ಊಸರವಳ್ಳಿಯಂತೆ ಕುಮಾರಸ್ವಾಮಿ ಪದೇ ಪದೇ ಬಣ್ಣ ಬದಲಾಯಿಸುತ್ತಿರುತ್ತಾರೆ: ಕೃಷಿ ಸಚಿವ ಬಿಸಿ ಪಾಟೀಲ್ ಟೀಕೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಊಸರವಳ್ಳಿಯಂತೆ ಪದೇ ಪದೇ ಬಣ್ಣ ಬದಲಾಯಿಸುತ್ತಿರುತ್ತಾರೆ ಎಂದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದರು.
ಹೆಚ್ ಡಿ ಕುಮಾರಸ್ವಾಮಿ-ಬಿಸಿ ಪಾಟೀಲ್
ಹೆಚ್ ಡಿ ಕುಮಾರಸ್ವಾಮಿ-ಬಿಸಿ ಪಾಟೀಲ್

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಊಸರವಳ್ಳಿಯಂತೆ ಪದೇ ಪದೇ ಬಣ್ಣ ಬದಲಾಯಿಸುತ್ತಿರುತ್ತಾರೆ ಎಂದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದರು.

ಮದ್ದೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡ್ರಗ್ಸ್ ಮಾಫಿಯಾ ಹಣದಿಂದಲೇ ಮೈತ್ರಿ ಸರ್ಕಾರ ಪತನವಾಯಿತೆಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಊಸರವಳ್ಳಿಯಿದ್ದಂತೆ ಎಂದು ತಿರುಗೇಟು ನೀಡಿದರು.

ಒಂದುವರ್ಷ ಸುಮ್ಮನಿದ್ದಿದ್ದು ಏಕೆ? ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಿಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ ಎಂದು ಅವರು ಕಿಡಿಕಾರಿದರು.

ಕುಮಾರಸ್ವಾಮಿ ಆಗಾಗ ಊಸರವಳ್ಳಿಯಂತೆ ಪದೇ ಪದೇ ಬಣ್ಣ ಬದಲಾಯಿಸುತ್ತಿರುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ಅವರು, ಜವಾಬ್ದಾರಿಯಿಂದ ಮಾತನಾಡಬೇಕಾಗುತ್ತದೆ ಎಂದರು. ವಿಪಕ್ಷಗಳ ಊಹಾಪೋಹದ ಆರೋಪಗಳಿಗೆಲ್ಲ ಉತ್ತರಿಸಬೇಕಾಗಿಲ್ಲ. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರು ಯಾರೇ ಇರಲೀ ಸರ್ಕಾರ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿದೆ ಎಂದರು.

ಸ್ಯಾಂಡಲ್ ವುಡ್ ಈಗ ನಶೆವುಡ್ ಹಾಗೋಗಿದೆ. ಅದು ತಪ್ಪು, ಸ್ಯಾಂಡಲ್ ವುಡ್ ನಲ್ಲಿದವರೇಲ್ಲಾರು ಗಾಂಜಾ ಅಥವ ನಶೆಗೆ ಒಳಾಗಾದ್ರು ಅಂತಲ್ಲಾ. ಒಂದು ಕೊಡ ಹಾಲಿನಲ್ಲಿ ಒಂದು ಅಳ್ಳು ಉಪ್ಪು ಬಿದ್ರೆ ಹಾಲೆಲ್ಲಾ ಕೆಟ್ಟೋಗುತ್ತದೆ. ಸ್ಯಾಂಡಲ್ ವುಡ್ ಅಂದ್ರೆ ಸೆಲೆಬ್ರಿಟಿಸ್, ಇಲ್ಲಿರುವವರು ಸೆಲೆಬ್ರಿಟಿಗಳು. ಸಾಮಾನ್ಯ ಜನರು ತಪ್ಪು ಮಾಡುವುದಕ್ಕು ಸೆಲೆಬ್ರಿಟಿ ತಪ್ಪು ಮಾಡುವುದಕ್ಕು ವ್ಯತ್ಯಾಸ ಇದೆ ಎಂದರು. 

ಸೆಲೆಬ್ರಿಟಿ ಗಾಜಿನಮನೆಯಲ್ಲಿ ನಿಂತಿರತ್ತಾರೆ. ಗಾಜಿನ ಮನೆಯಲ್ಲಿ ಇದ್ದುಕೊಂಡು ಒಂದು ಸಣ್ಣ ತಪ್ಪು ಮಾಡಿದ್ರು ಜನರಿಗೆ ಕಾಣುತ್ತೆ. ಸ್ಯಾಂಡಲ್ ವುಡ್ ನಲ್ಲಿರುವ ಸ್ಟಾರ್ಸ್ ಸಾಮಾನ್ಯ ಜನರೆ. ಜನರು ನಮ್ಮ ನಡೆನುಡಿಗಳನ್ನ ಫಾಲೋ ಮಾಡ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಒಬ್ಬ ಸೆಲೆಬ್ರಿಟಿ ದಾರಿ ತಪ್ಪಿದ್ರೆ ಉಳಿದವರು ದಾರಿ ತಪ್ಪಿದಾಂತಾಗುತ್ತೆ ಎಂದರು.

ರಾಗಿಣಿ ನಂ 2 ಆರೋಪಿ. ಆರೋಪಿ ನಂ 1 ಬಗ್ಗೆ ಎಲ್ಲು ಹೇಳ್ತಿಲ್ಲಾ. ಕೇವಲ ಪ್ರಚಾರಕ್ಕೆ ಮಾತ್ರ ಮಾಡಬಾರದು. ಯಾರೇ ಇರಲಿ ಡ್ರಗ್ಸ್, ಗಾಂಜಾ ಸೇವನೆ ಮಾಡಿದವರು ಯಾರೇ ಇರಲಿ ಕಾನೂನಿಗಿಂದ ಯಾರು ದೊಡ್ಡವರಲ್ಲಾ. ಆ ದಂಧೆಯಲ್ಲಿ ಯಾರು ತೊಡಗಿದ್ದಾರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿ. ರಾಜಕಾರಣಿಗಳು, ರಾಜಕಾರಣಿ ಮಕ್ಕಳು,ಸಿನಿಮಾ ನಟರಾಗಲಿ, ಯಾರಿಗೂ ಮುಲಾಜಿಲ್ಲಾ. ನಿರ್ದಾಕ್ಷಿಣ್ಯವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಸಿಎಂ ಪುತ್ರ ವಿಜೇಂಯೇಂದ್ರ ಭ್ರಷ್ಟಾಚಾರದ ಆರೋಪ ವಿಚಾರವಾಗಿ ಅವೆಲ್ಲಾ ಸುಳ್ಳು. ವಿರೋಧ ಪಕ್ಷದವರು ಉಟ್ಟಿಸಿದ ವೂಹಾಪೋಹಾಗಳು. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲಾ ಎಂದರು.

ರಸಗೊಬ್ಬರವಾಗಲೀ ಯೂರಿಯಾದ ಕೊರತೆಯಾಗಲಿ ಇಲ್ಲ ರಸಗೊಬ್ಬರವಾಗಲೀ ಯೂರಿಯಾದ ಕೊರತೆಯಾಗಲಿ ಇಲ್ಲ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಅಂತವರ ವಿರುದ್ಧ ಕ್ರಮವನ್ನೂ ಜರುಗಿಸಿ ಪರವಾನಿಗೆ ರದ್ದುಮಾಡಲಾಗುತ್ತಿದೆ. ರೈತರಿಗಾಗಲೀ ಕೃಷಿ ಚಟುವಟಿಕೆಗಳಿಗಾಗಲೀ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಬಿತ್ತನೆಯಾಗಿದೆ. ಮಂಡ್ಯ ಸೇರಿದಂತೆ ಸುತ್ತಮುತ್ತಲ ಎಲ್ಲಾ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜೊತೆಗೂ ಪ್ರಗತಿಪರಿಶೀಲನಾ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com