'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140 ಸೀಟು ಗೆಲ್ಲಲಿದೆ: ಕಾಂಗ್ರೆಸ್ ಇನ್ನು 10 ವರ್ಷ ವಿರೋಧ ಪಕ್ಷದಲ್ಲಿರಲಿದೆ'

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 145 ರಿಂದ 150 ಸ್ಥಾನ ಗೆದ್ದು ಇನ್ನೂ 10 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರುವಂತೆ ಮಾಡುವುದು ನನ್ನ ಗುರಿ. ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140 ಸೀಟು ಗೆಲ್ಲಲಿದೆ: ಕಾಂಗ್ರೆಸ್ ಇನ್ನು 10 ವರ್ಷ ವಿರೋಧ ಪಕ್ಷದಲ್ಲಿರಲಿದೆ'

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 145 ರಿಂದ 150 ಸ್ಥಾನ ಗೆದ್ದು ಇನ್ನೂ 10 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರುವಂತೆ ಮಾಡುವುದು ನನ್ನ ಗುರಿ. ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಯಡಿಯೂರಪ್ಪ ಅವರು ಇನ್ನೂ ಹತ್ತು ವರ್ಷ ಕಾಂಗ್ರೆಸ್​ಗೆ ಅಧಿಕಾರ ಸಿಗದಂತೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುವಷ್ಟು ಭಾವುಕರಾದರು. ಮುಂಬರುವ ಉಪಚುನಾವಣೆಯಲ್ಲಿ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿ ಎಂದು ಸವಾಲು ಹಾಕಿದರು.

ಹಾಗೆಯೇ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು 135 ಸ್ಥಾನ ಗೆಲ್ಲುತ್ತೇವೆ. ಇನ್ನೂ 10 ವರ್ಷ ಅಧಿಕಾರದಲ್ಲಿರುತ್ತೇವೆ. ಕಾಂಗ್ರೆಸ್ ವಿಪಕ್ಷದಲ್ಲಿ ಸ್ಥಾನದಲ್ಲಿ ಇರಲೇಬೇಕು. ಇದನ್ನು ನಾನು ಮಾಡಿಯೇ ತೀರುತ್ತೇನೆ. ಇದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ನನ್ನ ಸವಾಲು ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಿಡಿಎ ವಸತಿ ಯೋಜನೆಯಲ್ಲಿ ನೀವು ಮಾಡಿರುವ ಆರೋಪ ಕುರಿತು ನೀವು ಸಿಬಿಐಗಾದರೂ ಹೋಗಿ, ಹೈಕೋರ್ಟ್‍ಗಾದರೂ ಹೋಗಿ, ಲೋಕಾಯುಕ್ತಕ್ಕಾದರೂ ಹೋಗಿ, ಆರೋಪದ ಬಗ್ಗೆ ಒಂದಂಶ ಸತ್ಯಾಂಶ ಇದ್ದರೂ ರಾಜೀನಾಮೆ ನೀಡುತ್ತೇನೆ. ಈ ಯೋಜನೆ ನನ್ನ ಪಾತ್ರ ಇಲ್ಲ.

ರಾತ್ರಿ 10 ಗಂಟೆಯ ನಂತರ ಸಚಿವ ಮಾಧುಸ್ವಾಮಿ ಮತ್ತು ಡಿಕೆ ಶಿವಕುಮಾರ್ ಮಧ್ಯೆ ವಾಗ್ಯುದ್ಧ ನಡೆಯಿತು. ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದಿದ್ದನ್ನು ಇಟ್ಟುಕೊಂಡು ಮಾಧುಸ್ವಾಮಿ ಕಿಚಾಯಿಸಿದರು. “ಏನ್ ಅಂಕಲ್, ಜೈಲಿಗೆ ಹೋಗಿ ಬಂದವರನ್ನ ಯಾಕೆ ಮೆರವಣಿಗೆ ಮಾಡುತ್ತಿದ್ದಾರೆ ಅಂತ ನಂಗೆ ಒಬ್ಬ ಹುಡುಗ ಕೇಳಿದ. ಹೌದಪ್ಪ, ಕೆಲವರಿಗೆ ಹಾಗೇ ಇರುತ್ತೆ ಅಂತ ನಾನು ಅವನಿಗೆ ಹೇಳಿದೆ” ಎಂದು ಡಿಕೆ ಶಿವಕುಮಾರ್ ಹೆಸರತ್ತೆದೆಯೇ ಮಾಧುಸ್ವಾಮಿ ಕುಟುಕಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ನಿಮ್ಮ ನಾಯಕರು ಜೈಲಿಗೆ ಹೋಗಿ ಬಂದಿದ್ದನ್ನು ಯಾಕೆ ಮಾತನಾಡುತ್ತಿಲ್ಲ ಎಂದರು ಪ್ರಶ್ನಿಸಿದರು. ಅದಕ್ಕೆಲ್ಲಾ ನೀವೇ ಕಾರಣ ಎಂದು ಸಚಿವರು ತಿರುಗೇಟು ನೀಡಿದರು.

ಲೋಕಸಭೆಯಲ್ಲಿ ನೀವು ಗೆದ್ದಿರುವುದು ಎಷ್ಟು. ರಾಜ್ಯದಲ್ಲಿ 25ರಲ್ಲಿ ಬಿಜೆಪಿ ಗೆದ್ದಿದೆ. ವಿಧಾನಸಭೆಯಲ್ಲಿ 15ರಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಜನರ ವಿಶ್ವಾಸ ಇಲ್ಲದೆ ಗೆದ್ದಿದ್ದೇವೆ. ಉತ್ತಮ ಮಳೆಯಾಗಿದೆ. ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿದ್ದೇವೆ. ಎಲ್ಲಾ ವರ್ಗದ ಜನ ನಮ್ಮ ಜೊತೆಯಲ್ಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com