ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ವೈಎಸ್ ವಿ ದತ್ತಾ ಆಕ್ಷೇಪ; ಭಾಷಾ ಪ್ರಯೋಗದ ಪಾಠ!

ಕೆ ಆರ್ ಎಸ್ ಡ್ಯಾಂಗೆ ಸಂಸದೆ ಸುಮಲತಾ ಅವರನ್ನು ಅಡ್ಡಡ್ಡ ಮಲಗಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಜೆಡಿಎಸ್ ಮುಖಂಡ ವೈ.ಸಿ.ವಿ.ದತ್ತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೈಎಸ್ ವಿ ದತ್ತಾ
ವೈಎಸ್ ವಿ ದತ್ತಾ
Updated on

ಬೆಂಗಳೂರು: ಕೆ ಆರ್ ಎಸ್ ಡ್ಯಾಂಗೆ ಸಂಸದೆ ಸುಮಲತಾ ಅವರನ್ನು ಅಡ್ಡಡ್ಡ ಮಲಗಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಜೆಡಿಎಸ್ ಮುಖಂಡ ವೈ.ಸಿ.ವಿ.ದತ್ತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಶ್ರೀಮಂತ ಭಾಷೆ, ಕನ್ನಡದಲ್ಲಿ ಸಾಕಷ್ಟು ಪದಗಳು ಇವೆ. ಒಳ್ಳೊಳ್ಳೆ ಪದಗಳನ್ನು ಬಳಸಿ ರಾಜಕಾರಣದಲ್ಲಿ ಟೀಕೆ ಮಾಡಲು ಅವಕಾಶವಿದೆ. ಆದರೂ, ಕುಮಾರಸ್ವಾಮಿ ಅವರು ಈ ರೀತಿಯ ಹೇಳಿಕೆ ನೀಡಿದ್ದಕ್ಕೆ ತಮ್ಮ ಆಕ್ಷೇಪವಿದೆ ಎಂದಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಎಲ್ಲ ರಾಜಕಾರಣಿಗಳು ಇದೇ ತರಹದ ಹೇಳಿಕೆಗಳನ್ನು ನೀಡುತ್ತಿರುವುದು ಸರಿಕಾಣುವುದಿಲ್ಲ, ಉತ್ತಮ ಭಾಷಾ ಪ್ರಯೋಗದಿಂದ ಎಲ್ಲಾ ರಾಜಕಾರಣಿಗಳು ಮಾದರಿಯಾಗಬೇಕೇ ಹೊರತು ಟೇಕೆಗಾಗಿ ಏನೇನೋ ಪದಗಳನ್ನು ಬಳಸುವುದಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com