ಮುಖ್ಯಮಂತ್ರಿ ಬದಲಾವಣೆ ವಿಚಾರ: ಶಿವಮೊಗ್ಗ ನಾಯಕರು ಮೌನಕ್ಕೆ ಶರಣು!

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಚರ್ಚೆಗಳು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲಾ ಬಿಜೆಪಿ ಹಿರಿಯ ನಾಯಕರು ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಯಡಿಯೂರಪ್ಪ
ಯಡಿಯೂರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಚರ್ಚೆಗಳು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲಾ ಬಿಜೆಪಿ ಹಿರಿಯ ನಾಯಕರು ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಬಿಎಸ್ ಯಡಿಯೂರಪ್ಪ ಅವರು ಕೇಂದ್ರ ನಾಯಕರ ಆಣತಿಯಂತೆ ಮುಂದಿನ ನಿರ್ಧಾರ ಮಾಡಲಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.

ಆದರೆ ಇದಕ್ಕು ಮೊದಲು ಮಾತನಾಡಿದ್ದ ರಾಘವೇಂದ್ರ ನಾಯಕತ್ವ ಬದಲಾವಣೆ ಕೇವಲ ವದಂತಿ ಎಂದು ಹೇಳಿದ್ದರು. ಸಿಎಂ ತವರು ಜಿಲ್ಲೆ ಶಿಕಾರಿಪುರದ ಮನೆಯಲ್ಲಿಯೂ ಬೇಸರದ ವಾತಾವರಣವಿತ್ತು. ಇದರ ಮಧ್ಯೆ ಸಂಸದ ರಾಘವೇಂದ್ರ ಜುಲೈ 24 ರಂದು ಆಯೋಜಿಸಿರುವ 1,700 ಕೋಟಿ ರು ವೆಚ್ಚದ ಯೋಜನೆಯ ಶಂಕು ಸ್ಥಾಪನೆ  ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿಕೊಂಡಿದ್ದರು.

ಇದರ ಜೊತೆಗೆ ಗ್ರಾಮೀಣಭಾವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಮೌನಕ್ಕೆ ಶರಣಾಗಿದ್ದಾರೆ.  ಕೇಂದ್ರ ಬಿಜೆಪಿ ನಾಯಕ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಇತ್ತೀಚೆಗೆ ಈಶ್ವರಪ್ಪ ಹೇಳಿದ್ದರು. 

ಯತ್ನಾಳ್ ಸೇರಿದಂತ ಎಲ್ಲಾ ನಾಯಕರು ಮೌನವಾಗಿರಬೇಕು ಇದು ರಾಜ್ಯಕ್ಕೂ ಕೂಡ ಒಳ್ಳೆಯದು ಎಂದು ಹೇಳಿದ್ದರು. ಎಂಎಲ್ ಸಿ ಮತ್ತು ಉದ್ಯಮಿ ರುದ್ರೇಗೌಡ ಮಾತನಾಡಿ, ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

ಯಡಿಯೂರಪ್ಪ ಅವಧಿಯಲ್ಲಿ ಜಿಲ್ಲೆ ಹೆಚ್ಚಿನ ಅಭಿವೃದ್ಧಿಯಾಗಿದೆ ಎಂದು ಶಿವಮೊಗ್ಗ ಕಾಂಗ್ರೆಸ್ ನಾಯಕರು ಅಬಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಯಡಿಯೂರಪ್ಪ ನವರು ಸಿಎಂ ಆಗಿ ಮುಂದುವರಿದರೇ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣಲಿದೆ  ಎಂದು ಮಾಜಿ ಕಾಂಗ್ರೆಸ್ ಶಾಸಕ ಕೆಬಿ ಪ್ರಸನ್ನ ಕುಮಾರ್ ಹೇಳಿದ್ದಾರೆ, ತತ್ವ ಸಿದ್ಧರಾಂತದಲ್ಲಿ ನಮ್ಮಗಳ ನಡುವೆ ಭಿನ್ನಾಭಿಪ್ರಾಯವಿದೆ.ಆದರೆ ಯಡಿಯೂರಪ್ಪ ಅವರು ಸಿಎಂ ಆದಾಗಿನಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com