ಕರ್ನಾಟಕ ಮತ್ತು ರೆಸಾರ್ಟ್ ರಾಜಕೀಯ: ರಾಜಕಾರಣಿಗಳ ದೊಡ್ಡದೊಡ್ಡ ಮೇಲಾಟಗಳಿಗೆ ಕೂಲ್ ಅಡ್ಡಾ!

ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್ ಶಾಸಕರು  ಬೆಂಗಳೂರಿನ ರೆಸಾರ್ಟ್ ನಲ್ಲಿ ತಣ್ಣಗೆ ಕುಳಿತು ಸಿಎಂ ಕಮಲ ನಾಥ್ ಸರ್ಕಾರ ಪತನಗೊಳಿಸಲು ಕಾಯುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್ ಶಾಸಕರು  ಬೆಂಗಳೂರಿನ ರೆಸಾರ್ಟ್ ನಲ್ಲಿ ತಣ್ಣಗೆ ಕುಳಿತು ಸಿಎಂ ಕಮಲ ನಾಥ್ ಸರ್ಕಾರ ಪತನಗೊಳಿಸಲು ಕಾಯುತ್ತಿದ್ದಾರೆ. ಹೀಗಾಗಿ  ಸದ್ಯ ಕರ್ನಾಟಕ ರೆಸಾರ್ಟ್ ರಾಜಕೀಯದ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆದಿದೆ. 

ಸರ್ಕಾರಗಳನ್ನು ಪತನಗೊಳಿಸಲು ರಾಜಕೀಯ ನಾಯಕರು ಕರ್ನಾಟಕದಲ್ಲಿ ಆಶ್ರಯ ಪಡೆಯುವುದು ಹೊಸತೇನಲ್ಲ, ಅದರಲ್ಲೂ ಬೆಂಗಳೂರು ಎಲ್ಲಾ ರಾಜಕಾರಣಿಗಳ ಫೇವರಿಟ್ ಅಡ್ಡವಾಗಿದೆ.

ರಾಜಕಾರಣಿಗಳು ಎಲ್ಲಿ ತಮ್ಮ ನಿಷ್ಠೆ ಬದಲಾಯಿಸುತ್ತಾರೋ ಎಂಬ ಭಯದಿಂದ ರಾಜಕೀಯ ಪಕ್ಷಗಳು ರೆಸಾರ್ಟ್ ಗೆ ತಂದು ಶಾಸಕರನ್ನು ಇರಿಸುತ್ತಾರೆ.  ಹೀಗಾಗಿ ಶಾಸಕರ ಉಸ್ತುವಾರಿ ವಹಿಸಿಕೊಂಡಿರುವ ನಾಯಕರೊಬ್ಬರು ಎಂಎಲ್ ಎ ಗಳನ್ನು  ಯಾರಿಗೂ ಸಿಗದಂತ ಸ್ಥಳಕ್ಕೆ ಕರೆದೊಯ್ದಿದ್ದಾರೆ,  ರೆಸಾರ್ಟ್ ಗಿಂತ ಉತ್ತಮ ಸ್ಥಳ ಬೇರೆಲ್ಲೂ ಕಾಣಿಸುತ್ತಿಲ್ಲ.

ರೆಸಾರ್ಟ್ ರಾಜಕೀಯ ಎಂಬುದು ಮತ್ತೊಬ್ಬ ರಾಜಕಾಾರಣಿಯ ರಾಜಕೀಯ ವೃತ್ತಿಜೀವನದ ಬಂಡವಾಳವಾಗಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ  ಜಂಪ್  ಮಾಡುವ ಶಾಸಕರು ಈ ಆಟದಲ್ಲಿ ಜೋಕರ್‌ಗಳಂತೆ. ಅವರು ಎಲ್ಲಿಗೆ ಹೋದರೂ, ಆ ಪಕ್ಷವ ಅವರಿಗೆ ಭರಪೂರ ಲಾಭ ನೀಡುತ್ತದೆ.

ಪ್ರತಿ ಬಾರಿಯೂ ಬಂಡಾಯ ಶಾಸಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ  ಸೇರಲು ಬಯಸುತ್ತಾರೆ, ಪರಿಸ್ಥಿತಿ ಹೀಗೆ ಸೃಷ್ಟಿಯಾದಾದ ಅವರನ್ನು ರೆಸಾರ್ಟ್‌ಗಳಿಗೆ ಸೇರಿಸಲಾಗುತ್ತದೆ, ಅವರಿಗಾಗಿ ಯಥೇಚ್ಛ ಹಣವನ್ನು ಖರ್ಚು ಮಾಡಲಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ರೆಸಾರ್ಟ್, ಪಂಚಚಾರಾ, ಸೆವೆನ್ ಸ್ಟಾರ್ ಗಳಲ್ಲಿ ವಾರಗಳ ಕಾಲ ತಂಗುವ ಶಾಸಕರ ಪ್ರತಿನಿತ್ಯದ ಊಟ ವ್ಯವಸ್ಥೆಗಾಗಿ ಅಪಾರ ಪ್ರಮಾಣದ ಹಣ ವ್ಯಯವಾಗುತ್ತದೆ. ರೆಸಾರ್ಟ್ ರಾಜಕೀಯ ಎಂಬುದು ಬೆಂಗಳೂರಿನಲ್ಲಿ ಪದೇ ಪದೇ ನಡೆಯುತ್ತಿದೆ. ಬೆಂಗಳೂರು ಮತ್ತು ಕರ್ನಾಟಕದ ಹವಾಮಾನವು ಉತ್ತಮವಾಗಿದ್ದು, ಪ್ರತಿಯೊಬ್ಬರೂ ಇಲ್ಲಿ ಬಂದು ಇರಲು ಇಷ್ಟಪಡುತ್ತಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಎಲ್ಲಾ ರಾಷ್ಟ್ರೀಯ ಪಕ್ಷಗಳ ರೆಸಾರ್ಟ್ ರಾಜಕೀಯಕ್ಕೆ ಬೆಂಗಳೂರು ಸೇಫ್ ಸ್ಥಳವಾಗಿದೆ ಎಂದು ರಾಜಕೀಯ ಪರಿಣಿತ ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಇಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲಾ ಪಕ್ಷಕ್ಕೆ ನಿಷ್ಠರಾಗಿರುವ ಇತರ ರಾಜ್ಯಗಳ ಶಾಸಕರು ಇಲ್ಲಿಗೆ ಬರುತ್ತಾರೆ. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಸರಿ ಪಕ್ಷಕ್ಕೆ ನಿಷ್ಠರಾಗಿರುವ ಶಾಸಕರನ್ನು ಕರೆತರಲಾಗುತ್ತದೆ.  ರಾಜ್ಯದಲ್ಲಿ ಪಕ್ಷಗಳು ಮತ್ತು ನಾಯಕರು ಇದನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ.

2008 ರಲ್ಲಿ ಆರಂಭವಾದ ರೆಸಾರ್ಟ್ ರಾಜಕೀಯ ಯಶಸ್ವಿಯಾದ ನಂತರ ಇಂಥ ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಸಮರ್ಥರಾಗಿದ್ದಾರೆ.  ಬೇರೆ ಯಾವ ರಾಜ್ಯದಲ್ಲಾದರೂ ರೆಸಾರ್ಟ್ ರಾಜಕೀಯ ಆರಂಭವಾದರೇ ಬೆಂಗಳೂರಿನ ಕಡೆ ಮೊದಲು ನೋಡುವಂತಾಗುತ್ತಿದೆ.

ರೆಸಾರ್ಟ್ ರಾಜಕೀಯ ಇದೇ ಮೊದಲಲ್ಲ,  ಈ ಸಂಸ್ಕೃತಿ 36 ವರ್ಷಗಳ ಹಿಂದಿನದ್ದು.  1984ರಲ್ಲಿ  ಆಂಧ್ರಪ್ರದೇಶ ನಟ  ಹಾಗೂ ಸಿಎಂ ಎನ್ ಟಿ ರಾಮರಾವ್ ಹೃದಯ ಶಸ್ತ್ರ ಚಿಕಿತ್ಸೆಗಾಗಿ  ಅಮೆರಿಕಾಗೆ ತೆರಳಿದ್ದರು.  ಅವರು ವಾಪಸ್ ಬರುವ ವೇಳೆಗೆ ಇಂದಿರಾ ಗಾಂಧಿ ಅವರು ನೇಮಿಸಿದ್ದ ರಾಜ್ಯಪಾಲ ರಾಮಲಾಲ್, ಎನ್ ಭಾಸ್ಕರ್ ರಾವ್ ಅವರನ್ನು ಮುಖ್ಯಮಂತ್ರಿಯಾಗಿಸಿದ್ದರು.

ಎನ್ ಟಿ ಆರ್ ವಾಪಾಸಾದ ಮೇಲೆ ಬಹುಮತ ಸಾಬೀತು ಪಡಿಸುವಂತೆ  ರಾಜ್ಯಪಾಲರು ಹೇಳಿದ್ದರು.  ಹೀಗಾಗಿ ಮುಂಜಾಗ್ರತಾ ಕ್ರಮವಾಗಿ  ಎನ್ ಟಿ ರಾವ್,  ಟಿಡಿಎಸ್  ಶಾಸಕ ಚಂದ್ರಬಾಬು ನಾಯ್ಡು  ಸೇರಿದಂತೆ ತಮ್ಮ ಶಾಸಕರನ್ನು  ಕರ್ನಾಟಕಕ್ಕೆ ಕರೆ ತಂದಿದ್ದರು. 

ಆ ವೇಳೆಯಲ್ಲಿ ಕರ್ನಾಟಕದಲ್ಲಿ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ತಮ್ಮ ಸಂಪೂರ್ಣ ಬೆಂಬಲವನ್ನು ರಾಮ್ ರಾವ್ ಗೆ ನೀಡಿದ್ದರು.  ಈ ಶಾಸಕರನ್ನೆಲ್ಲಾ ಒಂದು ತಿಂಗಳ ಕಾಲ  ಬೆಂಗಳೂರಿನ ದಾಸ್ ಪ್ರಕಾಶ್ ಹೋಟೆಲ್ ನಲ್ಲಿರಿಸಿದ್ದರು.

2002 ರಲ್ಲಿ ಮಹಾರಾಷ್ಟ್ರ ಸಿಎಂ ವಿಲಾಸ್ ರಾವ್ ದೇಶಮುಖ್, ಬಹುತ ಸಾಬೀತು ಪಡಿಸುವ ಸಲುವಾಗಿ ತಮ್ಮ ಪಕ್ಷದ 71 ಶಾಸಕರನ್ನು  ಕರ್ನಾಟಕಕ್ಕೆ ಕರೆ ತಂದಿದ್ದರು.  ಆ ವೇಳೆ ಸಿಎಂ ಎಸ್ ಎಂ ಕೃಷ್ಣ ಸಂಪುಟದಲ್ಲಿ  ಸಚಿವರಾಗಿದ್ದ ಶಿವಕುಮಾರಮತ್ತು ರೋಷನ್ ಬೇಗ್ ಪ್ರಮುಖ ಪಾತ್ರ ವಹಿಸಿದ್ದರು.

ಶಾಸಕರನ್ನು ಮೈಸೂರಿನ ಸುತ್ತಮುತ್ತಗಳ ಪ್ರವಾಸಿ ತಾಣಗಳಿಗೆ ಕರದೊಯ್ಯಲಾಗಿತ್ತು.  ಈ ರೆಸಾರ್ಟ್ ರಾಜಕಾರಣ  ಕರ್ನಾಟಕದಲ್ಲಿ 2004 ರಿಂದ ಆರಂಭವಾಯಿತು.  ಜೆಡಿಎಸ್ ನ 58 ಶಾಸಕರನ್ನು ರೆಸಾರ್ಟ್ ನಲ್ಲಿಡಲಾಗಿತ್ತು.

ಕಳೆದ  16 ವರ್ಷಗಳಲ್ಲಿ  ರೆಸಾರ್ಟ್  ರಾಜಕಾರಣದಿಂದಾಗಿ ಮೂರು ಸರ್ಕಾರಗಳು ಪತನಗೊಂಡಿವೆ ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕ ರಾಜಕಾರಣಿಗಳು ರೆಸಾರ್ಟ್ ರಾಜಕೀಯದಲ್ಲಿ ಅತ್ಯದ್ಭುತ ಪರಿಣಿತಿ ಪಡೆದಿದ್ದಾರೆ. 

ಈ ರೀತಿಯ ಹವ್ಯಾಸ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ರೆಸಾರ್ಟ್ ರಾಜಕೀಯಕ್ಕೆ ಅವರು ಎಲ್ಲಿಂದ ಹಣ ತರುತ್ತಾರೆ, ಬಿಳಿ ಹಣ ಖಂಡಿತ ಸಾಧ್ಯವಿಲ್ಲ.  ಇದಕ್ಕಾಗಿ ಹಣ ಖರ್ಚು ಮಾಡಲು ಅದಿಕಾರಿಗಳು ರಾಜಕಾರಣಿಗಳಿಗೆ ಹಣ ನೀಡುತ್ತಾರೆ. ಹೀಗಾಗಿ ಸರ್ಕಾರ ಇಂತಹ ಮಾಫಿಯಾ ನಿಯಂತ್ರಿಸಬೇಕು ಎಂದು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com