ರಾಜರಾಜೇಶ್ವರಿ ನಗರದಲ್ಲಿ ತಾರಾ ಮೆರುಗು: ಮುನಿರತ್ನ ಪರ ಸ್ಟಾರ್ ನಟ-ನಟಿಯರ ಅಬ್ಬರದ ಪ್ರಚಾರ, ರಂಗೇರಲಿದೆ ಮಿನಿ ಕುರುಕ್ಷೇತ್ರ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡ ರಂಗೇರುತ್ತಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಮತಯಾಚನೆ ಆರಂಭಿಸಿದ್ದು, ಈಗಾಗಲೇ ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಹಿ ಹಿರಿಯ ನಟಿ ಖುಷ್ಬೂ ಸುಂದರ್ ಅವರು ಪ್ರಚಾರ ನಡೆಸಿದ್ದಾರೆ. ಇದರಂತೆ ಮತ್ತಷ್ಟು ಸ್ಟಾರ್ ನಟ-ನಟಿಯರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡ ರಂಗೇರುತ್ತಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಮತಯಾಚನೆ ಆರಂಭಿಸಿದ್ದು, ಈಗಾಗಲೇ ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಹಿ ಹಿರಿಯ ನಟಿ ಖುಷ್ಬೂ ಸುಂದರ್ ಅವರು ಪ್ರಚಾರ ನಡೆಸಿದ್ದಾರೆ. ಇದರಂತೆ ಮತ್ತಷ್ಟು ಸ್ಟಾರ್ ನಟ-ನಟಿಯರು ಇಂದೂ ಕೂಡ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ. ಆದರೆ, ಉಳಿದ ಪಕ್ಷಗಳ ನಾಯಕರು ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸ್ಟಾರ್ ನಟರನ್ನು ಪ್ರಚಾರ ಕಾರ್ಯಕ್ಕಿಳಿಸಲು ಹಿಂದೇಟು ಹಾಕುತ್ತಿದ್ದಾರೆ. 

ಮುನಿರತ್ನ ಅವರು ಸಿನಿಮಾ ನಿರ್ಮಾಪಕರಾಗಿದ್ದು, ಕಳೆದ ಮಂಗಳವಾರ ನಟಿ ಶ್ರುತಿ ಅವರು ಮುನಿರತ್ನ ಪರ ಪ್ರಚಾರ ನಡೆಸಿದ್ದರು. ಬುಧವಾರ ನಟಿ ಖುಷ್ಬೂ ಅವರು ಪ್ರಚಾರ ನಡೆಸಿದ್ದರು. ಲಗ್ಗೆರೆಯಲ್ಲಿ ರೋಡ್ ಶೋದಲ್ಲಿ ಭಾಗಿಯಾಗುವ ಮೂಲಕ ಮತಯಾಚನೆ ಮಾಡಿದ್ದರು. ಶೀಘ್ರದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ. 

ಆರ್ ಆರ್ ನಗರದಲ್ಲಿ ಸ್ಟಾರ್ ನಟರ ನಿವಾಸಗಳಿದ್ದು, ಮಾಳವಿಕಾ ಅವಿನಾಶ್ ಗಣೇಶ್ ಸೇರಿದಂತೆ ಹಲವರ ಮನೆಗಳಿವೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಕೂಡ ಬಿಜೆಪಿ ಸದಸ್ಯರಾಗಿದ್ದಾರೆ. ಬಿಜೆಪಿಯಷ್ಟೇ ಅಲ್ಲದೆ ಕಾಂಗ್ರೆಸ್ ನಾಯಕರು ಕೂಡ ಪ್ರಚಾರಕ್ಕೆ ಸ್ಟಾರ್ ನಟರನ್ನು ಕರೆ ತರಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಸ್ಯಾಂಡಲ್'ವುಡ್'ನ ನಟರಾದ ನೆನಪಿರಲಿ ಪ್ರೇಮ್ ಹಾಗೂ ವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿ, ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಕೇಳಿದ್ದಾರೆ. 

ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಬಾರಿ ಪ್ರಚಾರಕ್ಕೆ ಅಷ್ಟಾಗಿ ಸ್ಟಾರ್ ನಟರನ್ನು ಆಹ್ವಾನಿಸಿಲ್ಲ. ಸ್ಟಾರ್ ನಟ ಹಾಗೂ ನಟಿಯನ್ನು ಕರೆದಿದ್ದೇ ಆದರೆ, ಜನರನ್ನು ನಿಭಾಯಿಸುವುದು ಕಷ್ಟಕರವಾಗಿರುತ್ತದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಜನರನ್ನು ಹೆಚ್ಚಾಗಿ ಸೇರಿಸುವ ಹಾಗಿಲ್ಲ ಎಂದು ಕೆಪಿಸಿಸಿ ಕಚೇರಿ ಮಾಹಿತಿ ನೀಡಿದೆ. 

ಇನ್ನು ಜೆಡಿಎಸ್ ಕೂಡ ಸ್ಟಾರ್ ನಟರನ್ನು ಕರೆಯಲು ಮನಸ್ಸು ಮಾಡಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿಯವರು ಪುತ್ರ ನಿಖಿಲ್ ಕುಮಾರಸ್ವಾಮಿಯವರೂ ಸ್ಯಾಂಡಲ್'ವುಡ್ ನಟರಾಗಿದ್ದು, ಅವರೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಂಗಳವಾರವಷ್ಟೇ ನಿಖಿಲ್ ಅವರು ರೋಡ್ ಶೋ ನಡೆಸಿದ್ದಾರೆ. 

ರಾಜರಾಜೇಶ್ವರಿ ನಗರದಲ್ಲಿ ಸ್ಟಾರ್ ನಟರು ಪ್ರಚಾರ ನಡೆಸುತ್ತಿದ್ದರೆ, ಶಿರಾದಲ್ಲಿ ಮಾತ್ರ ಈ ವರೆಗೂ ಯಾವುದೇ ಪಕ್ಷವೂ ಕೂಡ ಸ್ಟಾರ್ ನಟರನ್ನು ಆಹ್ವಾನಿಸಿಲ್ಲ.
 
ಪ್ರತೀ ಕ್ಷೇತ್ರವೂ ವಿಭಿನ್ನವಾಗಿದ್ದು, ರಾಜರಾಜೇಶ್ವರಿ ನಗರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಮುನಿರತ್ನ ಅವರು ಸಿನಿಮಾ ಹಿನ್ನೆಲೆಯುಳ್ಳವರಾಗಿದ್ದಾರೆ. ಈ ಹಿಂದೆ ಕೂಡ ಶಾಸಕರಾಗಿದ್ದಾರೆ. ಶಿರಾದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಡಾ.ರಾಜೇಶ್ ಗೌಡ ಅವರು ವೈದ್ಯಕೀಯ ಹಿನ್ನೆಲೆಯುಳ್ಳವರಾಗಿದ್ದಾರೆ. ಅಷ್ಟಾಗಿ ಜನರಿಗೆ ಪರಿಚಯ ಇರುವ ವ್ಯಕ್ತಿಯಲ್ಲ. ಇಲ್ಲಿ ಸ್ಟಾರ್ ನಟರನ್ನು ಪ್ರಚಾರಕ್ಕೆ ಕರೆಯುವುದು ಕೆಲಸಕ್ಕೆ ಬರುವುದಿಲ್ಲ. ನಮ್ಮ ಪಕ್ಷ ನಾಯಕರೇ ರಾಜೇಶ್ ಪರ ಪ್ರಚಾರ ನಡೆಸಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com