ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅಮಾನತು ಮಾಡಿದ ಬಿಜೆಪಿ

ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಮಾಡಿದ್ದಾರೆ.

Published: 19th November 2020 01:02 AM  |   Last Updated: 19th November 2020 01:02 AM   |  A+A-


Nalin kumar kateel

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

Posted By : Srinivasamurthy VN
Source : UNI

ಬೆಂಗಳೂರು: ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಪಕ್ಷದ ತೀರ್ಮಾನಗಳನ್ನು ಪದೇ ಪದೇ ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದೀರಿ, ಪಕ್ಷದ ಘನತೆಗೆ ಧಕ್ಕೆಯುಂಟು ಮಾಡಿ ಪಕ್ಷಕ್ಕೆ ಮುಜುಗರಕ್ಕೀಡು ಮಾಡಿದ್ದೀರಿ. ಹಲವರು ಬಾರಿ ಖುದ್ದು ಹಾಜರಾಗಿ ಸಮಜಾಯಿಸಿ ನೀಡಲು ತಿಳಿಸಿದ್ದರೂ ಇದುವರೆಗೂ ಸಮಜಾಯಿಷಿ  ನೀಡಿರುವುದಿಲ್ಲ. ಹೀಗಾಗಿ ನಿಮ್ಮನ್ನು ತಕ್ಷಣದಿಂದ ಪಕ್ಷದ ಸದಸ್ಯತ್ವದಿಂದ ಅಮಾನತ್ತು ಮಾಡುತ್ತಿದ್ದೇನೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.100%

ಇನ್ನು ಜಿಲ್ಲಾ ಪಂಚಾಯಿತಿ ರಾಜೀನಾಮೆ ವಿಚಾರದಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ  1 ರವರೆಗೂ ಚರ್ಚೆ ನಡೆಯಿತು. ಕೋರಂ ಕೊರತೆ ಕಾರಣಕ್ಕೆ ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಲಾಗಿತ್ತು. ಮತ್ತೆ ಸಭೆ ಸೇರಿದಾಗ ಸಭತ್ಯಾಗ ಮಾಡಿದ್ದ ಸದಸ್ಯರು ಕೂಡ ಆಗಮಿಸಿದರು. ಹಿರಿಯ ಸದಸ್ಯ  ಎಸ್.ಎನ್.ರಾಮಸ್ವಾಮಿ ಮಾತನಾಡಿ, ಸಾಮಾನ್ಯಸಭೆಯಲ್ಲಿ ಪ್ರಸ್ತಾಪಿಸಿರುವ ಎಲ್ಲ ಕ್ರಿಯಾ ಯೋಜನೆಗಳಿಗೆ ಷರತ್ತುಬದ್ಧ ಒಪ್ಪಿಗೆ ಕೊಡುತ್ತಿದ್ದೇವೆ. ಅನುದಾನವನ್ನು ಸಮಾನ ಹಂಚಿಕೆ ಮಾಡಬೇಕು. 30-54, ಶಾಸನಬದ್ಧ ಅನುದಾನ, 15ನೇ ಹಣಕಾಸು, ಸ್ಥಾಯಿ ಸಮಿತಿಗಳ ಎಲ್ಲ ನಿರ್ಣಯಗಳಿಗೆ ಒಕ್ಕೊರಲ  ಅನುಮೋದನೆ ಕೊಡುತ್ತಿದ್ದೇವೆ ಎಂದರು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮೇಜು ಕುಟ್ಟಿ ಒಪ್ಪಿಗೆ ಸೂಚಿಸಿದರು. ಎರಡೇ ನಿಮಿಷದಲ್ಲಿ ಸಭೆ ಮುಗಿಸಿ ಸದಸ್ಯರು ಹೊರನಡೆದರು.

Stay up to date on all the latest ರಾಜಕೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp