ಕರ್ನಾಟಕ ಎಂಎಲ್ ಸಿ ಚುನಾವಣೆ: ಸ್ಪರ್ಧಿಸಲು ಅಭ್ಯರ್ಥಿಗೆ ಬೇಕು 20 ರಿಂದ 30 ಕೋಟಿ ರೂ.!

ರಾಜ್ಯದಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ರಾಜಕೀಯ ಪಕ್ಷಗಳಿಗೆ ಹಣದ ಬಲ ಹೆಚ್ಚಿನ ಅವಶ್ಯಕತೆಯಿದ್ದು, ಚುನಾವಣೆಯಲ್ಲಿ ಗೆಲಲ್ಲು ಅಭ್ಯರ್ಥಿಗಳಿಗೆ ರೂ.20-30 ಕೋಟಿ ಅಗತ್ಯವಿರುವ ಹಿನ್ನೆಲೆಯಲ್ಲಿ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗಾಗಿ ಹುಡಾಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಭಾನುವಾರ ಬೆಳಗಾವಿಯಲ್ಲಿ ನಡೆದ ಜನಸ್ವರಾಜ್ ಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಬೆಳಗಾವಿಯ ಎಂಎಲ್‌ಸಿ ಚುನಾವಣೆಗೆ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಅಭಿನಂದಿಸಿದರು.
ಭಾನುವಾರ ಬೆಳಗಾವಿಯಲ್ಲಿ ನಡೆದ ಜನಸ್ವರಾಜ್ ಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಬೆಳಗಾವಿಯ ಎಂಎಲ್‌ಸಿ ಚುನಾವಣೆಗೆ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಅಭಿನಂದಿಸಿದರು.
Updated on

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ರಾಜಕೀಯ ಪಕ್ಷಗಳಿಗೆ ಹಣದ ಬಲ ಹೆಚ್ಚಿನ ಅವಶ್ಯಕತೆಯಿದ್ದು, ಚುನಾವಣೆಯಲ್ಲಿ ಗೆಲಲ್ಲು ಅಭ್ಯರ್ಥಿಗಳಿಗೆ ರೂ.20-30 ಕೋಟಿ ಅಗತ್ಯವಿರುವ ಹಿನ್ನೆಲೆಯಲ್ಲಿ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗಾಗಿ ಹುಡಾಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಪಕ್ಷಗಳು ಪ್ರಕಟಿಸುವ ಪಟ್ಟಿಯಲ್ಲಿ ಅಭ್ಯರ್ಥಿಗಳು ಶ್ರೀಮಂತ ಅಥವಾ ರಿಯಲ್ ಎಸ್ಟೇಟ್ ಉದ್ಯಮಿಗಳೇ ಇರುವುದು ಇದಕ್ಕೆ ಸಾಕ್ಷ್ಯವಾಗಿದೆ.

ಚುನಾವಣೆಗೆ ಹಣ ಅತ್ಯಂತ ಮುಖ್ಯವಾಗಿದ್ದು, ಹೆಚ್ಚು ಹಣವನ್ನು ವ್ಯಯಿಸುವವರ ಕುರಿತು ಸಭೆ ನಡೆಸುತ್ತಿರುವ ನಾಯಕರು, ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಪ್ರತೀ ಮತಕ್ಕೆ ರೂ.15,000-20,000 ಎಂದು ನಿಗದಿಪಡಿಸಲಾಗಿದೆ. ಸ್ಪರ್ಧಿಸುವ ಪ್ರತೀ ಅಭ್ಯರ್ಥಿಗೆ 20ರಿಂದ 30 ಕೋಟಿ ರೂಪಾಯಿ ಅಗತ್ಯವಿದ್ದು, ಶೇ.80-90ರಷ್ಟು ಮತದಾರರು ಗ್ರಾಮಪಂಚಾಯಿತಿ ಸದಸ್ಯರೇ ಆಗಿದ್ದಾರೆಂದು ಮೂಲಗಳು ತಿಳಿಸಿವೆ.

ಈ ನಡುವೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಣವನ್ನು ಮರಳಿ ಯಾವ ರೀತಿ ಗಳಿಸುತ್ತಾರೆ, ಆಡಳಿತಾರೂಢ ಪಕ್ಷದ ಮೇಲೆ ಒತ್ತಡ ಹೇರಲಿದ್ದಾರೆಯೇ ಎಂಬ ಪ್ರಶ್ನೆಗಳೂ ಮೂಡತೊಡಗಿವೆ.

ರಾಜಕೀಯದಲ್ಲಿ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿರುವ ಮಾಜಿ ಐಐಎಂ ಡೀನ್ ಪ್ರೊಫೆಸರ್ ಹಾಗೂ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಅಧ್ಯಕ್ಷ ತ್ರಿಲೋಚನ್ ಶಾಸ್ತ್ರಿ ಅವರು ಮಾತನಾಡಿ, ಪಕ್ಷಗಳು ಬುದ್ಧಿವಂತ, ಅರ್ಹತೆಯುಳ್ಳ ಮತ್ತು ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ಹೊಂದಿರುವ ಜನರನ್ನು ಹುಡುಕಬೇಕು. ಅಭ್ಯರ್ಥಿಗಳ ಆಯ್ಕೆಯಲ್ಲಿ ಸಂಪತ್ತೊಂದೇ ಏಕೈಕ ವಿಧಾನವಾಗಬಾರದು ಎಂದು ಹೇಳಿದ್ದಾರೆ.

ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ಕೋಟ್ಯಾಧಿಪತಿಗಳಾಗಿರುತ್ತಾರೆ. ಅಧಿಕಾರಕ್ಕೆ ಬರಲು ಇಚ್ಛಿಸುವ ಶ್ರೀಮಂತರು ಇದನ್ನು ಅಡ್ಡದಾರಿ ಮಾಡಿಕೊಂಡಿದ್ದಾರೆ. ಈ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಉಡುಗೊರೆಗಳನ್ನು ಅಡೆತಡೆಯಿಲ್ಲದೆ ನೀಡಲಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅತಿ ಹೆಚ್ಚು ಲಾಭ ಗಳಿಸಬಹುದು ಮತ್ತು ಅವರ ಸಂಖ್ಯೆಯು 40 ಅಂಕಗಳನ್ನು ದಾಟಬಹುದು, 75 ಸದಸ್ಯರ ಸದನದಲ್ಲಿ ಅವರಿಗೆ ಬಹುಮತವನ್ನು ನೀಡುತ್ತದೆ.

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ಕೋಟ್ಯಾಧಿಪತಿಗಳ ಪ್ರತ್ಯೇಕ ಗುಂಪು. ಅತ್ಯಂತ ಶ್ರೀಮಂತರು ಇದನ್ನು ಅಧಿಕಾರಕ್ಕೆ ಶಾರ್ಟ್‌ಕಟ್‌ ಎಂದು ನೋಡುತ್ತಾರೆ. ಈ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಉಡುಗೊರೆಗಳನ್ನು ಅಡೆತಡೆಯಿಲ್ಲದೆ ಹರಿಯಬಿಡಲಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅತಿ ಹೆಚ್ಚು ಲಾಭ ಗಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com