‘ಬಿಜೆಪಿ ಹಠಾವೋ’ ಅಭಿಯಾನಕ್ಕೆ ಚಾಲನೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಗುಡುಗು

ಬಿಜೆಪಿ ಹಠಾವೋ’ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಂಗಳವಾರ ತೀವ್ರವಾಗಿ ಕಿಡಿಕಾರಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಮೈಸೂರು: ‘ಬಿಜೆಪಿ ಹಠಾವೋ’ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಂಗಳವಾರ ತೀವ್ರವಾಗಿ ಕಿಡಿಕಾರಿದರು.

137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಇತಿಹಾಸ ಮತ್ತು ದೇಶಕ್ಕೆ ಪಕ್ಷಗಳ ಕೊಡುಗೆಯನ್ನು ವಿಶ್ಲೇಷಿಸಲು ಜನಸಾಮಾನ್ಯರಿಗೆ ಶಿಕ್ಷಣ ನೀಡಬೇಕು ಎಂದು ಕಾಂಗ್ರೆಸ್ಸಿಗರಿಗೆ ಕರೆ ನೀಡಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬಡವರಿಗಾಗಿ ಬ್ಯಾಂಕ್‌ಗಳನ್ನು ತೆರೆದರು. ಆದರೆ, ಬಿಜೆಪಿ ಅವುಗಳನ್ನು ಮುಚ್ಚಲು ಬಯಸಿದೆ ಮತ್ತು ಪಕ್ಷದ ನೋಟು ನಿಷೇಧ ಮತ್ತು ಜಿಎಸ್‌ಟಿಯ ಪರಿಚಯದಂತಹ ಆತುರದ ನಿರ್ಧಾರಗಳಿಂದ ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜನವಿರೋಧಿ ನೀತಿಗಳಿಂದಾಗಿ ನಿರುದ್ಯೋಗ, ಬಡತನ, ಬೆಲೆ ಏರಿಕೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ. ಕೇಂದ್ರ ಸರ್ಕಾರವು ರೈತ ಸಮುದಾಯವನ್ನು ನಾಶಮಾಡುವ ಕೃಷಿ ಕಾನೂನುಗಳನ್ನು ತರಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ 2021 ರಲ್ಲಿ ಕರ್ನಾಟಕವು ಸತತ ನಾಲ್ಕು ಬಾರಿ ಪ್ರವಾಹಕ್ಕೆ ತುತ್ತಾಗಿದ್ದನ್ನು ಸ್ಮರಿಸಿದ ಅವರು, ಪ್ರವಾಹದಿಂದ ನಷ್ಟದಲ್ಲಿರುವವರಿಗೇ ಇನ್ನೂ ಸರ್ಕಾರ ಪರಿಹಾರವನ್ನು ನೀಡಿಲ್ಲ. ಆದರೂ, ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾ ಜಾಹೀರಾತುಗಳನ್ನು ಹೊರ ತರುತ್ತಿದೆ. ಕಾಂಗ್ರೆಸ್ ಸಿದ್ಧಾಂತವು ಜನಪರವಾಗಿದ್ದು, ಆರ್‌ಎಸ್‌ಎಸ್ ಜನವಿರೋಧಿಯಾಗಿದೆ. ಸಂವಿಧಾನವನ್ನು ವಿರೋಧಿಸುವ ಮತ್ತು ಅಸಮಾನತೆಯನ್ನು ಪೋಷಿಸುವ ಅಜೆಂಡಾವನ್ನು ಅದು ಹೊಂದಿದೆ. ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿಲ್ಲದಿದ್ದರೂ, ಇದೀಗ ದೇಶಭಕ್ತಿ ಮತ್ತು ಇತಿಹಾಸದ ಕುರಿತು ಬೋಧನೆ ಮಾಡುತ್ತಿದೆ ಎಂದಿದ್ದಾರೆ.

ಇದೇ ವೇಳೆ ಉದ್ಯೋಗ ಖಾತ್ರಿ ಯೋಜನೆ ಮತ್ತು ಶಿಕ್ಷಣದ ಹಕ್ಕನ್ನು ತಂದಿದ್ದಕ್ಕಾಗಿ ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com