ಉಪ ಚುನಾವಣೆ ಸಮಯ: ಚುನಾವಣಾ ಆಯೋಗಕ್ಕೆ ಸೋಷಿಯಲ್ ಮೀಡಿಯಾ ಪೋಸ್ಟ್ ಗಳದ್ದೇ ದೊಡ್ಡ ಸವಾಲು!

ನವೆಂಬರ್ 3ರ ಉಪ ಚುನಾವಣೆಗೆ ಮುನ್ನ ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶಗಳನ್ನು ಪತ್ತೆಹಚ್ಚುವ ಕೆಲಸ ಚುನಾವಣಾ ಆಯೋಗದ ಅಧಿಕಾರಿಗಳಿಗೆ ತಲೆನೋವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನವೆಂಬರ್ 3ರ ಉಪ ಚುನಾವಣೆಗೆ ಮುನ್ನ ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶಗಳನ್ನು ಪತ್ತೆಹಚ್ಚುವ ಕೆಲಸ ಚುನಾವಣಾ ಆಯೋಗದ ಅಧಿಕಾರಿಗಳಿಗೆ ತಲೆನೋವಾಗಿದೆ.

ಚುನಾವಣೆ ಹೊತ್ತಿನಲ್ಲಿ ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಬಂದಿರುವ ದೂರುಗಳು ಅಷ್ಟಿಷ್ಟಲ್ಲ. ಇಂತಹ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಬಗ್ಗೆ ಗಮನ ಹರಿಸಲು ತಂಡವನ್ನು ರಚಿಸಲಾಗಿದ್ದು ಅದು ನೋಡಿಕೊಳ್ಳುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಆರ್ ಆರ್ ನಗರ, ಶಿರಾ ಕ್ಷೇತ್ರಗಳಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಆಯೋಜಿಸಿದ್ದರೂ ಕೂಡ ವರ್ಚುವಲ್ ಕ್ಯಾಂಪೇನ್ ಗಳಿಗೂ ಸಾಕಷ್ಟು ಒತ್ತು ನೀಡಲಾಗಿದೆ. ಕೋವಿಡ್-19 ಇರುವುದರಿಂದ ವರ್ಚುವಲ್ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಪೋಸ್ಟ್ ಗಳನ್ನು ಹಾಕಿದರೆ ಅವುಗಳನ್ನು ಗಮನಿಸಬಹುದು. ಆದರೆ ಹಲವು ಪ್ರಕರಣಗಳಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಂದೇಶ ಆಪ್ ಗಳಾದ ವಾಟ್ಸಾಪ್, ಇನ್ಸ್ಟಾಗ್ರಾಂಗಳನ್ನು ಬಳಸುತ್ತಾರೆ. ಅಲ್ಲಿ ಖಾಸಗಿ ಸಂವಹನಗಳನ್ನು ಉಸ್ತುವಾರಿ ಮಾಡುವುದು ಕಷ್ಟ. ಚುನಾವಣಾ ಆಯೋಗದ ಸಿ ವಿಜಿಲ್ ಆಪ್ ಇದ್ದು ಸಾರ್ವಜನಿಕರು ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಸಂಜೀವ್ ಕುಮಾರ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com