ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಭೇಟಿ ಮರ್ಮವೇನು? ನಾಯಕತ್ವ ಬದಲಾವಣೆ ಚರ್ಚೆ, ವರಿಷ್ಠರ ಭೇಟಿ ಸಾಧ್ಯತೆ?

ಎರಡು ದಿನಗಳ ಹಿಂದೆ ಮಾಧ್ಯಮಗಳ ಎದುರು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದರು.
ಅರವಿಂದ್ ಬೆಲ್ಲದ್
ಅರವಿಂದ್ ಬೆಲ್ಲದ್

ಬೆಂಗಳೂರು: ಎರಡು ದಿನಗಳ ಹಿಂದೆ ಮಾಧ್ಯಮಗಳ ಎದುರು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದರು. ಇನ್ನೇನು ನಾಯಕತ್ವ ಬದಲಾವಣೆ ವಿಷಯ ತಣ್ಣಗಾಯಿತು ಅನ್ನುವಷ್ಟರಲ್ಲಿ ಯಡಿಯೂರಪ್ಪ ವಿರೋಧಿ ಬಣ ಆಕ್ಟೀವ್​ ಆಗಿದೆ. 

ದೆಹಲಿಯಲ್ಲಿ ವರಿಷ್ಠ ಭೇಟಿಗೆ ಮುಂದಾಗಿರುವುದು ಮತ್ತೆ ನಾಯಕತ್ವ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಶುಕ್ರವಾರ ತಡರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಗೆ ದೌಡಾಯಿಸಿದ್ದಾರೆ.

ಅರವಿಂದ ಬೆಲ್ಲದ್ ಅವರು ಸಚಿವ ಸಿ.ಪಿ. ಯೋಗೇಶ್ವರ್ ಅವರೊಂದಿಗೆ ಮೇ ಮೂರನೇ ವಾರ ದೆಹಲಿಗೆ ಬಂದಿದ್ದರು. ಆಗ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಬೇಕೆಂಬ ಅವರ ಪ್ರಯತ್ನಗಳು ಫಲಿಸಿರಲಿಲ್ಲ ಎನ್ನಲಾಗಿತ್ತು.

ಇದೀಗ ಬೆಲ್ಲದ್ ಅವರೊಂದಿಗೆ ಯೋಗೇಶ್ವರ್ ಹಾಗೂ ಇತರ‌ ಕೆಲವು ಸಮಾನ‌ ಮನಸ್ಕ ಶಾಸಕರೂ ದೆಹಲಿಗೆ ಬಂದಿದ್ದಾರೆ ಎನ್ನಲಾಗಿದ್ದು, ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಚರ್ಚೆಗಾಗಿ ಮತ್ತೆ ವರಿಷ್ಠರ ಭೇಟಿಗೆ ಸಮಯಾವಕಾಶ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಹೈಕಮಾಂಡ್ ಮೇಲೆ ಒತ್ತಡ ಹೇರಲು ದೆಹಲಿಗೆ ಶಾಸಕ ಅರವಿಂದ ಬೆಲ್ಲದ್ ಭೇಟಿ ನೀಡಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಹೆಚ್ಚುತ್ತಿರುವ ಒತ್ತಡ ಹಾಕಲು ತೆರಳಿದ್ದಾರೆ ಎನ್ನಲಾಗುತ್ತಿದೆ. 

ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗಾಗಿ ದೆಹಲಿಗೆ ಆಗಮಿಸಿರುವ ಅರವಿಂದ ಬೆಲ್ಲದ್ ಭೇಟಿಗೆ ಅವಕಾಶವನ್ನು ಕೇಳಿದ್ದಾರೆ. ಭೇಟಿ ವೇಳೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಅರವಿಂದ ಬೆಲ್ಲದ್ ಒತ್ತಾಯಿಸಲಿದ್ದಾರೆ. ವಾಸ್ತವ ಅರಿಯಲು ಶಾಸಕಾಂಗ ಪಕ್ಷದ ಸಭೆಯೇ ಸೂಕ್ತ ವೇದಿಕೆ. ಶಾಸಕರ ನಿಜವಾದ ಅಭಿಪ್ರಾಯ ತಿಳಿದು ಮುಂದಿನ‌ ಕ್ರಮ ಕೈಗೊಳ್ಳಿ. ಈ ಹಿನ್ನಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚೆ ಮಾಡಿ ಎಂದು ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com