ಬಿಜೆಪಿ ಕಾರ್ಯಕಾರಿಣಿಗೆ 69 ಮಂದಿ ಸದಸ್ಯರು, 25 ಮಂದಿ ವಿಶೇಷ ಸದಸ್ಯರ ಹೆಸರು ಪ್ರಕಟ
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರ ಹೆಸರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದಾರೆ. 69 ಮಂದಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರಾದ 25 ಮಂದಿಯ ಹೆಸರನ್ನು ಅವರು ಅಂತಿಮಗೊಳಿಸಿ, ಪ್ರಕಟಿಸಿದ್ದಾರೆ.
Published: 30th November 2020 04:48 PM | Last Updated: 30th November 2020 05:05 PM | A+A A-

ನಳಿನ್ ಕುಮಾರ್ ಕಟೀಲ್
ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರ ಹೆಸರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದಾರೆ. 69 ಮಂದಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರಾದ 25 ಮಂದಿಯ ಹೆಸರನ್ನು ಅವರು ಅಂತಿಮಗೊಳಿಸಿ, ಪ್ರಕಟಿಸಿದ್ದಾರೆ.
ಕಾರ್ಯಕಾರಿಣಿ ಸದಸ್ಯರಾಗಿ ಮೈಸೂರು ನಗರ -ಡಾ.ಮಂಜುನಾಥ್, ಮೈಸೂರು ಗ್ರಾಮಾಂತರ-ಸಿ.ರಮೇಶ್, ಶಿವಣ್ಣ (ಕೋಟೆ), ಸುನಂದಾ ರಾಜು, ಚಾಮರಾಜನಗರ-ನೂರೊಂದು ಶೆಟ್ಟಿ, ಮಂಡ್ಯ-ಸುಜಾತಾ ಕೃಷ್ಣ, ಡಾ.ಸಿದ್ದರಾಮಯ್ಯ, ಹಾಸನ –ಕಾಟಿಕೆರೆ ಪ್ರಸನ್ನ, ಎ.ಮಂಜು, ಕೊಡಗು - ರೀನಾ ಪ್ರಕಾಶ್, ಮನು ಮುತ್ತಪ್ಪ, ದಕ್ಷಿಣ ಕನ್ನಡ- ಕೆ.ಆರ್.,ಪಂಡಿತ್, ಮೋನಪ್ಪ ಬಂಡಾರಿ, ಅನ್ವರ್ ಮಾಣಿಪ್ಪಾಡಿ, ಉಡುಪಿ- ಶಂಕರ ಪೂಜಾರಿ, ಸಂಧ್ಯಾ ರಮೇಶ್, ಗುರುಮೆ ಸುರೇಶ್ ಶೆಟ್ಟಿ, ಚಿಕ್ಕಮಗಳೂರು-ಡಿ.ಎನ್.ಜೀವರಾಜ್, ಸುನೀತಾ ಜಗದೀಶ್, ಶಿವಮೊಗ್ಗ-ಸುಧಾಮಣಿ ಬೋರಯ್ಯ, ಶರಾವತಿ ರಾವ್, ಶೋಭಾ, ಉತ್ತರ ಕನ್ನಡ-ಸುನೀಲ್ ವಿ.ಹೆಗಡೆ, ಕೆ.ಜಿ.ನಾಯ್ಕ, ಹಾವೇರಿ-ಭಾರತಿ ಜಂಭಗಿ, ಹುಬ್ಬಳ್ಳಿ-ಧಾರವಾಡ-ವೀರಭದ್ರಪ್ಪ ಹಾಲಹರವಿ, ರಾಧಾಬಾಯಿ ಸಫಾರೆ, ಧಾರವಾಡ ಗ್ರಾಮಾಂತರ-ಈರೇಶ್ ಅಂಚಟಗೇರಿ, ಗದಗ-ರಾಜು ಕುರಡಗಿ, ಭೀಮಸಿಂಗ್ ರಾಠೋಡ್, ಬೆಳಗಾವಿ ಗ್ರಾಮಾಂತರ-ಧನಶ್ರೀ ಸರದೇಸಾಯಿ, ಚಿಕ್ಕೋಡಿ-ಶಶಿಕಾಂತ ನಾಯಕ್, ಬಾಗಲಕೋಟೆ-ರಾಜಶೇಖರ ಶೀಲವಂತ, ವಿಜಯಪುರ-ಮಲ್ಲಮ್ಮ ಜೋಗೂರು, ಬೀದರ್-ಅಭಿಮನ್ಯು ನೀರಗುಡೆ, ಸೋಮನಾಥ ಪಾಟೀಲ, ಕಲಬುರಗಿ ಗ್ರಾಮಾಂತರ-ಡಾ.ಇಂದಿರಾ ಶಕ್ತಿ, ಅಮರನಾಥ ಪಾಟೀಲ್, ರಾಯಚೂರು-ಪಾಪರೆಡ್ಡಿ, ಕೊಲ್ಲಾ ಶೇಷಗಿರಿರಾವ್, ಸುಜಾತಾ ಪಾಟೀಲ್, ಕೊಪ್ಪಳ-ಡಾ.ಬಸವರಾಜ್ ಶರಣಪ್ಪ, ಶಿವಲೀಲಾ ದಳವಾಯಿ, ಬಳ್ಳಾರಿ-ಎ.ಎಂ.ಸಂಜಯ್, ರಾಣಿ ಸಂಯುಕ್ತ, ದಾವಣಗೆರೆ-ಬಿ.ಪಿ.ಹರೀಶ್, ಚಿತ್ರದುರ್ಗ-ಟಿ.ಜಿ.ನರೇಂದ್ರನಾಥ್, ತುಮಕೂರು-ಪ್ರೇಮಾ ಹೆಗಡೆ, ರಾಮನಗರ-ರಾಮಚಂದ್ರ, ಬೆಂಗಳೂರು ಗ್ರಾಮಾಂತರ-ಬಿ.ಸಿ.ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಬಿದರಹಳ್ಳಿ- ಭಾಗ್ಯಜ್ಯೋಗಿ, ಚಿಕ್ಕಬಳ್ಳಾಪುರ-ಡಾ.ಜಿ.ವಿ.ಮಂಜುನಾಥ್, ಕೋಲಾರ-ಡಾ.ನರೇಂದ್ರ ರಂಗಪ್ಪ, ಎಸ್.ಕೃಷ್ಣಾ ರೆಡ್ಡಿ,ಬಿ.ಪಿ.ವೆಂಕಟ ಮುನಿಯಪ್ಪ, ಬೆಂಗಳೂರು ಉತ್ತರ-ಜಗ್ಗೇಶ್, ಎಸ್.ಮುನಿರಾಜು, ಮಧುಶ್ರಿ ಸ್ವಾಮಿ, ರಾಜಣ್ಣ ದೊಡ್ಡಯ್ಯ, ಎಂ.ಸಿ.ಲತಾ, ಬೆಂಗಳೂರು ಕೇಂದ್ರ-ಸರವಣ, ಕೆ.ವಾಸುದೇವಮೂರ್ತಿ, ರಶ್ಮಿ ಡಿಸೋಜಾ, ಡಾ.ಅನಿಲ್ ಇಯಾಸೋ, ಬೆಂಗಳೂರು ದಕ್ಷಿಣ-ಗೀತಾ ಧನಂಜಯ, ವಿವೇಕ್ ರೆಡ್ಡಿ, ಸಿ.ಕೆ.ರಾಮಮೂರ್ತಿ, ಪ್ರಕಾಶ್ ಮಂಡೋತ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿಣಿ ವಿಶೇಷ ಆಹ್ವಾನಿತರು: ಮೈಸೂರು ಗ್ರಾಮಾಂತರ- ಸಿ.ಎಚ್.ವಿಜಯಶಂಕರ್, ಚಾಮರಾಜನಗರ- ಪರಿಮಳಾ ನಾಗಪ್ಪ, ಮಂಡ್ಯ –ಬಿ.ಸೋಮಶೇಖರ್, ದಕ್ಷಿಣ ಕನ್ನಡ –ರಾಮಚಂದ್ರ ಬೈಕಂಪಾಡಿ, ಕೃಷ್ಣ ಪಾಲೇಮಾರ್, ಹುಬ್ಬಳ್ಳಿ ಧಾರವಾಡ-ಡಾ.ಕ್ರಾಂತಿಕಿರಣ್, ಧಾರವಾಡ ಗ್ರಾಮಾಂತರ-ಎಂ.ಆರ್.ಪಾಟೀಲ್, ಬೆಳಗಾವಿ-ಡಾ.ಪ್ರಭಾಕರ ಕೋರೆ, ಬಾಗಲಕೋಟೆ-ನಾರಾಯಣಸಾ ಭಾಂಡಗೆ, ಬೀದರ-ದೀಪಕ್ ಗಾಯಕವಾಡ, ಯಾದಗಿರಿ-ಬಾಬುರಾವ್ ಚಿಂಚನಸೂರು, ನಾಗರತ್ನ ಕುಪ್ಪಿ, ರಾಯಚೂರು-ಎನ್.ಶಂಕ್ರಪ್ಪ, ಬಳ್ಳಾರಿ-ಪಾರ್ವತಿ ಇಂದು ಶೇಖರ್,ದಾವಣಗೆರೆ-ಜಯಪ್ರಕಾಶ್ ಅಂಬರ್ಕರ್, ತುಮಕೂರು-ಡಾ.ಎಂ.ಆರ್.ಹುಲಿನಾಯ್ಕರ್, ರಾಮನಗರ-ಕೆ.ಶಿವರಾಮ್ ಐಎಎಸ್ (ನಿ), ಚಿಕ್ಕಬಳ್ಳಾಪುರ-ಎನ್.ಜ್ಯೋತಿರೆಡ್ಡಿ, ಬೆಂಗಳೂರು ಉತ್ತರ-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಡಿ.ಎಸ್.ವೀರಯ್ಯ, ಬೆಂಗಳೂರು ಕೇಂದ್ರ-ಮಾಳವಿಕಾ ಅವಿನಾಶ್, ಬೆಂಗಳೂರು ದಕ್ಷಿಣ-ಶಂಕರ್ ಬಿದರಿ, ಪೂರ್ಣಿಮಾ ಪ್ರಕಾಶ್, ಎಂ.ಎಚ್.ಶ್ರೀಧರ್ ಅವರನ್ನು ಆಯ್ಕೆ ಮಾಡಿ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ಇದಲ್ಲದೆ ಪಕ್ಷದ ಎಲ್ಲಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಗಳಿಗೆ ಆಹ್ವಾನಿತರಾಗಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.