ನಾನು ಸಂಡೇ, ಮಂಡೇ ಲಾಯರ್: ಮಾಜಿ ಸಿಎಂ ಸಿದ್ದರಾಮಯ್ಯ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಸದನದಲ್ಲಿ ಮಂಡಿಸಿದ ಹಕ್ಕುಚ್ಯುತಿ ವೇಳೆ ಮಾತನಾಡಿ ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,ನಾನು ಅರ್ಧಂಬರ್ಧ ಲಾಯರ್ ಕೆಲಸ ಮಾಡಿರುವುದಾಗಿ ತಿಳಿಸಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಸಂಡೆ, ಮಂಡೆ ಲಾಯರ್ ' ಕುರಿತ ವಿಷಯ ಸ್ವಾರಸ್ಯಕರವಾಗಿ ಚರ್ಚೆಯಾದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಸದನದಲ್ಲಿ ಮಂಡಿಸಿದ ಹಕ್ಕುಚ್ಯುತಿ ವೇಳೆ ಮಾತನಾಡಿ ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,ನಾನು ಅರ್ಧಂಬರ್ಧ ಲಾಯರ್ ಕೆಲಸ ಮಾಡಿರುವುದಾಗಿ ತಿಳಿಸಿದರು.

ವಿಚಾರ ಪ್ರಸ್ತಾಪ ಮಾಡುತ್ತಾ ತಾವು ಪೂರ್ಣ ಪ್ರಮಾಣದ ವಕೀಲರಾಗಲು ಸಾಧ್ಯವಾಗಲಿಲ್ಲ. ವಕೀಲರ ಕೆಲಸ ಮುಂದುವರೆಸಿದರೆ ಜೀವನ ಅಲ್ಲೇ ಇರುತ್ತಿತ್ತು ಎಂದು ಹೇಳಿದರು.

ಸಂಡೆ, ಮಂಡೆ ಲಾಯರ್ ಆಗಿದ್ದೆ. ಅರ್ಧ ರಾಜಕೀಯ, ಅರ್ಧ ಲಾಯರ್ ಆಗಿದ್ದೆ. ಸಚಿವ ಜಗದೀಶ್ ಶೆಟ್ಟರ್ ಅವರು ಪೂರ್ಣ ವಕೀಲರಾಗಿದ್ದರೆ ನನಗಿಂತ ಬೆಟರ್ ಎಂದು ಹೇಳಿದರು. ಆಗ ಆಕ್ಷೇಪಿಸಿದ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಸಂಡೆ, ಮಂಡೆ ಲಾಯರ್ ಎಂಬುದನ್ನು ಕಡತದಿಂದ ತೆಗೆದುಹಾಕಬೇಕು.
 
ಲಾಯರ್ ನೋಬೆಲ್ ವೃತ್ತಿ ಎಂದರು. ಆಗ ಸಿದ್ದರಾಮಯ್ಯ ಸಂಡೆ ಮಂಡೆ ಎಂಬುದು ಅಸಂವಿಧಾನಿಕವಲ್ಲ ನನಗೆ ನಾನೇ ಹೇಳಿಕೊಂಡಿರುವುದು .

ಬೋಪಯ್ಯ ಬೇಡ ಎಂದು ಹೇಳುತ್ತಿದ್ದಾರೆ. ಅವರ ಖುಷಿಗಾಗಿ ತೆಗೆದು ಹಾಕಿ ಎಂದರು. 1983ರಿಂದಲೂ ತಾವು ವಕೀಲರಾಗಿ ಕೋರ್ಟ್‍ಗೆ ಹೋಗಿಲ್ಲ. ಮುಖ್ಯಮಂತ್ರಿಯಾದ ನಂತರ ಸನ್ನದನ್ನು ರದ್ದುಪಡಿಸಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com