ಉಸ್ತುವಾರಿಯಿಂದ ಕೈಬಿಟ್ಟಿರುವುದಕ್ಕೆ ಚಿಂತೆ ಇಲ್ಲ, ರಾಜ್ಯಸಭೆ ಪ್ರತಿಪಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ: ಖರ್ಗೆ

ಮಹಾರಾಷ್ಟ್ರ ಸರ್ಕಾರದ ಉಸ್ತುವಾರಿಯಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ತಮಗೇನೂ ಬೇಸರವಾಗಿಲ್ಲ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಮಹಾರಾಷ್ಟ್ರ ಸರ್ಕಾರದ ಉಸ್ತುವಾರಿಯಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ತಮಗೇನೂ ಬೇಸರವಾಗಿಲ್ಲ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅಲ್ಲದೇ ತಾವು ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಈ ಜವಾಬ್ದಾರಿಯನ್ನು ಇದೀಗ  ಗುಲಾಂ ನಭಿ ಅಜಾದ್ ನಿರ್ವಹಿಸುತ್ತಿದ್ದಾರೆ. ಈ ಕುರಿತು ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ತಮಗೆ ಜವಾಬ್ದಾರಿ ವಹಿಸುವ ಕುರಿತು ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ವರಿಷ್ಠರ ಯಾವುದೇ ನಿಲುವಿಗೆ ತಲೆ ಭಾಗುವುದಾಗಿ ಖರ್ಗೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿಯಿಂದ ತಮ್ಮನ್ನು ಕೈಬಿಟ್ಟಿದ್ದಾರೆಂಬ ವಿಚಾರದಲ್ಲಿ ತಮಗೆ ಬೇಸರವಿಲ್ಲ. ಎಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ. ಎಲ್ಲವೂ ನನಗೇ ಸಿಗಬೇಕೆಂಬ ದುರಾಸೆಯೂ ನನಗಿಲ್ಲ ಎಂದರು.

ನಾನು ಕಾಂಗ್ರೆಸ್ ಸಿದ್ಧಾಂತದಡಿ ಬದುಕುತ್ತಿರುವವನು. ನೆಹರು, ಅಂಬೇಡ್ಕರ್ ಸಾಮಾಜಿಕನ್ಯಾಯಕ್ಕೆ ಬದ್ಧನಾಗಿರುವ ವ್ಯಕ್ತಿ. ಪಕ್ಷವನ್ನು ಎಲ್ಲರೂ ಸೇರಿ ಮುನ್ನಡೆಸಬೇಕು ಎಂದು ಹೇಳಿದರು.

ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ತರಲು ಯಾರೇ ಮುಂದಾಗಲಿ ಅದಕ್ಕೆ ನನ್ನ ಒಪ್ಪಿಗೆಯೂ ಇದೆ. ನನಗೆ ಅವಕಾಶ ಸಿಗಲಿಲ್ಲ ಎಂದು ವ್ಯಥೆ ಪಟ್ಟವನು ನಾನಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಇರಬೇಕು. ಆ ದಿಕ್ಕಿನಲ್ಲಿಯೇ ಮುನ್ನಡೆದಿರುವವನು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com