ರಾಜಕೀಯಕ್ಕೆ 'ಸಿಂಗಂ' ಖ್ಯಾತಿಯ ಅಣ್ಣಾಮಲೈ ಎಂಟ್ರಿ: 2021ರ ಚುನಾವಣೆಯಲ್ಲಿ ಸ್ಪರ್ಧೆ

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿರುವ 'ಸಿಂಗಂ' ಖ್ಯಾತಿಯ ಅಣ್ಣಾಮಲೈ, ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 2021ರ  ಏಪ್ರಿಲ್‌ನಲ್ಲಿ ಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಣ್ಣಾಮಲೈ ತಯಾರಿ ನಡೆಸಿದ್ದಾರೆ.

Published: 18th May 2020 11:41 AM  |   Last Updated: 18th May 2020 11:41 AM   |  A+A-


Annamalai

ಅಣ್ಣಾ ಮಲೈ

Posted By : Shilpa D
Source : Online Desk

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿರುವ 'ಸಿಂಗಂ' ಖ್ಯಾತಿಯ ಅಣ್ಣಾಮಲೈ, ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 2021ರ  ಏಪ್ರಿಲ್‌ನಲ್ಲಿ ಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಣ್ಣಾಮಲೈ ತಯಾರಿ ನಡೆಸಿದ್ದಾರೆ.

ಆದರೀಗ ಅವರು ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮುಂಬರುವ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಣ್ಣಾಮಲೈ ಘೋಷಣೆ ಮಾಡಿದ್ದಾರೆ.

ಫೇಸ್​​ಬುಕ್​​ ಲೈವ್​​ನಲ್ಲಿ ಮಾತಾಡುವ ಸಂದರ್ಭದಲ್ಲಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ತಮಿಳುನಾಡಿನ ತನ್ನ ಹುಟ್ಟೂರಿನಲ್ಲೇ ವಾಸ್ಯವ್ಯ ಹೂಡಿ ಮುಂದಿನ ಚುನಾವಣೆಗೆ ಬೇಕಾದ ಅಗತ್ಯ ಕೆಲಸಗಳನ್ನು ಆರಂಭಿಸುವುದಾಗಿಯೂ ತಿಳಿಸಿದ್ದಾರೆ.

‘ಮಿಸ್​​ ಯೂ ಕರ್ನಾಟಕ’ ಎನ್ನುವ ಮೂಲಕ ತಮ್ಮ ಮಾತುಗಳನ್ನಾರಂಭಿಸಿದ ಅಣ್ಣಾಮಲೈ, ತಾನು ಪೊಲೀಸ್​​​ ಸೇವೆಯಲ್ಲಿದ್ದಾಗ ಕನ್ನಡಿಗರು ಬೆಟ್ಟದಷ್ಟು ಪ್ರೀತಿ ಕೊಟ್ಟಿದ್ದಾರೆ. ಆ ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ. ನನಗೆ ಜನರೊಂದಿಗೆ ಇದ್ದು ರಾಜಕೀಯ ಸುಧಾರಣೆ ಮಾಡುವ ಆಲೋಚನೆ ಇದೆ. ಆದ್ದರಿಂದ ಕರ್ನಾಟಕ ಪೊಲೀಸ್​​ ಇಲಾಖೆಗೆ ರಾಜೀನಾಮೆ ನೀಡಿ ನನ್ನೂರಿಗೆ ಬಂದಿದ್ದೇನೆ. ಜನರ ಸೇವೆ ಮಾಡಲಿದ್ದೇನೆ. 

ಕರ್ನಾಟಕದಲ್ಲಿ 10 ವರ್ಷ ಪೊಲೀಸ್​​ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಕುಟುಂಬದ ಜತೆ ಸಮಯ ಕಳೆಯುವುದು, ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಬೇಕು, ಜನರ ಸೇವೆ ಮಾಡಬೇಕು, ರಾಜಕೀಯ ವ್ಯವಸ್ಥೆ ಬದಲಾಯಿಸಬೇಕು, ಪೊಲೀಸ್​​ ಅಧಿಕಾರಿಗಳಿಗೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂಬುವುದು ನನ್ನಾಸೆ ಎಂದಿದ್ದಾರೆ.

‘ಕರ್ನಾಟಕ ದಲ್ಲಿ 21 ಸಾವಿರ ಕೋಟಿ ಮದ್ಯದ ಆದಾಯವಿದೆ. ಯಾವ ಸರಕಾರವೂ ಮದ್ಯದ ಆದಾಯ ಬೇಡ ಎನ್ನುವುದಿಲ್ಲ. ಇದು ತಪ್ಪಾ? ಸರಿಯಾ? ಎಂಬುದನ್ನು ಹೇಳಲಾಗದು. ಆದರೆ, ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ತಪ್ಪು. ಮದ್ಯದಿಂದ ಕೆಟ್ಟದ್ಧೇ ಜಾಸ್ತಿ ಆಗುತ್ತದೆ. ಒಳ್ಳೆಯದು ಕಡಿಮೆ’ ಎಂದರು. ‘ಪ್ರತಿ ವರ್ಷವೂ ಮದ್ಯದ ಆದಾಯ ಹೆಚ್ಚಿಸುವಂತೆ ಆಯಾ ಜಿಲ್ಲಾಧಿಕಾರಿ ಮೇಲೆ ಸರ್ಕಾರ ಒತ್ತಡ ಹಾಕುತ್ತದೆ. ಆದಾಯ ಜಾಸ್ತಿ ಆಗದಿದ್ದರೆ, ಜಿಲ್ಲಾಧಿಕಾರಿಯನ್ನು ಸರ್ಕಾರ ಸರಿಯಾಗಿ ನೋಡುವುದಿಲ್ಲ’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Stay up to date on all the latest ರಾಜಕೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp