃಖಕರವಾಗಿದೆ. ಅಸ್ಸಾಂನ ಜನರು ಪ್ರವಾಹದ ವಿರುದ್ಧ ಹೋರಾಡುವುದರ ಮಧ್ಯೆಯೇ ಕೊರೊನಾ ಸಾಂಕ್ರಾಮಿಕ ರೋಗವು ದೇಶಾದ್ಯಂತ ಉಲ್ಬಣಗೊಳ್ಳುತ್ತಿದೆ. ಕೊರೊನಾ ಸಾವುಗಳು ಮತ್ತು ಪ್ರವಾಹದಿಂದಾಗುತ್ತಿರುವ ಸ್ಥಳಾಂತರಗಳು ಬಹಳ ದುರದೃಷ್ಟಕರ. ಅಸ್ಸಾಂನ ಜನರು, ಮತ್ತು ಸಾಮಾನ್ಯವಾಗಿ ಈಶಾನ್ಯ ರಾಜ್ಯದ ಜನರು ತಮ್ಮನ್ನು ಆಶೀರ್ವದಿಸಿದ್ದಾರೆ. ಹಿಂದೆ ತಾವು ಪ್ರಧಾನಿಯಾಗಿದ್ದಾಗ ಮತ್ತು ಆನಂತರವೂ ಸಾಕಷ್ಟು
ಪ್ರೀತಿಯನ್ನು ತೋರಿಸಿದ್ದಾರೆ, ಅಸ್ಸಾಂ ಜನರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುವುದಾಗಿ ದೇವೇಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com