ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಚಿಂತನೆ: ಸಂದರ್ಶನದಲ್ಲಿ ಮಾಜಿ ಸಚಿವ ಕೃಷ್ಣ ಬೈರೇಗೌಡ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದಾದ್ಯಂತ ಚುನಾವಣೆ ನಡೆಸಲು ಚಿಂತನೆಗಳು ನಡೆಯುತ್ತಿವೆ ಎಂದು ಎಐಸಿಸಿ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಸದಸ್ಯ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ. 
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದಾದ್ಯಂತ ಚುನಾವಣೆ ನಡೆಸಲು ಚಿಂತನೆಗಳು ನಡೆಯುತ್ತಿವೆ ಎಂದು ಎಐಸಿಸಿ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಸದಸ್ಯ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಈ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ಸಭೆಗಳು ನಡೆಯಲಿವೆ ಎಂದು ಹೇಳಿದ್ದಾರೆ. 

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದೀರಿ. ಆದರೆ, ವಿಭಜನೆಗೆ ಮುಂದಾಗುತ್ತಿದ್ದೀರೆಂದು ನಿಮಗೆ ಎನಿಸುತ್ತಿಲ್ಲವೆ? 
ಸದನದಲ್ಲಿ ಸಾಕಷ್ಟು ಜನರು ಸೋಂಕಿಗೊಳಗಾಗಿದ್ದಾರೆ. ಮತ ವಿಭಜನೆ ಮಾಡಿದ್ದೇ ಆದರೆ, ಸದಸ್ಯರು ಸದನಕ್ಕೆ ಬರಲೇಬೇಕಿರುತ್ತದೆ. ಇದು ಸರಿಯಲ್ಲ. ಹೀಗಾಗಿ ನಾವು ಮಾಡಬೇಕಾದದ್ದನ್ನು ನಾವು ಮಾಡಿದೆವು. 

ನಿಮ್ಮನ್ನು ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದರಲ್ಲಿ ಯಾವ ವ್ಯತ್ಯಾಸವನ್ನು ಕಾಣತ್ತಿದ್ದೀರಿ? 
ಶೇ.50ರಷ್ಟು ಹೊಸ ಮುಖಗಳನ್ನು ನೋಡುತ್ತಿದ್ದೇನೆ. ಪಕ್ಷಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರ ನೇಮಕ ಮಾಡಲು ಸೋನಿಯಾ ಗಾಂಧಿಯವರು ಕೆಲಸ ಮಾಡುತ್ತಿದ್ದಾರೆ. ಚುನಾವಣೆ ನಡೆಸುವ ಜವಾಬ್ದಾರಿ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರಕ್ಕೆ ಇದೆ. ಅಕ್ಟೋಬರ್ ಮೊದಲ ವಾರದಲ್ಲಿ ಈ ಕುರಿತು ಸಭೆ ನಡೆಯಲಿದ್ದು, ಸಭೆಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಿದ್ದೇವೆ. ದೇಶದಾದ್ಯಂತ ಮತದಾನ ನಡೆಸಲು ಚಿಂತನೆಗಳೂ ನಡೆಯುತ್ತಿವೆ. 

ಸಾಲದ ಹೊರೆ ಹೆಚ್ಚಾದಂತೆ ರಾಜ್ಯ ಸರ್ಕಾರ ಮತ್ತಷ್ಟು ಸಾಲ ಪಡೆಯಬಾರದು ಎಂದು ನೀವು ಹೇಳಿದ್ದೀರಿ...?
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ರೂ. 46,000 ಕೋಟಿ ಸಾಲ ಮಾಡುವ ಪ್ರಸ್ತಾಪವಿಟ್ಟಿತ್ತು. ಇದೀಗ  ಹೆಚ್ಚುವರಿಯಾಗಿ ರೂ.33,000-44,000 ಕೋಟಿಗಳ ಸಾಲ ಪಡೆಯಲು ಬಯಸುತ್ತಿದೆ. ಇದರಿಂದ ಒಟ್ಟು ರೂ.90,000 ಕೋಟಿ ಸಾಲದ ಹೊರೆಯಾಗಲಿದೆ. ರೂ.30,000 ಕೋಟಿ ಪಡೆಯುವುದು ಸರಿ. ಅದು ನಮ್ಮ ಹಕ್ಕೂ ಕೂಡ ಹೌದು. ಸಾಲ ಪಡೆಯಬೇಕು. ಇದರಿಂದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಸಹಾಯಕವಾಗುತ್ತದೆ. 

ಚುನಾವಣಾ ವೇಳೆ ಬಿಡುಗಡೆ ಮಾಡಲಾಗಿದ್ದ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಕೂಡ ಕೃಷಿ ವಲಯ ಸುಧಾರಣೆ ಮಾಡುವುದಾಗಿ ತಿಳಿಸಲಾಗಿತ್ತು. ಇದೀಗ ಪಕ್ಷ ಪ್ರತಿಭಟಿಸುತ್ತಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು? 
ಸುಧಾರಣೆಗಳು ಅಗತ್ಯಗಳನ್ನು ಎಂದು ಕಾಂಗ್ರೆಸ್ ಅರ್ಥಮಾಡಿಕೊಂಡಿದೆ. ಇದು ಸುಧಾರಣೆಯಲ್ಲ, ಆದರೆ ಈ ವಲಯವನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಹಸ್ತಾಂತರಿಸುವುದಾಗಿದೆ. ಕೃಷಿ ಮಾರುಕಟ್ಟೆಯಲ್ಲಿ ಖಾಸಗಿಯವರು ಹೆಚ್ಚಿನ ಪ್ರಾಬಲ್ಯ ಸಾಧಿಸುವಂತೆ ಮಾಡುತ್ತದೆ ಎಂದು ಈಗಾಗಲೇ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಮಸೂದೆಯ ಸಾಧಕ ಹಾಗೂ ಬಾಧಕಗಳನ್ನು ಪೂರ್ಣ ಪ್ರಮಾಣದಲ್ಲಿ ಅರ್ಥಮಾಡಿಕೊಳ್ಳದೆ ಸರ್ಕಾರ ಮುಂದಕ್ಕೆ ಸಾಗುತ್ತಿದೆ. 

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೃಷಿಗೆ ಸಂಬಂಧಿಸಿದ ಸೆಕ್ಷನ್ 79 ಎ ಅನ್ನು ತಿದ್ದುಪಡಿ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ನಾನು ಕೃಷಿ ಸಚಿವನಾಗಿದ್ದಾಗ ಕೃಷಿಯೇತರ ಆದಾಯವನ್ನು 2 ಲಕ್ಷ ರೂ.ನಿಂದ 25 ಲಕ್ಷಕ್ಕೆ ಹೆಚ್ಚಿಸಲು ಮಾತ್ರ ನಿರ್ಧರಿಸಿದ್ದೆವು. ಆಗ ಬಿಜೆಪಿ ಪ್ರತಿಭಟಿಸಿ, ಇದು "ಭೂ ಸುಧಾರಣೆಗಳ ಸಾವು ಮತ್ತು ಕರ್ನಾಟಕ ರೈತರನ್ನು ಅಂತ್ಯಗೊಳಿಸುತ್ತದೆ ಎಂದು ಹೇಳಿದ್ದರು. ನಾವು ಎಂದಿಗೂ ಕೃಷಿಕರಲ್ಲದವರಿಗೆ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com