ಬಿಎಸ್ ವೈಗೆ ವಯಸ್ಸಾಗಿಲ್ಲ, ಅವರಿಗೆ ಮದುವೆ ಮಾಡಿದ್ರೆ ಇಬ್ಬರು ಮಕ್ಕಳಾಗ್ತಾರೆ, ಜನತೆ ಈ ರಾಜೀನಾಮೆ ಸಹಿಸಲ್ಲ: ಸಿ.ಎಂ ಇಬ್ರಾಹಿಂ
ಬೆಂಗಳೂರು: ಯಡಿಯೂರಪ್ಪ ಅವರ ರಾಜೀನಾಮೆ ಕುರಿತು ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ಈ ಬದಲಾವಣೆಯನ್ನು ರಾಜ್ಯದ ಆರುವರೆ ಕೋಟಿ ಮಂದಿ ಸಹಿಸಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಒತ್ತಡ ಹಾಕಿ ರಾಜೀನಾಮೆ ಪಡೆಯೋದು ಸರಿಯಲ್ಲ ಎಂದು ಹೇಳಿರುವ ಸಿಎಂ ಇಬ್ರಾಹಿಂ, ಕೇರಳದಲ್ಲಿ 80 ವರ್ಷದ ವೃದ್ಧ ಶ್ರೀಧರನ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಗೆ 75 ವರ್ಷ ಆಗಿದೆ ಎಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿಲ್ಲ. ಮದುವೆ ಮಾಡಿದ್ರೆ ಇಬ್ಬರು ಮಕ್ಕಳಾಗ್ತಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದಿರುವುದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಜೂನ್-ಜುಲೈ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಎಂದು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಕೇಶವಕೃಪಾಕ್ಕೂ, ಬಸವಕೃಪಾಕ್ಕೂ ಹೊಂದಾಣಿಕೆ ಇಲ್ಲ ಎಂಬುದು ತಿಳಿದಿದೆ. ಆದರೆ ವಯಸ್ಸಿನ ಕಾರಣ ನೀಡಿ ರಾಜೀನಾಮೆ ಪಡೆದಿದ್ದು ಸರಿಯಲ್ಲ ಯಡಿಯೂರಪ್ಪ ಅವರು ಲವಲವಿಕೆಯಿಂದ ಇದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ